ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

1 ಕೊರಿಂಥ 8:1-13

8  ಈಗ ವಿಗ್ರಹಗಳಿಗೆ ನೈವೇದ್ಯಮಾಡಿದ ಆಹಾರಪದಾರ್ಥಗಳ ವಿಷಯದಲ್ಲಿ ಹೇಳಬೇಕಾದರೆ, ನಮಗೆಲ್ಲರಿಗೆ ಜ್ಞಾನವಿದೆ ಎಂಬುದನ್ನು ನಾವು ಬಲ್ಲೆವು. ಜ್ಞಾನವು ಉಬ್ಬಿಸುತ್ತದೆ, ಆದರೆ ಪ್ರೀತಿಯು ಭಕ್ತಿವೃದ್ಧಿಮಾಡುತ್ತದೆ.  ಯಾವುದೇ ವಿಷಯದ ಜ್ಞಾನವನ್ನು ತಾನು ಪಡೆದಿದ್ದೇನೆ ಎಂದು ಒಬ್ಬನು ನೆನಸುವುದಾದರೆ ಅವನು ಅದನ್ನು ತಿಳಿದುಕೊಳ್ಳಬೇಕಾದ ರೀತಿಯಲ್ಲಿ ಇನ್ನೂ ತಿಳಿದುಕೊಂಡಿರುವುದಿಲ್ಲ.  ಯಾವನಾದರೂ ದೇವರನ್ನು ಪ್ರೀತಿಸುವುದಾದರೆ ದೇವರು ಅವನನ್ನು ತಿಳಿದುಕೊಂಡಿರುತ್ತಾನೆ.  ವಿಗ್ರಹಗಳಿಗೆ ನೈವೇದ್ಯಮಾಡಿದ ಆಹಾರಪದಾರ್ಥಗಳನ್ನು ತಿನ್ನುವ ವಿಷಯದಲ್ಲಿ, ಲೋಕದಲ್ಲಿ ವಿಗ್ರಹವು ಏನೂ ಅಲ್ಲವೆಂದೂ ಒಬ್ಬನೇ ದೇವರು ಹೊರತು ಬೇರೆ ದೇವರಿಲ್ಲ ಎಂದೂ ನಮಗೆ ತಿಳಿದಿದೆ.  ಅನೇಕ “ದೇವರುಗಳು” ಮತ್ತು ಅನೇಕ “ಕರ್ತರು” ಇರುವಂತೆಯೇ ಆಕಾಶದಲ್ಲಿಯಾಗಲಿ ಭೂಮಿಯಲ್ಲಿಯಾಗಲಿ “ದೇವರುಗಳು” ಎಂದು ಕರೆಸಿಕೊಳ್ಳುವವರು ಅನೇಕರಿರುವುದಾದರೂ  ನಮಗೆ ವಾಸ್ತವವಾಗಿ ತಂದೆಯಾದ ಒಬ್ಬನೇ ದೇವರಿದ್ದಾನೆ; ಆತನಿಂದಲೇ ಎಲ್ಲ ಸಂಗತಿಗಳು ಅಸ್ತಿತ್ವದಲ್ಲಿವೆ ಮತ್ತು ನಾವು ಆತನಿಗಾಗಿ ಇದ್ದೇವೆ. ಹಾಗೂ ನಮಗೆ ಒಬ್ಬನೇ ಕರ್ತನಿದ್ದಾನೆ; ಅವನು ಯೇಸು ಕ್ರಿಸ್ತನು ಮತ್ತು ಅವನ ಮೂಲಕ ಎಲ್ಲ ಸಂಗತಿಗಳು ಅಸ್ತಿತ್ವದಲ್ಲಿವೆ ಹಾಗೂ ನಾವು ಅವನ ಮೂಲಕ ಇದ್ದೇವೆ.  