ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?

 ಅಧ್ಯಾಯ 23

ನಮ್ಮ ಸಾಹಿತ್ಯದ ರಚನೆ ಹಾಗೂ ಅನುವಾದವನ್ನು ಹೇಗೆ ಮಾಡಲಾಗುತ್ತದೆ?

ನಮ್ಮ ಸಾಹಿತ್ಯದ ರಚನೆ ಹಾಗೂ ಅನುವಾದವನ್ನು ಹೇಗೆ ಮಾಡಲಾಗುತ್ತದೆ?

ರೈಟಿಂಗ್‌ ಡಿಪಾರ್ಟ್ಮಂಟ್‌, ಅಮೆರಿಕ

ದಕ್ಷಿಣ ಕೊರಿಯ

ಅರ್ಮೇನಿಯ

ಬುರುಂಡಿ

ಶ್ರೀಲಂಕ

“ಸಕಲ ಕುಲ ಜನಾಂಗ ಭಾಷೆ ಮತ್ತು ಪ್ರಜೆಗಳಿಗೂ” ಸುವಾರ್ತೆಯನ್ನು ತಿಳಿಸುವ ಸಲುವಾಗಿ ನಾವು ಸುಮಾರು 750 ಭಾಷೆಗಳಲ್ಲಿ ಸಾಹಿತ್ಯ ಪ್ರಕಟಿಸುತ್ತೇವೆ. (ಪ್ರಕಟನೆ 14:6) ಅತಿ ದೊಡ್ಡ ಸವಾಲಿನ ಈ ಕೆಲಸವನ್ನು ಸಾಧಿಸಲು ನಮ್ಮಿಂದ ಸಾಧ್ಯವಾಗಿದ್ದು ಹೇಗೆ? ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಬರಹಗಾರರ ಮತ್ತು ಸಿದ್ಧಮನಸ್ಸಿನ ಅನುವಾದಕರ ಗುಂಪು ಅವಿರತವಾಗಿ ದುಡಿಯುತ್ತಿದ್ದಾರೆ. ಇವರೆಲ್ಲರೂ ಯೆಹೋವನ ಸಾಕ್ಷಿಗಳು.

ಲೇಖನಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ಸಿದ್ಧಗೊಳಿಸಲಾಗುತ್ತದೆ. ನಮ್ಮ ಕೇಂದ್ರ ಕಾರ್ಯಾಲಯದಲ್ಲಿ ರೈಟಿಂಗ್‌ ಡಿಪಾರ್ಟ್ಮಂಟ್‌ ಎಂಬ ವಿಭಾಗವಿದ್ದು ಆಡಳಿತ ಮಂಡಲಿಯ ಉಸ್ತುವಾರಿಯ ಕೆಳಗೆ ಕಾರ್ಯನಿರ್ವಹಿಸುತ್ತದೆ. ಈ ಡಿಪಾರ್ಟ್ಮಂಟ್‌ ನಮ್ಮ ಕೇಂದ್ರ ಕಾರ್ಯಾಲಯ ಹಾಗೂ ಕೆಲವು ಬ್ರಾಂಚ್‌ ಆಫೀಸುಗಳಲ್ಲಿರುವ ಲೇಖಕರಿಗೆ ಸಾಹಿತ್ಯ ರಚಿಸುವಂತೆ ನಿರ್ದೇಶನ ನೀಡಿ ಕಾರ್ಯಯೋಜನೆ ರೂಪಿಸುತ್ತದೆ. ನಮ್ಮಲ್ಲಿ ಪ್ರಪಂಚದ ನಾನಾ ಕಡೆಗಳ ಲೇಖಕರು ಇರುವುದರಿಂದ ವೈವಿಧ್ಯಮಯ ಸಂಸ್ಕೃತಿಗಳನ್ನು ಬಿಂಬಿಸುವಂಥ ಲೇಖನಗಳನ್ನು ಪ್ರಕಟಿಸಲು ಸಾಧ್ಯವಾಗುತ್ತದೆ. ಹೀಗೆ ಅಂತಾರಾಷ್ಟ್ರೀಯವಾಗಿ ಓದುಗರ ಮನಮುಟ್ಟಲು ಸಾಧ್ಯವಾಗಿದೆ.

