ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಆನ್‌ಲೈನ್‌ ಬೈಬಲ್ | ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ

ಇಬ್ರಿಯ 8:1-13

8  ಚರ್ಚಿಸಲ್ಪಡುತ್ತಿರುವ ವಿಷಯಗಳ ಮುಖ್ಯಾಂಶವೇನೆಂದರೆ, ನಮಗೆ ಇಂಥ ಮಹಾ ಯಾಜಕನಿದ್ದಾನೆ ಮತ್ತು ಅವನು ಸ್ವರ್ಗದಲ್ಲಿ ಮಹೋನ್ನತನ ಸಿಂಹಾಸನದ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.  ಅವನು ಪವಿತ್ರ ಸ್ಥಳದಲ್ಲಿ, ಮನುಷ್ಯನಲ್ಲ ಯೆಹೋವನೇ ಹಾಕಿದ ನಿಜವಾದ ಗುಡಾರದಲ್ಲಿ ಸಾರ್ವಜನಿಕ ಸೇವಕನಾಗಿದ್ದಾನೆ.  ಪ್ರತಿಯೊಬ್ಬ ಮಹಾ ಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಅರ್ಪಿಸಲು ನೇಮಿಸಲ್ಪಡುತ್ತಾನೆ; ಆದುದರಿಂದ ಅರ್ಪಿಸುವುದಕ್ಕೆ ಇವನಿಗೆ ಸಹ ಏನಾದರೂ ಬೇಕಾಗಿತ್ತು.  ಆದರೆ ಇವನು ಭೂಮಿಯಲ್ಲೇ ಇರುತ್ತಿದ್ದರೆ ಒಬ್ಬ ಯಾಜಕನಾಗಿ ಇರುತ್ತಿರಲಿಲ್ಲ, ಏಕೆಂದರೆ ಧರ್ಮಶಾಸ್ತ್ರಕ್ಕನುಸಾರ ಕಾಣಿಕೆಗಳನ್ನು ಅರ್ಪಿಸುವವರು ಇಲ್ಲಿದ್ದಾರೆ.  ಈ ಮನುಷ್ಯರು ಸ್ವರ್ಗದಲ್ಲಿರುವ ವಿಷಯಗಳ ಪ್ರತಿರೂಪವೂ ಛಾಯೆಯೂ ಆಗಿರುವ ಸ್ಥಳದಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸುತ್ತಿದ್ದಾರೆ; ಮೋಶೆಯು ಗುಡಾರವನ್ನು ಸಂಪೂರ್ಣಗೊಳಿಸಲಿಕ್ಕಿದ್ದಾಗ, “ನೋಡು, ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇಕು” ಎಂಬ ದೈವಿಕ ಆಜ್ಞೆಯು ಅವನಿಗೆ ಕೊಡಲ್ಪಟ್ಟಿತ್ತು.  ಆದರೆ ಯೇಸು ಈಗ ಅದಕ್ಕಿಂತಲೂ ಅತಿ ಶ್ರೇಷ್ಠವಾದ ಸಾರ್ವಜನಿಕ ಸೇವೆಯನ್ನು ಹೊಂದಿದವನಾಗಿದ್ದಾನೆ; ಇದರಿಂದಾಗಿ ಉತ್ತಮವಾದ ವಾಗ್ದಾನಗಳ ಮೇಲೆ ಕಾನೂನುಬದ್ಧವಾಗಿ ಸ್ಥಾಪಿಸಲ್ಪಟ್ಟಿರುವ ಹೋಲಿಕೆಯಲ್ಲಿ ಉತ್ತಮವಾಗಿರುವ ಒಡಂಬಡಿಕೆಗೆ ಅವನು ಮಧ್ಯಸ್ಥನೂ ಆಗಿದ್ದಾನೆ.  ಆ ಮೊದಲನೆಯ ಒಡಂಬಡಿಕೆಯು ದೋಷವಿಲ್ಲದ್ದಾಗಿದ್ದರೆ ಎರಡನೆಯ ಒಡಂಬಡಿಕೆಯ ಆವಶ್ಯಕತೆಯೇ ಇರುತ್ತಿರಲಿಲ್ಲ.  