ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಕೊಲೊಸ್ಸೆ 2:1-23

2  ನಿಮ್ಮ ಪರವಾಗಿಯೂ ಲವೊದಿಕೀಯದವರ ಪರವಾಗಿಯೂ ನನ್ನನ್ನು ಕಣ್ಣಾರೆ ಕಾಣದಿರುವವರೆಲ್ಲರ ಪರವಾಗಿಯೂ ನಾನು ಎಷ್ಟು ದೊಡ್ಡ ಹೋರಾಟವನ್ನು ಮಾಡುತ್ತಿದ್ದೇನೆ ಎಂಬುದನ್ನು ನೀವು ತಿಳಿಯಬೇಕೆಂದು ಬಯಸುತ್ತೇನೆ.  ಅವರ ಹೃದಯಗಳಿಗೆ ಸಾಂತ್ವನ ದೊರೆತು, ಅವರು ಪ್ರೀತಿಯಲ್ಲಿ ಹೊಂದಿಕೆಯಿಂದ ಒಟ್ಟಿಗೆ ಕಟ್ಟಲ್ಪಟ್ಟು, ತಿಳಿವಳಿಕೆಯಿಂದ ಕೂಡಿದ ಪೂರ್ಣ ಭರವಸೆಯ ಎಲ್ಲ ಸಮೃದ್ಧಿಯನ್ನೂ ದೇವರ ಪವಿತ್ರ ರಹಸ್ಯವಾಗಿರುವ ಕ್ರಿಸ್ತನ ಕುರಿತಾದ ನಿಷ್ಕೃಷ್ಟ ಜ್ಞಾನವನ್ನೂ ಗಳಿಸಬೇಕೆಂಬುದೇ ನನ್ನ ಉದ್ದೇಶ.  ಅವನಲ್ಲಿ ವಿವೇಕ ಮತ್ತು ಜ್ಞಾನದ ಎಲ್ಲ ನಿಕ್ಷೇಪಗಳು ಜಾಗರೂಕತೆಯಿಂದ ಗೋಪ್ಯವಾಗಿಡಲ್ಪಟ್ಟಿವೆ.  ಯಾವನಾದರೂ ತನ್ನ ಒಡಂಬಡಿಸುವಂಥ ವಾಗ್ವಾದಗಳಿಂದ ನಿಮ್ಮನ್ನು ಮರುಳುಮಾಡಬಾರದೆಂಬ ಕಾರಣಕ್ಕಾಗಿ ನಾನು ಇದನ್ನು ಹೇಳುತ್ತಿದ್ದೇನೆ.  ನಾನು ಶಾರೀರಿಕವಾಗಿ ನಿಮ್ಮೊಂದಿಗಿಲ್ಲದಿದ್ದರೂ ನನ್ನ ಮನಸ್ಸು ನಿಮ್ಮೊಂದಿಗಿದ್ದು ನೀವು ಒಳ್ಳೇ ಕ್ರಮದಲ್ಲಿ ನಡೆಯುತ್ತಿರುವುದನ್ನೂ ಕ್ರಿಸ್ತ ನಂಬಿಕೆಯಲ್ಲಿ ಸ್ಥಿರರಾಗಿ ನಿಂತಿರುವುದನ್ನೂ ನೋಡಿ ಹರ್ಷಿಸುತ್ತೇನೆ.  ಆದುದರಿಂದ ನೀವು ಕರ್ತನಾದ ಕ್ರಿಸ್ತ ಯೇಸುವನ್ನು ಸ್ವೀಕರಿಸಿರುವಂತೆಯೇ ಅವನೊಂದಿಗೆ ಐಕ್ಯದಲ್ಲಿ ನಡೆಯುತ್ತಾ ಇರಿ;  ಅವನಲ್ಲಿ ಬೇರೂರಿದವರಾಗಿದ್ದು ಕಟ್ಟಲ್ಪಡುತ್ತಾ ನಿಮಗೆ ಕಲಿಸಲ್ಪಟ್ಟ ಪ್ರಕಾರವೇ ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಡುತ್ತಾ ಕೃತಜ್ಞತಾಸ್ತುತಿಯನ್ನು ಸಲ್ಲಿಸುತ್ತಾ ನಂಬಿಕೆಯಲ್ಲಿ ತುಂಬಿತುಳುಕಿರಿ.  ಎಚ್ಚರವಾಗಿರಿ! ಕ್ರಿಸ್ತನಿಗೆ ಅನುಸಾರವಾಗಿರದೆ ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿಯೂ ಈ ಲೋಕಕ್ಕೆ ಸೇರಿದ ಪ್ರಾಥಮಿಕ ವಿಷಯಗಳಿಗೆ ಅನುಸಾರವಾಗಿಯೂ ಇರುವ ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳ ಮೂಲಕ ಯಾವನಾದರೂ ನಿಮ್ಮನ್ನು ತನ್ನ ಬೇಟೆಯೋಪಾದಿ ಹಿಡಿದುಕೊಂಡು ಹೋಗಬಹುದು.  