ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಲೂಕ 3:1-38

3  ಚಕ್ರವರ್ತಿಯಾದ ತಿಬೇರಿಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಪೊಂತ್ಯ ಪಿಲಾತನು ಯೂದಾಯದ ರಾಜ್ಯಪಾಲನಾಗಿಯೂ ಹೆರೋದನು ಗಲಿಲಾಯದ ಉಪಾಧಿಪತಿಯಾಗಿಯೂ ಅವನ ಸಹೋದರನಾದ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಸೀಮೆಗಳ ಉಪಾಧಿಪತಿಯಾಗಿಯೂ ಲುಸನ್ಯನು ಅಬಿಲೇನೆಯ ಉಪಾಧಿಪತಿಯಾಗಿಯೂ ಇದ್ದಾಗ,  ಅನ್ನನೂ ಕಾಯಫನೂ ಮುಖ್ಯ ಯಾಜಕರಾಗಿದ್ದ ಸಮಯದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಅರಣ್ಯದಲ್ಲಿ ದೇವರ ಪ್ರಕಟನೆಯು ಬಂತು.  ಆದುದರಿಂದ ಅವನು ಯೋರ್ದನ್‌ ನದಿಯ ಸುತ್ತಲಿರುವ ಎಲ್ಲ ಸೀಮೆಗಳಿಗೆ ಬಂದು ಜನರು ಪಾಪಗಳ ಕ್ಷಮಾಪಣೆಗಾಗಿ ಪಶ್ಚಾತ್ತಾಪಪಟ್ಟು ಅದರ ಸಂಕೇತವಾಗಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಬೇಕೆಂದು ಸಾರಿಹೇಳುತ್ತಿದ್ದನು.  ಪ್ರವಾದಿಯಾದ ಯೆಶಾಯನ ಗ್ರಂಥದಲ್ಲಿ, “ ‘ಜನರೇ ಯೆಹೋವನ ಮಾರ್ಗವನ್ನು ಸಿದ್ಧಪಡಿಸಿರಿ, ಆತನ ಹಾದಿಗಳನ್ನು ನೆಟ್ಟಗೆಮಾಡಿರಿ’ ಎಂದು ಕೂಗುವವನ ಧ್ವನಿಯು ಅರಣ್ಯದಲ್ಲಿ ಕೇಳಿಬರುತ್ತಿದೆ. ಕಿವಿಗೊಡಿರಿ!” ಎಂದೂ  “ಎಲ್ಲ ಹಳ್ಳಗಳು ತುಂಬಿಸಲ್ಪಡಬೇಕು, ಎಲ್ಲ ಬೆಟ್ಟಗುಡ್ಡಗಳು ತಗ್ಗಿಸಲ್ಪಡಬೇಕು, ಅಂಕುಡೊಂಕಾದ ಮಾರ್ಗಗಳು ನೆಟ್ಟಗಾಗಬೇಕು ಮತ್ತು ಏರುಪೇರಾದ ಸ್ಥಳಗಳು ಸುಗಮವಾದ ದಾರಿಗಳಾಗಬೇಕು;  ಎಲ್ಲ ಮನುಷ್ಯರು ರಕ್ಷಣೆಗಾಗಿ ದೇವರು ಮಾಡಿರುವ ಏರ್ಪಾಡನ್ನು ನೋಡುವರು” ಎಂದೂ ಬರೆದಿರುವಂತೆಯೇ ಹೀಗಾಯಿತು.  ಆದುದರಿಂದ ಅವನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬರುತ್ತಿದ್ದ ಜನರ ಗುಂಪಿಗೆ, “ವಿಷಸರ್ಪಗಳ ಪೀಳಿಗೆಯವರೇ, ಬರಲಿರುವ ಕ್ರೋಧದಿಂದ ತಪ್ಪಿಸಿಕೊಳ್ಳಲು ನಿಮಗೆ ಯಾರು ಸೂಚನೆಕೊಟ್ಟರು?  