ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ನಮಗೆ ಕಲಿಸುವ ಪಾಠಗಳು

ಭಾಗ 7-ಪರಿಚಯ

ಭಾಗ 7-ಪರಿಚಯ

ಈ ಭಾಗದಲ್ಲಿ ಸೌಲ ಹಾಗೂ ದಾವೀದನ ಜೀವನ ಕಥೆಗಳಿವೆ. ಮೊದಲು ಸೌಲ ದೀನನಾಗಿದ್ದ. ಕ್ರಮೇಣ ಬದಲಾಗಿ ದೇವರ ಮಾತಿಗೆ ಬೆಲೆಕೊಡಲಿಲ್ಲ. ಯೆಹೋವನು ಸೌಲನನ್ನು ತಿರಸ್ಕರಿಸಿ ದಾವೀದನನ್ನು ರಾಜನಾಗಿ ಅಭಿಷೇಕಿಸುವಂತೆ ಸಮುವೇಲನಿಗೆ ತಿಳಿಸಿದ. ಸೌಲ ಹೊಟ್ಟೆಕಿಚ್ಚಿನಿಂದ ದಾವೀದನನ್ನು ಅನೇಕ ಬಾರಿ ಕೊಲ್ಲಲು ಪ್ರಯತ್ನಿಸಿದ. ಆದರೆ ದಾವೀದ ಯಾವತ್ತೂ ಸೌಲನ ಮೇಲೆ ಸೇಡು ತೀರಿಸಲಿಲ್ಲ. ಸೌಲನ ಮಗ ಯೋನಾತಾನನಿಗೆ ದಾವೀದನನ್ನು ಆರಿಸಿದ್ದು ಯೆಹೋವನೇ ಎಂದು ಗೊತ್ತಿತ್ತು. ಹಾಗಾಗಿ ಅವನು ದಾವೀದನಿಗೆ ನಿಷ್ಠನಾಗಿದ್ದ. ಮುಂದೆ ದಾವೀದ ಕೆಲವು ಗಂಭೀರ ತಪ್ಪುಗಳನ್ನು ಮಾಡಿದ. ಆದರೆ ಅವನು ಯೆಹೋವನು ಕೊಟ್ಟ ಶಿಸ್ತನ್ನು ತಿರಸ್ಕರಿಸಲಿಲ್ಲ. ನೀವು ಹೆತ್ತವರಾಗಿದ್ದರೆ, ಯೆಹೋವನು ಮಾಡಿರುವ ಏರ್ಪಾಡುಗಳನ್ನು ಸದಾ ಬೆಂಬಲಿಸುವುದು ತುಂಬ ಪ್ರಾಮುಖ್ಯವೆಂದು ಅರ್ಥಮಾಡಿಕೊಳ್ಳಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ.

ಈ ಭಾಗದಲ್ಲಿ

ಪಾಠ 39

ಇಸ್ರಾಯೇಲ್ಯರ ಮೊದಲ ರಾಜ

ದೇವರು ಇಸ್ರಾಯೇಲ್ಯರನ್ನು ಮಾರ್ಗದರ್ಶಿಸಲು ನ್ಯಾಯಸ್ಥಾಪಕರನ್ನು ನೀಡಿದನು, ಆದರೆ ಅವರು ತಮಗೊಬ್ಬ ರಾಜ ಬೇಕು ಎಂದು ಕೇಳಿದರು. ಸಮುವೇಲನು ಸೌಲನನ್ನು ರಾಜನಾಗಿ ಅಭಿಷೇಕಿಸಿದ ಆದರೆ ಸಮಯ ಕಳೆದಂತೆ ಸೌಲನನ್ನು ದೇವರು ತಿರಸ್ಕರಿಸಿದನು. ಯಾಕೆ?

ಪಾಠ 40

ದಾವೀದ ಮತ್ತು ಗೊಲ್ಯಾತ

ಯೆಹೋವನು ದಾವೀದನನ್ನು ಇಸ್ರಾಯೇಲಿನ ರಾಜನಾಗುವಂತೆ ಆರಿಸುತ್ತಾನೆ ಮತ್ತು ಆ ಆಯ್ಕೆ ಉತ್ತಮವಾಗಿತ್ತೆಂದು ದಾವೀದನು ತೋರಿಸಿಕೊಡುತ್ತಾನೆ.

ಪಾಠ 41

ದಾವೀದ ಮತ್ತು ಸೌಲ

ಇವರಲ್ಲಿ ಒಬ್ಬನು ಇನ್ನೊಬ್ಬನನ್ನು ದ್ವೇಷಿಸಿದ್ದು ಯಾಕೆ ಮತ್ತು ದ್ವೇಷಕ್ಕೆ ಗುರಿಯಾದವನು ಹೇಗೆ ಪ್ರತಿಕ್ರಿಯಿಸಿದನು?

ಪಾಠ 42

ಧೈರ್ಯಶಾಲಿ ಹಾಗೂ ನಿಷ್ಠಾವಂತ ಯೋನಾತಾನ

ರಾಜನ ಮಗ ದಾವೀದನ ಸ್ನೇಹಿತನಾದ.

ಪಾಠ 43

ರಾಜ ದಾವೀದ ಮಾಡಿದ ದೊಡ್ಡ ಪಾಪ

ಒಂದು ತಪ್ಪಾದ ತೀರ್ಮಾನ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.