ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಪ್ರಕಟನೆ 7:1-17

7  ಇದಾದ ಬಳಿಕ ಭೂಮಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿ ದೇವದೂತರು ನಿಂತುಕೊಂಡು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಯಾವುದೇ ಮರದ ಮೇಲಾಗಲಿ ಯಾವ ಗಾಳಿಯೂ ಬೀಸದಂತೆ ಭೂಮಿಯ ನಾಲ್ಕು ಗಾಳಿಗಳನ್ನು ಬಿಗಿಯಾಗಿ ಹಿಡಿದುಕೊಂಡಿರುವುದನ್ನು ನಾನು ನೋಡಿದೆನು.  ಇದಲ್ಲದೆ ಜೀವವುಳ್ಳ ದೇವರ ಮುದ್ರೆಯನ್ನು ಹೊಂದಿರುವಂಥ ಇನ್ನೊಬ್ಬ ದೇವದೂತನು ಸೂರ್ಯೋದಯದ ದಿಕ್ಕಿನಿಂದ ಏರಿಬರುವುದನ್ನು ನಾನು ನೋಡಿದೆನು; ಭೂಮಿಯನ್ನೂ ಸಮುದ್ರವನ್ನೂ ಹಾಳುಮಾಡಲು ಒಪ್ಪಿಗೆ ದೊರಕಿದ್ದ ಆ ನಾಲ್ಕು ಮಂದಿ ದೇವದೂತರಿಗೆ ಅವನು ಮಹಾ ಧ್ವನಿಯಿಂದ,  “ನಮ್ಮ ದೇವರ ದಾಸರ ಹಣೆಗಳ ಮೇಲೆ ನಾವು ಮುದ್ರೆಯನ್ನು ಒತ್ತಿಯಾಗುವ ತನಕ ಭೂಮಿಯನ್ನಾಗಲಿ ಸಮುದ್ರವನ್ನಾಗಲಿ ಮರಗಳನ್ನಾಗಲಿ ಹಾಳುಮಾಡಬೇಡಿರಿ” ಎಂದು ಕೂಗಿ ಹೇಳಿದನು.  ಮುದ್ರೆ ಒತ್ತಲ್ಪಟ್ಟವರ ಸಂಖ್ಯೆಯನ್ನು ನಾನು ಕೇಳಿಸಿಕೊಂಡೆನು; ಇಸ್ರಾಯೇಲ್ಯರ ಪ್ರತಿಯೊಂದು ಕುಲದಿಂದ ಮುದ್ರೆ ಒತ್ತಲ್ಪಟ್ಟವರ ಸಂಖ್ಯೆಯು ಒಂದು ಲಕ್ಷ ನಲವತ್ತನಾಲ್ಕು ಸಾವಿರವಾಗಿತ್ತು:  ಯೆಹೂದನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ; ರೂಬೇನನ ಕುಲದಿಂದ ಹನ್ನೆರಡು ಸಾವಿರ ಮಂದಿ; ಗಾದನ ಕುಲದಿಂದ ಹನ್ನೆರಡು ಸಾವಿರ ಮಂದಿ;  ಆಶೇರನ ಕುಲದಿಂದ ಹನ್ನೆರಡು ಸಾವಿರ ಮಂದಿ; ನಫ್ತಾಲಿಯ ಕುಲದಿಂದ ಹನ್ನೆರಡು ಸಾವಿರ ಮಂದಿ; ಮನಸ್ಸೆಯ ಕುಲದಿಂದ ಹನ್ನೆರಡು ಸಾವಿರ ಮಂದಿ;  ಸಿಮೆಯೋನನ ಕುಲದಿಂದ ಹನ್ನೆರಡು ಸಾವಿರ ಮಂದಿ; ಲೇವಿಯ ಕುಲದಿಂದ ಹನ್ನೆರಡು ಸಾವಿರ ಮಂದಿ; ಇಸ್ಸಾಕಾರನ ಕುಲದಿಂದ ಹನ್ನೆರಡು ಸಾವಿರ ಮಂದಿ;  ಜೆಬುಲೂನನ ಕುಲದಿಂದ ಹನ್ನೆರಡು ಸಾವಿರ ಮಂದಿ; ಯೋಸೇಫನ ಕುಲದಿಂದ ಹನ್ನೆರಡು ಸಾವಿರ ಮಂದಿ; ಬೆನ್ಯಾಮೀನನ ಕುಲದಿಂದ ಮುದ್ರೆ ಒತ್ತಲ್ಪಟ್ಟವರು ಹನ್ನೆರಡು ಸಾವಿರ ಮಂದಿ.  