ಹಾಗಾದರೆ ಪಶ್ಚಾತ್ತಾಪಕ್ಕೆ ಯೋಗ್ಯವಾದ ಫಲವನ್ನು ಉತ್ಪಾದಿಸಿರಿ; ಮತ್ತು ‘ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿ. ಏಕೆಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಉಂಟುಮಾಡಲು ಶಕ್ತನಾಗಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ.  ಈಗಾಗಲೇ ಮರಗಳ ಬೇರಿಗೆ ಕೊಡಲಿಯು ಬೀಳುವ ಸ್ಥಾನದಲ್ಲಿದೆ; ಒಳ್ಳೇ ಫಲವನ್ನು ಉತ್ಪಾದಿಸದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಎಸೆಯಲಾಗುವುದು” ಎಂದು ಹೇಳಿದನು. 10  ಆಗ ಜನರು ಅವನಿಗೆ, “ಹಾಗಾದರೆ ನಾವು ಏನು ಮಾಡಬೇಕು?” ಎಂದು ಕೇಳುವರು. 11  ಅದಕ್ಕೆ ಉತ್ತರವಾಗಿ ಅವನು ಅವರಿಗೆ, “ಎರಡು ಒಳಉಡುಪುಗಳುಳ್ಳವನು ಒಂದೂ ಇಲ್ಲದವನೊಂದಿಗೆ ಹಂಚಿಕೊಳ್ಳಲಿ; ತಿನ್ನಲು ಯಾರಲ್ಲಿ ಇದೆಯೋ ಅವನು ಸಹ ಹೀಗೆಯೇ ಮಾಡಲಿ” ಎಂದು ಹೇಳುವನು. 12  ತೆರಿಗೆ ವಸೂಲಿಮಾಡುವವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದು ಅವನಿಗೆ, “ಬೋಧಕನೇ ನಾವು ಏನು ಮಾಡಬೇಕು?” ಎಂದು ಕೇಳಿದರು. 13  ಆಗ ಅವನು ಅವರಿಗೆ, “ನಿಗದಿತ ತೆರಿಗೆಗಿಂತ ಹೆಚ್ಚನ್ನು ತಗಾದೆಮಾಡಬೇಡಿ” ಎಂದನು. 14  ಮಾತ್ರವಲ್ಲದೆ ಸೈನಿಕರು ಸಹ ಬಂದು, “ನಾವು ಏನು ಮಾಡಬೇಕು?” ಎಂದು ಕೇಳಿದಾಗ ಅವನು, “ಯಾರಿಗೂ ಕಿರುಕುಳಕೊಡಬೇಡಿ ಅಥವಾ ಯಾರ ಮೇಲೂ ಸುಳ್ಳಾರೋಪ ಹೊರಿಸಬೇಡಿ; ನಿಮಗಿರುವ ಸೌಲಭ್ಯಗಳಲ್ಲೇ ತೃಪ್ತರಾಗಿರಿ” ಎಂದು ಹೇಳಿದನು. 15  ಬರಬೇಕಾಗಿದ್ದ ಕ್ರಿಸ್ತನನ್ನು ಜನರು ಎದುರುನೋಡುತ್ತಿದ್ದ ಕಾರಣ, “ಪ್ರಾಯಶಃ ಇವನೇ ಕ್ರಿಸ್ತನಾಗಿರಬಹುದೊ” ಎಂದು ಯೋಹಾನನ ಕುರಿತು ಎಲ್ಲರೂ ತಮ್ಮ ಹೃದಯಗಳಲ್ಲಿ ತರ್ಕಿಸುತ್ತಿದ್ದರು. 