ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕಟನೆ 3:1-22

3  “ಸಾರ್ದಿಸಿನಲ್ಲಿರುವ ಸಭೆಯ ದೂತನಿಗೆ ಬರೆ: ದೇವರ ಏಳು ಆತ್ಮಗಳನ್ನೂ ಏಳು ನಕ್ಷತ್ರಗಳನ್ನೂ ಹೊಂದಿರುವವನು ಹೇಳುವುದೇನೆಂದರೆ, ‘ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು; ಜೀವಿಸುವವನು ಎಂಬ ಹೆಸರು ನಿನಗಿರುವುದಾದರೂ ನೀನು ಸತ್ತವನಾಗಿದ್ದೀ.  ಎಚ್ಚರವಾಗು ಮತ್ತು ಸಾಯಲು ಸಿದ್ಧವಾಗಿದ್ದ ಉಳಿದಿರುವ ಸಂಗತಿಗಳನ್ನು ಬಲಪಡಿಸು, ಏಕೆಂದರೆ ನನ್ನ ದೇವರ ಮುಂದೆ ನಿನ್ನ ಕ್ರಿಯೆಗಳು ಸಂಪೂರ್ಣವಾಗಿ ಮಾಡಲ್ಪಟ್ಟದ್ದನ್ನು ನಾನು ನೋಡಿಲ್ಲ.  ಆದುದರಿಂದ, ನೀನು ಹೇಗೆ ಪಡೆದುಕೊಂಡಿದ್ದೀ, ಹೇಗೆ ಕೇಳಿಸಿಕೊಂಡಿದ್ದೀ ಎಂಬುದನ್ನು ನೆನಪಿಗೆ ತಂದುಕೊಳ್ಳುತ್ತಾ ಅದನ್ನು ಅನುಸರಿಸುತ್ತಾ ಇರು ಮತ್ತು ಪಶ್ಚಾತ್ತಾಪಪಡು. ನಿಶ್ಚಯವಾಗಿಯೂ ನೀನು ಎಚ್ಚರಗೊಳ್ಳದಿದ್ದರೆ ನಾನು ಕಳ್ಳನಂತೆ ಬರುವೆನು ಮತ್ತು ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಅದು ನಿನಗೆ ಗೊತ್ತಾಗುವುದೇ ಇಲ್ಲ.  “ ‘ಆದರೂ ತಮ್ಮ ಮೇಲಂಗಿಗಳನ್ನು ಮಲಿನಮಾಡಿಕೊಳ್ಳದಿರುವಂಥ ಕೆಲವು ಜನರು ಸಾರ್ದಿಸಿನಲ್ಲಿ ನಿನಗಿದ್ದಾರೆ; ಅವರು ಯೋಗ್ಯರಾಗಿರುವುದರಿಂದ ಬಿಳೀ ವಸ್ತ್ರಗಳನ್ನು ಧರಿಸಿಕೊಂಡು ನನ್ನೊಂದಿಗೆ ನಡೆಯುವರು.  ಹೀಗೆ ಜಯಿಸುವವನಿಗೆ ಬಿಳೀ ಮೇಲಂಗಿಗಳನ್ನು ಹೊದಿಸಲಾಗುವುದು; ಜೀವದ ಪುಸ್ತಕದಿಂದ ನಾನು ಅವನ ಹೆಸರನ್ನು ಎಂದಿಗೂ ಅಳಿಸುವುದಿಲ್ಲ. ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ನಾನು ಅವನ ಹೆಸರನ್ನು ಒಪ್ಪಿಕೊಳ್ಳುವೆನು.  ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.’  “ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ: ಪವಿತ್ರನೂ ಸತ್ಯವಂತನೂ ದಾವೀದನ ಬೀಗದ ಕೈಯುಳ್ಳವನೂ ಯಾರೂ ಮುಚ್ಚದಂತೆ ತೆರೆಯುವವನೂ ಯಾರೂ ತೆರೆಯದಂತೆ ಮುಚ್ಚುವವನೂ ಆಗಿರುವವನು ಹೇಳುವುದೇನೆಂದರೆ,   ‘ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು​—⁠ನೋಡು, ನಿನ್ನ ಮುಂದೆ ತೆರೆದಿರುವ ಬಾಗಿಲನ್ನು ಇಟ್ಟಿದ್ದೇನೆ, ಯಾರೂ ಅದನ್ನು ಮುಚ್ಚಲಾರರು​—⁠ನಿನಗೆ ಸ್ವಲ್ಪ ಶಕ್ತಿಯಿದೆ ಮತ್ತು ನೀನು ನನ್ನ ವಾಕ್ಯವನ್ನು ಕೈಕೊಂಡು ನಡೆದಿದ್ದೀ ಹಾಗೂ ನನ್ನ ಹೆಸರಿಗೆ ಅಯೋಗ್ಯವಾಗಿ ನಡೆಯಲಿಲ್ಲ.  ಇಗೋ, ಯೆಹೂದ್ಯ​ರಲ್ಲದಿದ್ದರೂ ತಾವು ಯೆಹೂದ್ಯರೆಂದು ಸುಳ್ಳಾಗಿ ಹೇಳಿಕೊಳ್ಳುವ ಸೈತಾನನ ಸಭಾಮಂದಿರದವರನ್ನು ನಾನು ನಿನಗೆ ಒಪ್ಪಿಸುವೆನು; ಅವರು ಬಂದು ನಿನ್ನ ಪಾದಗಳ ಮುಂದೆ ಪ್ರಣಾಮಮಾಡುವಂತೆಯೂ ನಾನು ನಿನ್ನನ್ನು ಪ್ರೀತಿಸಿದ್ದೇನೆ ಎಂಬುದನ್ನು ಅವರು ತಿಳಿದುಕೊಳ್ಳುವಂತೆಯೂ ಮಾಡುವೆನು. 10  ನನ್ನ ತಾಳ್ಮೆಯ ​ಕುರಿತಾದ ಮಾತನ್ನು ನೀನು ಕಾಪಾಡಿಕೊಂಡದ್ದರಿಂದ ಭೂಮಿಯಲ್ಲಿ ವಾಸಿಸುತ್ತಿರುವವರ ಮೇಲೆ ಪರೀಕ್ಷೆಯನ್ನು ಬರಮಾಡಲಿಕ್ಕಾಗಿ ಇಡೀ ನಿವಾಸಿತ ಭೂಮಿಯ ಮೇಲೆ ಬರಲಿಕ್ಕಿರುವ ಪರೀಕ್ಷೆಯ ಗಳಿಗೆಯಲ್ಲಿ ನಾನು ನಿನ್ನನ್ನು ಕಾಪಾಡುವೆನು. 11  ನಾನು ಬೇಗನೆ ಬರುತ್ತೇನೆ. ನಿನ್ನ ಕಿರೀಟವನ್ನು ಯಾರೂ ತೆಗೆದುಕೊಳ್ಳದಂತೆ ನಿನಗಿರುವುದನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತಾ ಇರು. 12  “ ‘ಜಯಿಸುವವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವನ್ನಾಗಿ ಮಾಡುವೆನು; ಅವನು ಇನ್ನು ಮುಂದೆ ಅದರೊಳಗಿಂದ ಹೊರಗೆ ಹೋಗುವುದೇ ಇಲ್ಲ ಮತ್ತು ಅವನ ಮೇಲೆ ನನ್ನ ದೇವರ ಹೆಸರನ್ನೂ ನನ್ನ ದೇವರ ಬಳಿಯಿಂದ ಸ್ವರ್ಗದಿಂದ ಇಳಿದುಬರುವ ಹೊಸ ಯೆರೂಸಲೇಮ್‌ ಎಂಬ ನನ್ನ ದೇವರ ಪಟ್ಟಣದ ಹೆಸರನ್ನೂ ನನ್ನ ಆ ಹೊಸ ಹೆಸರನ್ನೂ ಬರೆಯುವೆನು. 13  ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.’ 