ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

1 ತಿಮೊಥೆಯ 2:1-15

2  ಆದುದರಿಂದ, ಮೊದಲು ಎಲ್ಲ ರೀತಿಯ ಮನುಷ್ಯರಿಗೋಸ್ಕರ ಯಾಚನೆಗಳನ್ನೂ ಪ್ರಾರ್ಥನೆಗಳನ್ನೂ ಬಿನ್ನಹಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ನಾನು ಪ್ರಬೋಧಿಸುತ್ತೇನೆ.  ನಾವು ಸಂಪೂರ್ಣ ದೇವಭಕ್ತಿ ಮತ್ತು ಗಂಭೀರತೆಯೊಂದಿಗೆ ನೆಮ್ಮದಿ ಹಾಗೂ ಪ್ರಶಾಂತತೆಯಿಂದ ಕೂಡಿದ ಜೀವನವನ್ನು ನಡೆಸಲಾಗುವಂತೆ ಅರಸರುಗಳಿಗಾಗಿಯೂ ಉನ್ನತ ಸ್ಥಾನದಲ್ಲಿರುವ ಎಲ್ಲ ರೀತಿಯ ಜನರಿಗಾಗಿಯೂ ಪ್ರಾರ್ಥನೆಮಾಡಿರಿ.  ನಮ್ಮ ರಕ್ಷಕನಾದ ದೇವರ ಮುಂದೆ ಇದು ಉತ್ತಮವೂ ಸ್ವೀಕಾರಾರ್ಹವೂ ಆಗಿದೆ.  ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬುದು ಆತನ ಚಿತ್ತವಾಗಿದೆ.  ಏಕೆಂದರೆ ದೇವರು ಒಬ್ಬನೇ ಮತ್ತು ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ; ಅವನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ.  ಅವನು ಎಲ್ಲರಿಗೋಸ್ಕರ ಅನುರೂಪವಾದ ವಿಮೋಚನಾ ಮೌಲ್ಯವಾಗಿ ತನ್ನನ್ನು ಒಪ್ಪಿಸಿಕೊಟ್ಟನು—⁠ಇದೇ ನಿರ್ದಿಷ್ಟವಾದ ಸಮಯಗಳಲ್ಲಿ ಸಾಕ್ಷಿನೀಡಬೇಕಾದ ಸಂಗತಿಯಾಗಿದೆ.  ಈ ಸಾಕ್ಷಿಗಾಗಿಯೇ ನಾನು ಸಾರುವವನಾಗಿಯೂ ಅಪೊಸ್ತಲನಾಗಿಯೂ ನಂಬಿಕೆ ಮತ್ತು ಸತ್ಯದ ವಿಷಯದಲ್ಲಿ ಅನ್ಯಜನಾಂಗಗಳವರಿಗೆ ಬೋಧಕನಾಗಿಯೂ ನೇಮಿಸಲ್ಪಟ್ಟೆನು; ನಾನು ಸುಳ್ಳು ಹೇಳುತ್ತಿಲ್ಲ, ಸತ್ಯವನ್ನೇ ಹೇಳುತ್ತಿದ್ದೇನೆ.  ಆದುದರಿಂದ, ಪುರುಷರು ಎಲ್ಲ ಸ್ಥಳಗಳಲ್ಲಿ ಕ್ರೋಧ ಮತ್ತು ವಾಗ್ವಾದಗಳಿಲ್ಲದವರಾಗಿ ನಿಷ್ಠೆಯ ಕೈಗಳನ್ನೆತ್ತಿ ಪ್ರಾರ್ಥನೆಮಾಡಬೇಕೆಂದು ಬಯಸುತ್ತೇನೆ.  ಅದೇ ರೀತಿಯಲ್ಲಿ, ಸ್ತ್ರೀಯರು ಸಭ್ಯತೆ ಮತ್ತು ಸ್ವಸ್ಥಬುದ್ಧಿಯುಳ್ಳವರಾಗಿದ್ದು ಮರ್ಯಾದೆಗೆ ತಕ್ಕ ಉಡುಪಿನಿಂದ ತಮ್ಮನ್ನು ಅಲಂಕರಿಸಿಕೊಳ್ಳಬೇಕೆಂದು ಬಯಸುತ್ತೇನೆ. ಅವರು ಕೇಶಾಲಂಕಾರ ಮಾಡಿಕೊಳ್ಳುವುದು, ಚಿನ್ನ ಅಥವಾ ಮುತ್ತುಗಳು ಅಥವಾ ತುಂಬ ಬೆಲೆಬಾಳುವ ವಸ್ತ್ರ ಮುಂತಾದವುಗಳಿಂದ ಅಲಂಕರಿಸಿಕೊಳ್ಳದೆ 10  ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಅಂದರೆ ಸತ್ಕ್ರಿಯೆಗಳಿಂದ ಅಲಂಕರಿಸಿಕೊಳ್ಳಬೇಕು. 11  ಸ್ತ್ರೀಯು ಮೌನವಾಗಿದ್ದು ಪೂರ್ಣ ಅಧೀನತೆಯಿಂದ ಕಲಿಯಲಿ. 12  ಬೋಧಿಸುವುದಕ್ಕಾಗಲಿ ಪುರುಷನ ಮೇಲೆ ಅಧಿಕಾರ ನಡಿಸುವುದಕ್ಕಾಗಲಿ ಸ್ತ್ರೀಗೆ ನಾನು ಅನುಮತಿ ಕೊಡುವುದಿಲ್ಲ. ಅವಳು ಮೌನವಾಗಿರಬೇಕು. 13  ಏಕೆಂದರೆ ಮೊದಲು ನಿರ್ಮಿಸಲ್ಪಟ್ಟವನು ಆದಾಮನು, ಆಮೇಲೆ ಹವ್ವಳು. 14  ಇದಲ್ಲದೆ ಆದಾಮನು ವಂಚಿಸಲ್ಪಡಲಿಲ್ಲ, ಆದರೆ ಸ್ತ್ರೀಯು ಸಂಪೂರ್ಣವಾಗಿ ವಂಚಿಸಲ್ಪಟ್ಟು ನಿಯಮವನ್ನು ಉಲ್ಲಂಘಿಸುವವಳಾದಳು. 15  ಆದರೂ ಸ್ತ್ರೀಯರು ಸ್ವಸ್ಥಬುದ್ಧಿಯುಳ್ಳವರಾಗಿದ್ದು ನಂಬಿಕೆಯಲ್ಲಿಯೂ ಪ್ರೀತಿಯಲ್ಲಿಯೂ ಪವಿತ್ರತೆಯಲ್ಲಿಯೂ ಮುಂದುವರಿಯುವುದಾದರೆ ಮಕ್ಕಳನ್ನು ಹೆರುವ ಮೂಲಕ ಆಕೆ ಸುರಕ್ಷಿತವಾಗಿ ಇಡಲ್ಪಡುವಳು.

ಪಾದಟಿಪ್ಪಣಿ