16  ಆಗ ಯೋಹಾನನು ಅವರೆಲ್ಲರಿಗೆ, “ನಾನಾದರೋ ನಿಮಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ; ಆದರೆ ನನಗಿಂತ ಹೆಚ್ಚು ಬಲಶಾಲಿಯಾಗಿರುವಾತನು ಬರುತ್ತಾನೆ. ಅವನ ಕೆರಗಳ ಪಟ್ಟಿಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಅವನು ನಿಮಗೆ ಪವಿತ್ರಾತ್ಮದಿಂದಲೂ ಬೆಂಕಿಯಿಂದಲೂ ದೀಕ್ಷಾಸ್ನಾನ ಮಾಡಿಸುವನು. 17  ಅವನ ಕೇರುವ ಮೊರವು ಅವನ ಕೈಯಲ್ಲಿದೆ ಮತ್ತು ಅವನು ತನ್ನ ಕಣವನ್ನು ಪೂರ್ತಿಯಾಗಿ ಸ್ವಚ್ಛಗೊಳಿಸಿ ಗೋದಿಯನ್ನು ಕಣಜದಲ್ಲಿ ತುಂಬಿಸುವನು; ಆದರೆ ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಹೇಳಿದನು. 18  ಅವನು ಇನ್ನೂ ಅನೇಕ ಬುದ್ಧಿವಾದಗಳನ್ನು ಕೊಟ್ಟು ಜನರಿಗೆ ಸುವಾರ್ತೆಯನ್ನು ಪ್ರಕಟಪಡಿಸುತ್ತಾ ಮುಂದುವರಿದನು. 19  ಆದರೆ ಉಪಾಧಿಪತಿಯಾದ ಹೆರೋದನು ತನ್ನ ಸಹೋದರನ ಹೆಂಡತಿಯಾಗಿದ್ದ ಹೆರೋದ್ಯಳ ನಿಮಿತ್ತವಾಗಿಯೂ ತಾನು ಮಾಡಿದ್ದ ಎಲ್ಲ ಕೆಟ್ಟ ಕೃತ್ಯಗಳ ನಿಮಿತ್ತವಾಗಿಯೂ ಯೋಹಾನನಿಂದ ಖಂಡಿಸಲ್ಪಟ್ಟ ಕಾರಣ 20  ಅವನನ್ನು ಸೆರೆಮನೆಯಲ್ಲಿ ಬಂಧಿಸಿ ಆ ಎಲ್ಲ ಕೃತ್ಯಗಳಿಗೆ ಇದನ್ನೂ ಕೂಡಿಸಿದನು. 21  ಜನರೆಲ್ಲ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡನು; ಅವನು ಪ್ರಾರ್ಥನೆಮಾಡುತ್ತಿದ್ದಾಗ ಆಕಾಶವು ತೆರೆಯಲ್ಪಟ್ಟಿತು 22  ಮತ್ತು ಪವಿತ್ರಾತ್ಮವು ಪಾರಿವಾಳದ ರೂಪದಲ್ಲಿ ಅವನ ಮೇಲೆ ಇಳಿದುಬಂತು; ಆಗ “ನೀನು ಪ್ರಿಯನಾಗಿರುವ ನನ್ನ ಮಗನು; ನಾನು ನಿನ್ನನ್ನು ಮೆಚ್ಚಿದ್ದೇನೆ” ಎಂಬ ವಾಣಿಯು ಆಕಾಶದೊಳಗಿಂದ ಬಂತು. 23  ಇದಲ್ಲದೆ ಯೇಸು ತನ್ನ ಕೆಲಸವನ್ನು ಆರಂಭಿಸಿದಾಗ ಸುಮಾರು ಮೂವತ್ತು ವರ್ಷ ಪ್ರಾಯದವನಾಗಿದ್ದನು. ಜನರ ಎಣಿಕೆಯಲ್ಲಿಇವನು ಯೋಸೇಫನ ಮಗನು;ಯೋಸೇಫನು ಹೇಲೀಯ ಮಗನು; 24  ಇವನು ಮತ್ಥಾತನ ಮಗನು;ಇವನು ಲೇವಿಯ ಮಗನು;ಇವನು ಮೆಲ್ಖಿಯ ಮಗನು;ಇವನು ಯನ್ನಾಯನ ಮಗನು;ಇವನು ಯೋಸೇಫನ ಮಗನು; 25  ಇವನು ಮತ್ತಥೀಯನ ಮಗನು;ಇವನು ಆಮೋಸನ ಮಗನು;ಇವನು