ಆದರೆ ಆತನು ಜನರಲ್ಲಿ ದೋಷವನ್ನು ಕಂಡುಹಿಡಿದು ಹೇಳಿದ್ದು: “ ‘ಇಗೋ, ನಾನು ಇಸ್ರಾಯೇಲ್‌ ಮನೆತನದೊಂದಿಗೂ ಯೆಹೂದ ಮನೆತನದೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು’ ಎಂದು ಯೆಹೋವನು ಹೇಳುತ್ತಾನೆ.  ‘ಈ ಒಡಂಬಡಿಕೆಯು ನಾನು ಇವರ ಪೂರ್ವಜರನ್ನು ಕೈಹಿಡಿದು ಈಜಿಪ್ಟ್‌ ದೇಶದೊಳಗಿಂದ ಕರೆದುಕೊಂಡು ಬಂದ ದಿನದಲ್ಲಿ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಗನುಸಾರವಾದದ್ದಲ್ಲ; ಏಕೆಂದರೆ ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ಮುಂದುವರಿಯಲಿಲ್ಲವಾದುದರಿಂದ ನಾನು ಅವರ ಕುರಿತು ಚಿಂತಿಸುವುದನ್ನು ನಿಲ್ಲಿಸಿಬಿಟ್ಟೆನು’ ಎಂದು ಯೆಹೋವನು ಹೇಳುತ್ತಾನೆ.” 10  “ ‘ಆ ದಿನಗಳ ಬಳಿಕ ನಾನು ಇಸ್ರಾಯೇಲ್‌ ಮನೆತನದೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಇದೇ; ನಾನು ನನ್ನ ನಿಯಮಗಳನ್ನು ಅವರ ಮನಸ್ಸಿನಲ್ಲಿ ಹಾಕುವೆನು ಮತ್ತು ಅವರ ಹೃದಯಗಳಲ್ಲಿ ಅವುಗಳನ್ನು ಬರೆಯುವೆನು. ನಾನು ಅವರಿಗೆ ದೇವರಾಗುವೆನು ಮತ್ತು ಅವರು ನನ್ನ ಜನರಾಗುವರು. 11  “ ‘ಅವರಲ್ಲಿ ತನ್ನ ಜೊತೆ ಪ್ರಜೆಗಾಗಲಿ ತನ್ನ ಸಹೋದರನಿಗಾಗಲಿ “ಯೆಹೋವನನ್ನು ತಿಳಿದುಕೊಳ್ಳಿರಿ!” ಎಂದು ಬೋಧಿಸಬೇಕಾಗುವುದಿಲ್ಲ. ಏಕೆಂದರೆ ಅವರಲ್ಲಿ ಚಿಕ್ಕವನಿಂದ ಹಿಡಿದು ದೊಡ್ಡವನ ತನಕ ಎಲ್ಲರೂ ನನ್ನನ್ನು ತಿಳಿದಿರುವರು. 12  ಅವರ ಅನೀತಿಯ ಕೃತ್ಯಗಳ ವಿಷಯದಲ್ಲಿ ನಾನು ಕರುಣೆಯುಳ್ಳವನಾಗಿರುವೆನು ಮತ್ತು ಅವರ ಪಾಪಗಳನ್ನು ಇನ್ನೆಂದಿಗೂ ಮನಸ್ಸಿಗೆ ತರುವುದಿಲ್ಲ’ ಎಂದು ಯೆಹೋವನು ಹೇಳುತ್ತಾನೆ.” 13  “ಒಂದು ಹೊಸ ಒಡಂಬಡಿಕೆ” ಎಂದು ಆತನು ಹೇಳುವಾಗ ಮೊದಲಿದ್ದದ್ದನ್ನು ಹಳೇದಾಗಿ ಮಾಡಿದ್ದಾನೆ. ಹಳೇದಾಗಿ ಮಾಡಲ್ಪಟ್ಟು ಮುದಿಯಾಗುತ್ತಾ ಇರುವಂಥದ್ದು ಈಗ ಇನ್ನೇನು ಅಳಿದುಹೋಗಲಿಕ್ಕಿದೆ.

ಪಾದಟಿಪ್ಪಣಿ