ಆದರೆ ಈ ಜ್ಞಾನವು ಎಲ್ಲರಲ್ಲಿಯೂ ಇಲ್ಲ; ಇದುವರೆಗೆ ವಿಗ್ರಹಕ್ಕೆ ರೂಢಿಯಾಗಿರುವ ಕೆಲವರು ವಿಗ್ರಹಕ್ಕೆ ಅರ್ಪಿಸಿದ್ದನ್ನು ಆಹಾರವಾಗಿ ತಿನ್ನುತ್ತಾರೆ ಮತ್ತು ಹೀಗೆ, ಬಲಹೀನವಾಗಿರುವ ಅವರ ಮನಸ್ಸಾಕ್ಷಿಯು ಮಲಿನಗೊಳ್ಳುತ್ತದೆ.  ಆದರೆ ಆಹಾರವು ನಮ್ಮನ್ನು ದೇವರಿಗೆ ಮೆಚ್ಚುಗೆಯಾದವರನ್ನಾಗಿ ಮಾಡುವುದಿಲ್ಲ; ನಾವು ಆಹಾರವನ್ನು ಸೇವಿಸದೇ ಇರುವುದಾದರೆ ಏನನ್ನೂ ಕಳೆದುಕೊಳ್ಳುವುದಿಲ್ಲ, ಸೇವಿಸುವುದಾದರೆ ಏನನ್ನೂ ಗಳಿಸುವುದೂ ಇಲ್ಲ.  ಆದರೆ ನಿಮಗಿರುವ ಈ ಅಧಿಕಾರವು ಬಲಹೀನರಿಗೆ ಹೇಗಾದರೂ ಎಡವುಗಲ್ಲಾಗದಂತೆ ಎಚ್ಚರಿಕೆ ವಹಿಸುತ್ತಾ ಇರಿ. 10  ಜ್ಞಾನಿಯಾದ ನೀನು ವಿಗ್ರಹಾಲಯದಲ್ಲಿ ಕುಳಿತು ಊಟಮಾಡುತ್ತಿರುವುದನ್ನು ಯಾವನಾದರೂ ನೋಡುವುದಾದರೆ, ಆ ಬಲಹೀನನ ಮನಸ್ಸಾಕ್ಷಿಯು ವಿಗ್ರಹಗಳಿಗೆ ಅರ್ಪಣೆಮಾಡಿದ ಪದಾರ್ಥಗಳನ್ನು ಸಹ ತಿನ್ನುವಷ್ಟರ ಮಟ್ಟಿಗೆ ಧೈರ್ಯತಂದುಕೊಳ್ಳುವುದಿಲ್ಲವೊ? 11  ನಿನ್ನ ಜ್ಞಾನದಿಂದಾಗಿ ಕ್ರಿಸ್ತನು ಯಾರಿಗಾಗಿ ಸತ್ತನೋ ಆ ನಿನ್ನ ಬಲಹೀನ ಸಹೋದರನು ಹಾಳಾಗುತ್ತಾನೆ. 12  ಹೀಗೆ ನೀವು ನಿಮ್ಮ ಸಹೋದರರ ವಿರುದ್ಧ ಪಾಪಮಾಡಿ ಅವರ ಬಲಹೀನ ಮನಸ್ಸಾಕ್ಷಿಯನ್ನು ಘಾಸಿಗೊಳಿಸುವಾಗ ಕ್ರಿಸ್ತನಿಗೆ ವಿರುದ್ಧವಾಗಿ ಪಾಪಮಾಡುವವರಾಗಿದ್ದೀರಿ. 13  ಆದುದರಿಂದ ಒಂದುವೇಳೆ ಆಹಾರಪದಾರ್ಥವು ನನ್ನ ಸಹೋದರನನ್ನು ಎಡವಿಸುವುದಾದರೆ ನಾನು ನನ್ನ ಸಹೋದರನನ್ನು ಎಡವಿಸದೇ ಇರಲಿಕ್ಕಾಗಿ ಪುನಃ ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ.

ಪಾದಟಿಪ್ಪಣಿ