ನಹೂಮನ ಮಗನು;ಇವನು ಎಸ್ಲಿಯ ಮಗನು;ಇವನು ನಗ್ಗಾಯನ ಮಗನು; 26  ಇವನು ಮಹಾಥನ ಮಗನು;ಇವನು ಮತ್ತಥೀಯನ ಮಗನು;ಇವನು ಶಿಮೀಯನನ ಮಗನು;ಇವನು ಯೋಸೇಖನ ಮಗನು;ಇವನು ಯೋದನ ಮಗನು; 27  ಇವನು ಯೊಆನನ್‍ನ ಮಗನು;ಇವನು ರೇಸನ ಮಗನು;ಇವನು ಜೆರುಬಾಬೆಲನ ಮಗನು;ಇವನು ಸಲಥಿಯೇಲನ ಮಗನು;ಇವನು ನೇರಿಯ ಮಗನು; 28  ಇವನು ಮೆಲ್ಖಿಯ ಮಗನು;ಇವನು ಅದ್ದಿಯ ಮಗನು;ಇವನು ಕೋಸಾಮನ ಮಗನು;ಇವನು ಎಲ್ಮದಾಮನ ಮಗನು;ಇವನು ಏರನ ಮಗನು; 29  ಇವನು ಯೆಹೋಷುವನ ಮಗನು;ಇವನು ಎಲಿಯೇಜರನ ಮಗನು;ಇವನು ಯೋರೈಮನ ಮಗನು;ಇವನು ಮತ್ಥಾತನ ಮಗನು;ಇವನು ಲೇವಿಯ ಮಗನು; 30  ಇವನು ಸಿಮಿಯೋನನ ಮಗನು;ಇವನು ಯೂದನ ಮಗನು;ಇವನು ಯೋಸೇಫನ ಮಗನು;ಇವನು ಯೋನಾಮನ ಮಗನು;ಇವನು ಎಲಿಯಕೀಮನ ಮಗನು; 31  ಇವನು ಮೆಲೆಯಾನ ಮಗನು;ಇವನು ಮೆನ್ನನ ಮಗನು;ಇವನು ಮತ್ತಾಥನ ಮಗನು;ಇವನು ನಾತಾನನ ಮಗನು;ಇವನು ದಾವೀದನ ಮಗನು; 32  ಇವನು ಇಷಯನ ಮಗನು;ಇವನು ಓಬೇದನ ಮಗನು;ಇವನು ಬೋವಜನ ಮಗನು;ಇವನು ಸಲ್ಮೋನನ ಮಗನು;ಇವನು ನಹಶೋನನ ಮಗನು; 33  ಇವನು ಅಮ್ಮೀನಾದಾಬನ ಮಗನು;ಇವನು ಆರ್ನೈಯನ ಮಗನು;ಇವನು ಹೆಚ್ರೋನನ ಮಗನು;ಇವನು ಪೆರೆಚನ ಮಗನು;ಇವನು ಯೆಹೂದನ ಮಗನು; 34  ಇವನು ಯಾಕೋಬನ ಮಗನು;ಇವನು ಇಸಾಕನ ಮಗನು;ಇವನು ಅಬ್ರಹಾಮನ ಮಗನು;ಇವನು ತೆರಹನ ಮಗನು;ಇವನು ನಾಹೋರನ ಮಗನು; 35  ಇವನು ಸೆರೂಗನ ಮಗನು;ಇವನು ರೀಯುನ ಮಗನು;ಇವನ ಪೆಲೆಗನ ಮಗನು;ಇವನ ಹೇಬೆರನ ಮಗನು;ಇವನು ಷೀಲಾನ ಮಗನು; 36  ಇವನು ಕಯಿನಾನನ ಮಗನು;ಇವನು ಅರ್ಪಕ್ಷಾದನ ಮಗನು;ಇವನು ಶೇಮನ ಮಗನು;ಇವನು ನೋಹನ ಮಗನು;ಇವನು ಲೆಮೆಕನ ಮಗನು; 37  ಇವನು ಮೆತೂಷಾಯೇಲನ ಮಗನು;ಇವನು ಹನೋಕನ ಮಗನು;ಇವನು ಯೆರೆದನ ಮಗನು;ಇವನು ಮಹಲಲೇಲನ ಮಗನು;ಇವನು ಕೇನಾನನ ಮಗನು; 38  ಇವನು ಎನೋಷನ ಮಗನು;ಇವನು ಸೇತನ ಮಗನು;ಇವನು ಆದಾಮನ ಮಗನು;ಇವನು ದೇವರ ಮಗನು.

ಪಾದಟಿಪ್ಪಣಿ