ಇವುಗಳಾದ ಮೇಲೆ ಇಗೋ, ಯಾವ ಮನುಷ್ಯನಿಂದಲೂ ಎಣಿಸಲಾಗದಂಥ ಒಂದು ಮಹಾ ಸಮೂಹವು ಸಿಂಹಾಸನದ ಮುಂದೆಯೂ ಕುರಿಮರಿಯ ಮುಂದೆಯೂ ನಿಂತಿರುವುದನ್ನು ನೋಡಿದೆನು; ಅವರು ಎಲ್ಲ ಜನಾಂಗಗಳಿಂದಲೂ ಕುಲಗಳಿಂದಲೂ ಪ್ರಜೆಗಳಿಂದಲೂ ಭಾಷೆಗಳಿಂದಲೂ ಬಂದವರಾಗಿದ್ದು ಬಿಳೀ ನಿಲುವಂಗಿಗಳನ್ನು ಧರಿಸಿಕೊಂಡಿದ್ದರು; ಅವರ ಕೈಗಳಲ್ಲಿ ತಾಳೆಯ ಗರಿಗಳು ಇದ್ದವು. 10  ಅವರು ಮಹಾ ಧ್ವನಿಯಿಂದ ಕೂಗುತ್ತಾ, “ಸಿಂಹಾಸನದ ಮೇಲೆ ಕುಳಿತುಕೊಂಡಿರುವ ನಮ್ಮ ದೇವರಿಗೂ ಕುರಿಮರಿಗೂ ನಮ್ಮ ರಕ್ಷಣೆಗಾಗಿ ನಾವು ಋಣಿಗಳು” ಎಂದು ಹೇಳುತ್ತಿದ್ದರು. 11  ದೇವದೂತರೆಲ್ಲರೂ ಸಿಂಹಾಸನದ, ಹಿರಿಯರ ಮತ್ತು ನಾಲ್ಕು ಜೀವಿಗಳ ಸುತ್ತಲೂ ನಿಂತುಕೊಂಡಿದ್ದರು. ಅವರು ಸಿಂಹಾಸನದ ಮುಂದೆ ಅಧೋಮುಖವಾಗಿ ಬಿದ್ದು ದೇವರನ್ನು ಆರಾಧಿಸುತ್ತಾ, 12  “ಆಮೆನ್‌! ಸ್ತುತಿಯೂ ಮಹಿಮೆಯೂ ವಿವೇಕವೂ ಕೃತಜ್ಞತಾಸ್ತುತಿಯೂ ಗೌರವವೂ ಶಕ್ತಿಯೂ ಬಲವೂ ನಮ್ಮ ದೇವರಿಗೆ ಸದಾಸರ್ವದಾ ಸಲ್ಲುತ್ತಾ ಇರಲಿ. ಆಮೆನ್‌” ಎಂದು ಹೇಳಿದರು. 13  ಇದಕ್ಕೆ ಪ್ರತಿಕ್ರಿಯಿಸುತ್ತಾ ಹಿರಿಯರಲ್ಲಿ ಒಬ್ಬನು, “ಬಿಳೀ ನಿಲುವಂಗಿಗಳನ್ನು ಧರಿಸಿಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು?” ಎಂದು ನನ್ನನ್ನು ಕೇಳಿದನು. 14  ಆಗ ತಕ್ಷಣವೇ ನಾನು ಅವನಿಗೆ, “ಸ್ವಾಮಿ, ನೀನೇ ಅದನ್ನು ತಿಳಿದಿದ್ದೀ” ಎಂದು ಹೇಳಿದೆನು. ಅದಕ್ಕೆ ಅವನು ನನಗೆ, “ಇವರು ಆ ಮಹಾ ಸಂಕಟವನ್ನು ಪಾರಾಗಿ ಬರುವವರು; ಇವರು ತಮ್ಮ ನಿಲುವಂಗಿಗಳನ್ನು ಕುರಿಮರಿಯ ರಕ್ತದಲ್ಲಿ ತೊಳೆದುಕೊಂಡು ಅವುಗಳನ್ನು ಬೆಳ್ಳಗೆ ಮಾಡಿಕೊಂಡಿದ್ದಾರೆ. 15  ಆದುದರಿಂದಲೇ ಅವರು ದೇವರ ಸಿಂಹಾಸನದ ಮುಂದೆ ಇದ್ದಾರೆ; ಅವರು ಆತನ ಆಲಯದಲ್ಲಿ ಹಗಲೂರಾತ್ರಿ ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದಾರೆ; ಸಿಂಹಾಸನದ ಮೇಲೆ ಕುಳಿತಿರುವಾತನು ತನ್ನ ಗುಡಾರವನ್ನು ಅವರ ಮೇಲೆ ಹರಡುವನು. 16  ಇನ್ನು ಮೇಲೆ ಅವರಿಗೆ ಹಸಿವೆಯಾಗುವುದೂ ಇಲ್ಲ, ಬಾಯಾರಿಕೆಯಾಗುವುದೂ ಇಲ್ಲ; ಸೂರ್ಯನಾಗಲಿ ಯಾವುದೇ ಸುಡುವ ಶಾಖವಾಗಲಿ ಅವರ ಮೇಲೆ ಬಡಿಯುವುದಿಲ್ಲ, 17  ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದವನು ಅವರನ್ನು ಪಾಲಿಸಿ ಜೀವಜಲದ ಒರತೆಗಳ ಬಳಿಗೆ ನಡಿಸುವನು. ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು” ಎಂದು ಹೇಳಿದನು.

ಪಾದಟಿಪ್ಪಣಿ