ಲೇಖನಗಳನ್ನು ಅನುವಾದಕರಿಗೆ ಕಳುಹಿಸಲಾಗುತ್ತದೆ. ಲೇಖನಗಳನ್ನು ಬರೆದು ಪರಿಷ್ಕರಿಸಿ ಸಿದ್ಧಪಡಿಸಿದ ಮೇಲೆ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಅನುವಾದಕರ ತಂಡಗಳಿಗೆ ಕಳುಹಿಸಲಾಗುತ್ತದೆ. ಪ್ರಪಂಚದಾದ್ಯಂತವಿರುವ ಬೇರೆ ಬೇರೆ ಭಾಷೆಯ ಅನುವಾದಕರು ಅದನ್ನು ಭಾಷಾಂತರಿಸಿ, ತಿದ್ದಿ ಸಮಗ್ರ ರೂಪ ನೀಡುತ್ತಾರೆ. ಅವರು ಸರಿಯಾದ ಪದಗಳನ್ನು “ಹುಡುಕಿ ಆರಿಸಿ” ಇಂಗ್ಲಿಷ್‌ ಭಾಷೆಯ ಭಾವಾರ್ಥವನ್ನು ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲು ಶ್ರಮ ಹಾಕುತ್ತಾರೆ.—ಪ್ರಸಂಗಿ 12:10.

ಕಂಪ್ಯೂಟರ್‌ ಕೆಲಸದ ವೇಗವನ್ನು ಹೆಚ್ಚಿಸುತ್ತದೆ. ಲೇಖಕರ ಮತ್ತು ಅನುವಾದಕರ ಕೆಲಸವನ್ನು ಒಂದು ಕಂಪ್ಯೂಟರ್‌ ಮಾಡಸಾಧ್ಯವಿಲ್ಲ. ಆದರೆ ಗಣಕೀಕೃತ ಪದಕೋಶದಂಥ ಉಪಯುಕ್ತ ಕಂಪ್ಯೂಟರ್‌ ಸಾಧನ ಹಾಗೂ ಪ್ರೋಗ್ರಾಮ್‌ಗಳು ಕೆಲಸದ ವೇಗವನ್ನು ಹೆಚ್ಚಿಸಲು ನೆರವಾಗುತ್ತವೆ. ಯೆಹೋವನ ಸಾಕ್ಷಿಗಳೇ ಆವಿಷ್ಕರಿಸಿದ ‘ಮಲ್ಟಿ ಎಲೆಕ್ಟ್ರಾನಿಕ್‌ ಪಬ್ಲಿಷಿಂಗ್‌ ಸಿಸ್ಟಮ್‌’ (MEPS) ಎಂಬ ಪ್ರೋಗ್ರಾಮ್‌ ನೂರಾರು ಭಾಷೆಗಳ ಲಿಪಿಗಳನ್ನಲ್ಲದೆ ಚಿತ್ರಗಳ ಜೋಡಣೆಗೂ ಸಹಾಯಕಾರಿಯಾಗಿದ್ದು ಮುದ್ರಣ ತೀರ ಸುಲಭವಾಗಿದೆ.

ಕೇವಲ ಕೆಲವೇ ಸಾವಿರ ಮಂದಿ ಮಾತಾಡುವ ಭಾಷೆಯಲ್ಲಿಯೂ ನಮ್ಮ ಸಾಹಿತ್ಯ ಮುದ್ರಣಗೊಳ್ಳುತ್ತಿದೆ. ನಾವೇಕೆ ಇಷ್ಟೆಲ್ಲಾ ಪ್ರಯತ್ನ ಶ್ರಮ ಹಾಕುತ್ತೇವೆ? ಏಕೆಂದರೆ, “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎನ್ನುವುದು ಯೆಹೋವ ದೇವರ ಇಷ್ಟವಾಗಿದೆ.—1 ತಿಮೊಥೆಯ 2:3, 4.

  • ನಮ್ಮ ಸಾಹಿತ್ಯವನ್ನು ಹೇಗೆ ಸಿದ್ಧಪಡಿಸಲಾಗುತ್ತದೆ?

  • ನಮ್ಮ ಸಾಹಿತ್ಯವನ್ನು ನೂರಾರು ಭಾಷೆಗಳಿಗೆ ಅನುವಾದಿಸುವ ಉದ್ದೇಶವೇನು?