ಏಕೆಂದರೆ ದೈವಿಕ ಗುಣದ ಸರ್ವಸಂಪೂರ್ಣತೆ ದೈಹಿಕವಾಗಿ ನೆಲೆಸಿರುವುದು ಕ್ರಿಸ್ತನಲ್ಲೇ. 10  ಸಕಲ ಸರಕಾರ ಮತ್ತು ಅಧಿಕಾರದ ಶಿರಸ್ಸಾಗಿರುವ ಅವನ ಮೂಲಕವೇ ನೀವು ಪೂರ್ಣತೆಯನ್ನು ಹೊಂದಿದ್ದೀರಿ. 11  ಅವನೊಂದಿಗಿನ ಸಂಬಂಧದ ಮೂಲಕ ನೀವು ಸುನ್ನತಿಯನ್ನೂ ಹೊಂದಿದ್ದೀರಿ; ಇದು ಕೈಗಳಿಂದ ಮಾಡಲ್ಪಟ್ಟದ್ದಲ್ಲ, ದೇಹದಿಂದ ಪಾಪಭರಿತ ಶರೀರವನ್ನು ತೆಗೆದುಹಾಕುವ ಮೂಲಕ ಮಾಡಲ್ಪಡುವ ಸುನ್ನತಿಯಾಗಿದೆ. ಇದೇ ಕ್ರಿಸ್ತನಿಗೆ ಸೇರಿದ ಸುನ್ನತಿಯಾಗಿದೆ. 12  ಏಕೆಂದರೆ ನೀವು ಅವನ ದೀಕ್ಷಾಸ್ನಾನದಲ್ಲಿ ಅವನೊಂದಿಗೆ ಹೂಣಲ್ಪಟ್ಟಿರಿ ಮತ್ತು ಅವನನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಕಾರ್ಯಾಚರಣೆಯಲ್ಲಿ ನಂಬಿಕೆಯಿಡುವ ಮೂಲಕ ನೀವು ಸಹ ಅವನೊಂದಿಗಿನ ಸಂಬಂಧದಿಂದ ಎಬ್ಬಿಸಲ್ಪಟ್ಟಿರಿ. 13  ಮಾತ್ರವಲ್ಲದೆ, ನಿಮ್ಮ ಅಪರಾಧಗಳಿಂದಾಗಿಯೂ ಶರೀರದ ಸುನ್ನತಿಯಿಲ್ಲದ ಸ್ಥಿತಿಯಿಂದಾಗಿಯೂ ನೀವು ಸತ್ತವರಾಗಿದ್ದರೂ ದೇವರು ನಿಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ಆತನು ದಯಾಭಾವದಿಂದ ನಮ್ಮ ಎಲ್ಲ ಅಪರಾಧಗಳನ್ನು ಕ್ಷಮಿಸಿದನು 14  ಮತ್ತು ಶಾಸನಗಳನ್ನು ಒಳಗೂಡಿದ್ದು ನಮಗೆ ವಿರೋಧವಾಗಿದ್ದ ಹಸ್ತಲಿಖಿತ ದಾಖಲೆ ಪತ್ರವನ್ನು ಅಳಿಸಿಹಾಕಿದನು; ಆತನು ಅದನ್ನು ಯಾತನಾ ಕಂಬಕ್ಕೆ ಜಡಿಯುವ ಮೂಲಕ ನಮ್ಮ ದಾರಿಯಿಂದ ಅದನ್ನು ತೊಲಗಿಸಿಬಿಟ್ಟನು. 15  ಸರಕಾರಗಳನ್ನೂ ಅಧಿಕಾರಗಳನ್ನೂ ನಗ್ನಗೊಳಿಸಿ, ವಿಜಯೋತ್ಸವದ ಮೆರವಣಿಗೆಯಲ್ಲಿ ಯಾತನಾ ಕಂಬದ ಮೇಲೆ ಅವುಗಳನ್ನು ಜಯಿಸಲ್ಪಟ್ಟವುಗಳನ್ನಾಗಿ ಬಹಿರಂಗವಾಗಿ ಪ್ರದರ್ಶಿಸಿದನು. 