ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾಕೋಬ 4:1-17

4  ನಿಮ್ಮಲ್ಲಿ ಕಾದಾಟಗಳುಮತ್ತು ಜಗಳಗಳು ಯಾವ ಮೂಲದಿಂದ ಉಂಟಾಗುತ್ತವೆ? ಅವು ಈ ಮೂಲದಿಂದ ಅಂದರೆ ನಿಮ್ಮ ಅಂಗಗಳಲ್ಲಿ ಹೋರಾಟವನ್ನು ನಡಿಸುವ ಇಂದ್ರಿಯ ಸುಖಭೋಗದ ಹಂಬಲಿಕೆಯಿಂದಾಗಿಯೇ ಉಂಟಾಗುತ್ತವಲ್ಲವೆ?  ನೀವು ಆಶೆಪಡುವುದಾದರೂ ಇನ್ನೂ ಹೊಂದದೆ ಇದ್ದೀರಿ. ನೀವು ಕೊಲೆ​ಮಾಡುತ್ತಾ ದುರಾಶೆಪಡುತ್ತಾ ಇರುವುದಾದರೂ ನೀವು ಇನ್ನೂ ಹೊಂದಲಾರದೆ ಇದ್ದೀರಿ. ನೀವು ಜಗಳಮಾಡುತ್ತಾ ಕಾದಾಡುತ್ತಾ ಇದ್ದೀರಿ. ನೀವು ಬೇಡಿಕೊಳ್ಳದ ಕಾರಣ ಹೊಂದದೆ ಇದ್ದೀರಿ.  ನೀವು ಬೇಡಿಕೊಳ್ಳುತ್ತೀರಾದರೂ ಪಡೆದುಕೊಳ್ಳುವುದಿಲ್ಲ, ಏಕೆಂದರೆ ನೀವು ಬೇಡಿದ್ದನ್ನು ನಿಮ್ಮ ಇಂದ್ರಿಯ ಸುಖಭೋಗದ ಹಂಬಲಿಕೆಗಳಿಗಾಗಿ ಉಪಯೋಗಿಸಬೇಕೆಂಬ ತಪ್ಪಾದ ಉದ್ದೇಶದಿಂದ ಬೇಡಿಕೊಳ್ಳುತ್ತಿದ್ದೀರಿ.  ವ್ಯಭಿಚಾರಿಗಳೇ, ಲೋಕದೊಂದಿಗೆ ಸ್ನೇಹವು ದೇವರೊಂದಿಗೆ ವೈರತ್ವವಾಗಿದೆ ಎಂಬುದು ನಿಮಗೆ ತಿಳಿಯದೊ? ಆದುದರಿಂದ ಯಾವನಾದರೂ ಲೋಕಕ್ಕೆ ಸ್ನೇಹಿತನಾಗಲು ಬಯಸುವುದಾದರೆ ಅವನು ತನ್ನನ್ನು ದೇವರಿಗೆ ವೈರಿಯನ್ನಾಗಿ ಮಾಡಿಕೊಳ್ಳುತ್ತಾನೆ.  “ಅಸೂಯೆ​ಪಡುವ ಪ್ರವೃತ್ತಿಯಿಂದಲೇ ನಮ್ಮೊಳಗೆ ವಾಸಿಸುವ ಮನೋಭಾವವು ಹಂಬಲಿಸುತ್ತಾ ಇದೆ” ಎಂಬ ಶಾಸ್ತ್ರವಚನವು ಯಾವುದೇ ಉದ್ದೇಶವಿಲ್ಲದೆ ಹಾಗೆ ಹೇಳುತ್ತದೆಂದು ನಿಮಗನಿಸುತ್ತದೊ?  ಆದರೂ, ಆತನು ಕೊಡುವ ಅಪಾತ್ರ ದಯೆಯು * ಅದಕ್ಕಿಂತಲೂ ಪ್ರಬಲವಾದದ್ದಾಗಿದೆ. ಆದುದರಿಂದ “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ ದೀನರಿಗೆ ಅಪಾತ್ರ ದಯೆಯನ್ನು ಅನುಗ್ರಹಿಸುತ್ತಾನೆ” ಎಂದು ಅದು ಹೇಳುತ್ತದೆ.  ಆದುದರಿಂದ ದೇವರಿಗೆ ನಿಮ್ಮನ್ನು ಅಧೀನಪಡಿಸಿಕೊಳ್ಳಿರಿ; ಆದರೆ ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು.  ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಅಸ್ಥಿರ ಮನಸ್ಸಿನವರೇ, ನಿಮ್ಮ ಹೃದಯಗಳನ್ನು ಶುದ್ಧಮಾಡಿಕೊಳ್ಳಿರಿ.  