14  “ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ: ನಂಬಿಗಸ್ತನೂ ಸತ್ಯ ಸಾಕ್ಷಿಯೂ ದೇವರಿಂದಾದ ಸೃಷ್ಟಿಗೆ ಆದಿಯೂ ಆಗಿರುವ ಆಮೆನ್‌ ಎಂಬವನು ಹೇಳುವುದೇನೆಂದರೆ, 15  ‘ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು; ನೀನು ತಣ್ಣಗೂ ಇಲ್ಲ, ಬಿಸಿಯೂ ಇಲ್ಲ. ನೀನು ತಣ್ಣಗೆ ಇಲ್ಲವೆ ಬಿಸಿ ಆಗಿದ್ದರೆ ಒಳ್ಳೇದಿತ್ತು. 16  ನೀನು ಬಿಸಿಯಾಗಿಯೂ ಇಲ್ಲದೆ ತಣ್ಣಗೂ ಇಲ್ಲದೆ ಉಗುರುಬೆಚ್ಚಗಿರುವುದರಿಂದ ನಾನು ನಿನ್ನನ್ನು ನನ್ನ ಬಾಯೊಳಗಿಂದ ಕಾರಲಿದ್ದೇನೆ. 17  “ನಾನು ಐಶ್ವರ್ಯವಂತನು, ನಾನು ಐಶ್ವರ್ಯವನ್ನು ಗಳಿಸಿದ್ದೇನೆ ಮತ್ತು ನನಗೆ ಯಾವುದರ ಆವಶ್ಯಕತೆಯೂ ಇಲ್ಲ” ಎಂದು ಹೇಳುತ್ತೀ; ಆದರೆ ನೀನು ದುರವಸ್ಥೆಯುಳ್ಳವನು, ಶೋಚನೀಯ ಸ್ಥಿತಿಯಲ್ಲಿರುವವನು, ಬಡವನು, ಕುರುಡನು ಮತ್ತು ಬಟ್ಟೆಯಿಲ್ಲದವನು ಆಗಿದ್ದೀ ಎಂಬುದನ್ನು ತಿಳಿಯದೇ ಇದ್ದೀ. 18  ನೀನು ಐಶ್ವರ್ಯವಂತನಾಗುವಂತೆ ಬೆಂಕಿಯಿಂದ ಪರಿಷ್ಕರಿಸಲ್ಪಟ್ಟ ಚಿನ್ನವನ್ನೂ ಲಜ್ಜಾಸ್ಪದವಾದ ನಿನ್ನ ಬೆತ್ತಲೆತನ ಕಾಣಿಸದಂತೆ ಧರಿಸಿಕೊಳ್ಳಲಿಕ್ಕಾಗಿ ಬಿಳೀ ಮೇಲಂಗಿಗಳನ್ನೂ ನೀನು ನೋಡಸಾಧ್ಯವಾಗುವಂತೆ ನಿನ್ನ ಕಣ್ಣುಗಳಿಗೆ ಹಚ್ಚಲಿಕ್ಕಾಗಿ ಅಂಜನವನ್ನೂ ನನ್ನಿಂದ ಕೊಂಡುಕೊಳ್ಳುವಂತೆ ನಿನಗೆ ಬುದ್ಧಿಹೇಳುತ್ತೇನೆ. 19  “ ‘ಯಾರ ಬಗ್ಗೆ ನನಗೆ ಮಮತೆ​ಯಿದೆಯೋ ಅವರೆಲ್ಲರನ್ನು ನಾನು ಗದರಿಸುತ್ತೇನೆ ಮತ್ತು ಶಿಸ್ತುಗೊಳಿಸುತ್ತೇನೆ. ಆದುದರಿಂದ ಹುರುಪುಳ್ಳವನಾಗಿರು ಮತ್ತು ಪಶ್ಚಾತ್ತಾಪಪಡು. 20  ಇಗೋ, ನಾನು ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಸ್ವರವನ್ನು ಕೇಳಿ ಬಾಗಿಲನ್ನು ತೆರೆಯುವುದಾದರೆ, ನಾನು ಅವನ ಮನೆಯೊಳಗೆ ಬಂದು ಅವನೊಂದಿಗೆ ಸಂಧ್ಯಾ ಭೋಜನವನ್ನು ಮಾಡುವೆನು ಮತ್ತು ಅವನು ನನ್ನೊಂದಿಗೆ ಭೋಜನಮಾಡುವನು. 21  ನಾನು ಜಯಹೊಂದಿ ನನ್ನ ತಂದೆಯೊಂದಿಗೆ ಆತನ ಸಿಂಹಾಸನದಲ್ಲಿ ಕುಳಿತುಕೊಂಡಂತೆಯೇ ಜಯಿಸುವವನಿಗೆ ನನ್ನ ಸಿಂಹಾಸನದಲ್ಲಿ ನನ್ನೊಂದಿಗೆ ಕುಳಿತುಕೊಳ್ಳುವಂತೆ ಅನುಗ್ರಹಿಸುವೆನು. 22  ಪವಿತ್ರಾತ್ಮವು ಸಭೆಗಳಿಗೆ ಹೇಳುವುದನ್ನು ಕಿವಿಯುಳ್ಳವನು ಕೇಳಲಿ.’ ”

ಪಾದಟಿಪ್ಪಣಿ