16  ಆದುದರಿಂದ ತಿನ್ನುವ ಮತ್ತು ಕುಡಿಯುವ ವಿಷಯದಲ್ಲಿ ಅಥವಾ ಹಬ್ಬದ ವಿಷಯದಲ್ಲಿ ಅಥವಾ ಅಮಾವಾಸ್ಯೆಯನ್ನಾಗಲಿ ಸಬ್ಬತ್ತನ್ನಾಗಲಿ ಆಚರಿಸುವ ವಿಷಯದಲ್ಲಿ ಯಾವನೂ ನಿಮ್ಮನ್ನು ತೀರ್ಪುಮಾಡದಿರಲಿ. 17  ಅವು ಬರಬೇಕಾಗಿರುವ ಸಂಗತಿಗಳ ಛಾಯೆಯಾಗಿವೆ; ಆದರೆ ನಿಜತ್ವವು ಕ್ರಿಸ್ತನಿಗೆ ಸೇರಿದ್ದಾಗಿದೆ. 18  ಕಪಟ ದೀನತೆಯಲ್ಲಿಯೂ ದೇವದೂತರ ಆರಾಧನೆಯ ಒಂದು ರೂಪದಲ್ಲಿಯೂ ಆನಂದಿಸುವ ಯಾವ ಮನುಷ್ಯನೂ ನಿಮ್ಮ ಬಹುಮಾನವನ್ನು ನಿಮ್ಮಿಂದ ಕಸಿದುಕೊಳ್ಳಲು ಅವಕಾಶಕೊಡಬೇಡಿ; ಅಂಥ ವ್ಯಕ್ತಿಯು ತಾನು ನೋಡಿರುವ ಸಂಗತಿಗಳ ಮೇಲೆ “ನಿಲುವು ತೆಗೆದುಕೊಂಡಿರುತ್ತಾನೆ” ಮತ್ತು ತನ್ನ ಶಾರೀರಿಕ ಮನಃಸ್ಥಿತಿಯಿಂದಾಗಿ ಯಾವುದೇ ಕಾರಣವಿಲ್ಲದೆ ಉಬ್ಬಿಕೊಂಡವನಾಗಿರುತ್ತಾನೆ. 19  ಇಂಥವನು ಶಿರಸ್ಸಿಗೆ ಬಲವಾಗಿ ಅಂಟಿಕೊಂಡಿಲ್ಲ; ಆ ಶಿರಸ್ಸಾದವನಿಂದಲೇ ಇಡೀ ದೇಹಕ್ಕೆ ಅಗತ್ಯವಿರುವುದು ಒದಗಿಸಲ್ಪಟ್ಟು ಅದರ ಕೀಲುಗಳು ಮತ್ತು ಮೂಳೆನಾರುಗಳ ಮೂಲಕ ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು ದೇವರು ಒದಗಿಸುವ ಬೆಳವಣಿಗೆಯಲ್ಲಿ ಬೆಳೆಯುತ್ತಾ ಇರುತ್ತದೆ. 20  ಈ ಲೋಕಕ್ಕೆ ಸೇರಿದ ಪ್ರಾಥಮಿಕ ವಿಷಯಗಳ ಸಂಬಂಧದಲ್ಲಿ ನೀವು ಕ್ರಿಸ್ತನೊಂದಿಗೆ ಸತ್ತವರಾಗಿರುವಲ್ಲಿ, ಲೋಕದಲ್ಲಿ ಜೀವಿಸುತ್ತಾ ಇರುವವರಂತೆ ಅದರ ಆಜ್ಞಾವಿಧಿಗಳಿಗೆ ನಿಮ್ಮನ್ನು ಅಧೀನಪಡಿಸಿಕೊಂಡು, 21  “ಅದನ್ನು ತೆಗೆಯಬೇಡ, ರುಚಿನೋಡಬೇಡ, ಮುಟ್ಟಬೇಡ” 22  ಎನ್ನುತ್ತಾ, ತಿಂದ ನಂತರ ಇಲ್ಲದೆ ಹೋಗುವ ಪದಾರ್ಥಗಳ ವಿಷಯದಲ್ಲಿ ಮನುಷ್ಯರು ವಿಧಿಸಿದ ಆಜ್ಞೆಗಳನ್ನೂ ಬೋಧನೆಗಳನ್ನೂ ಅನುಸರಿಸುವುದು ಏಕೆ? 23  ಈ ಎಲ್ಲ ಸಂಗತಿಗಳು ಸ್ವಕಲ್ಪಿತ ಆರಾಧನಾ ರೀತಿಯಲ್ಲಿ ಮತ್ತು ಕಪಟ ದೀನತೆಯಲ್ಲಿ ವಿವೇಕದ ತೋರಿಕೆಯುಳ್ಳದ್ದಾಗಿದ್ದು ದೇಹದಂಡನೆಯನ್ನು ಉಂಟುಮಾಡುವಂಥದ್ದಾಗಿವೆ; ಆದರೆ ಶಾರೀರಿಕ ಇಚ್ಛೆಗಳನ್ನು ನಿಗ್ರಹಿಸುವುದರಲ್ಲಿ ಅವು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.

ಪಾದಟಿಪ್ಪಣಿ