ದುಃಖಕ್ಕೆ ದಾರಿಮಾಡಿಕೊಡಿರಿ, ಶೋಕಿಸಿರಿ, ಕಣ್ಣೀರಿಡಿರಿ. ನಿಮ್ಮ ನಗು ಶೋಕಕ್ಕೆ ತಿರುಗುವಂತೆಯೂ ನಿಮ್ಮ ಆನಂದವು ಖಿನ್ನತೆಗೆ ತಿರುಗುವಂತೆಯೂ ಬಿಡಿರಿ. 10  ಯೆಹೋವನ ದೃಷ್ಟಿಯಲ್ಲಿ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಆಗ ಆತನು ನಿಮ್ಮನ್ನು ಉನ್ನತ​ಕ್ಕೇರಿಸುವನು. 11  ಸಹೋದರರೇ, ಒಬ್ಬರ ವಿರುದ್ಧ ಇನ್ನೊಬ್ಬರು ಮಾತಾಡುವುದನ್ನು ನಿಲ್ಲಿಸಿರಿ. ಸಹೋದರನ ವಿರುದ್ಧ ಮಾತಾಡುವವನು ಅಥವಾ ತನ್ನ ಸಹೋದರನ ವಿಷಯವಾಗಿ ತೀರ್ಪುಮಾಡುವವನು ನಿಯಮದ ವಿರುದ್ಧ ಮಾತಾಡುವವನಾಗಿದ್ದಾನೆ ಮತ್ತು ನಿಯಮದ ವಿಷಯವಾಗಿ ತೀರ್ಪುಮಾಡುವವನಾಗಿದ್ದಾನೆ. ನೀನು ನಿಯಮವನ್ನು ತೀರ್ಪುಮಾಡುವಲ್ಲಿ ನಿಯಮದ ಪ್ರಕಾರ ಮಾಡುವವನಾಗಿರದೆ ನ್ಯಾಯಾಧಿಪತಿಯಾಗಿದ್ದೀ. 12  ನ್ಯಾಯವನ್ನು ವಿಧಿಸುವವನೂ ನ್ಯಾಯಾಧಿಪತಿಯಾಗಿರುವವನೂ ಒಬ್ಬನೇ; ಆತನೇ ರಕ್ಷಿಸುವುದಕ್ಕೂ ನಾಶಮಾಡುವುದಕ್ಕೂ ಶಕ್ತನಾಗಿದ್ದಾನೆ. ಆದರೆ ನಿನ್ನ ನೆರೆಯವನ ವಿಷಯದಲ್ಲಿ ತೀರ್ಪು​ಮಾಡಲು ನೀನು ಯಾರು? 13  “ಇಂದು ಅಥವಾ ನಾಳೆ ನಾವು ಇಂಥ ಪಟ್ಟಣಕ್ಕೆ ಪ್ರಯಾಣಿಸಿ ಅಲ್ಲಿ ಒಂದು ವರ್ಷ ಕಳೆದು ವ್ಯಾಪಾರಮಾಡಿ ಲಾಭ ಗಳಿಸೋಣ” ಎಂದು ಹೇಳುವವರೇ ಬನ್ನಿರಿ, ಕೇಳಿರಿ. 14  ನಾಳೆ ನಿಮ್ಮ ಜೀವನವು ಹೇಗಿರುವುದು ಎಂಬುದು ನಿಮಗೆ ತಿಳಿದಿಲ್ಲ. ಏಕೆಂದರೆ ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ತದನಂತರ ಕಾಣಿಸದೇ ಹೋಗುವ ಮಂಜಿನಂತಿದ್ದೀರಿ. 15  ಅದಕ್ಕೆ ಬದಲಾಗಿ, “ಯೆಹೋವನ ಚಿತ್ತವಾದರೆ ನಾವು ಬದುಕಿ ಇದನ್ನಾಗಲಿ ಅದನ್ನಾಗಲಿ ಮಾಡುವೆವು” ಎಂದು ನೀವು ಹೇಳತಕ್ಕದ್ದು. 16  ಆದರೆ ಈಗ ನೀವು ಅಹಂಭಾವದಿಂದ ಕೊಚ್ಚಿಕೊಳ್ಳುವುದರಲ್ಲಿ ಹೆಮ್ಮೆಪಡುತ್ತೀರಿ. ಈ ರೀತಿಯ ಎಲ್ಲ ಹೆಮ್ಮೆಪಡುವಿಕೆಯು ಕೆಟ್ಟದ್ದೇ. 17  ಆದುದರಿಂದ ಸರಿಯಾದದ್ದನ್ನು ಮಾಡುವುದು ಹೇಗೆಂಬುದು ಒಬ್ಬನಿಗೆ ತಿಳಿದಿದ್ದರೂ ಅದನ್ನು ಮಾಡದೇ ಇರುವುದಾದರೆ ಅದು ಅವನಿಗೆ ಪಾಪವಾಗಿದೆ.

ಪಾದಟಿಪ್ಪಣಿ

ಯಾಕೋ 4:6  ಅಥವಾ, “ಅಪಾರ ದಯೆಯು.”