ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 14—ಪರಿಚಯ

ಭಾಗ 14—ಪರಿಚಯ

ಆರಂಭದ ಕ್ರೈಸ್ತರು ಎಲ್ಲಾ ಕಡೆಗಳಲ್ಲೂ ರಾಜ್ಯದ ಸುವಾರ್ತೆಯನ್ನು ಸಾರಿದರು. ಎಲ್ಲಿ ಸಾರಬೇಕು ಎಂದು ಯೇಸು ಅವರಿಗೆ ಮಾರ್ಗದರ್ಶಿಸಿದನು. ಅದ್ಭುತಕರವಾಗಿ ಜನರ ಸ್ವಂತ ಭಾಷೆಯಲ್ಲೇ ಕಲಿಸುವಂತೆ ಮಾಡಿದನು. ಕಡು ಹಿಂಸೆಯನ್ನು ಎದುರಿಸಲು ಯೆಹೋವನು ಅವರಿಗೆ ಧೈರ್ಯ, ಶಕ್ತಿ ಕೊಟ್ಟನು.

ಯೇಸು ಅಪೊಸ್ತಲ ಯೋಹಾನನಿಗೆ ಯೆಹೋವನ ಮಹಿಮೆಯ ಬಗ್ಗೆ ಒಂದು ದರ್ಶನ ತೋರಿಸಿದನು. ಇನ್ನೊಂದರಲ್ಲಿ, ಸ್ವರ್ಗದ ರಾಜ್ಯ ಸೈತಾನನ ಮೇಲೆ ಜಯ ಸಾಧಿಸಿ ಅವನ ಆಳ್ವಿಕೆಯನ್ನು ಶಾಶ್ವತವಾಗಿ ತೆಗೆದುಹಾಕುವುದನ್ನು ಕಂಡನು. ಯೇಸು ರಾಜನಾಗಿ ಮತ್ತು ಒಂದು ಲಕ್ಷ ನಲವತ್ತನಾಲ್ಕು ಸಾವಿರ ಮಂದಿ ಸಹರಾಜರಾಗಿ ಆಳುವುದನ್ನೂ ನೋಡಿದನು. ಜೊತೆಗೆ, ಇಡೀ ಭೂಮಿ ಪರದೈಸಾಗಿ ಎಲ್ಲರೂ ಶಾಂತಿ ಐಕ್ಯತೆಯಿಂದ ಯೆಹೋವನನ್ನು ಆರಾಧಿಸುವುದನ್ನು ನೋಡಿದನು.

ಈ ಭಾಗದಲ್ಲಿ

ಪಾಠ 94

ಶಿಷ್ಯರ ಮೇಲೆ ಪವಿತ್ರಾತ್ಮ ಬಂತು

ಪವಿತ್ರಾತ್ಮದಿಂದ ಅವರು ಯಾವ ಅದ್ಭುತ ಮಾಡಿದರು?

ಪಾಠ 95

ಯಾವುದೂ ಅವರನ್ನು ತಡೆಯಲಿಲ್ಲ

ಯೇಸುವನ್ನು ಕೊಂದ ಧಾರ್ಮಿಕ ಮುಖಂಡರು ಆತನ ಶಿಷ್ಯರ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು. ಆದರೆ ಅವರಿಂದ ಆಗಲಿಲ್ಲ.

ಪಾಠ 96

ಯೇಸು ಸೌಲನನ್ನು ಆರಿಸಿಕೊಂಡನು

ಸೌಲನು ಕ್ರೈಸ್ತರ ಬದ್ಧ ವೈರಿಯಾಗಿದ್ದನು. ಆದರೆ ಆಮೇಲೆ ಬದಲಾದನು.

ಪಾಠ 97

ಕೊರ್ನೇಲ್ಯನು ಪವಿತ್ರಾತ್ಮವನ್ನು ಪಡೆದನು

ಕೊರ್ನೇಲ್ಯನು ಯೆಹೂದ್ಯನಲ್ಲದಿದ್ದರೂ, ಅವನ ಮನೆಗೆ ಹೋಗುವಂತೆ ದೇವರು ಪೇತ್ರನನ್ನು ಏಕೆ ಕಳುಹಿಸಿದನು?

ಪಾಠ 98

ಕ್ರೈಸ್ತ ಧರ್ಮ ಅನೇಕ ದೇಶಗಳಿಗೆ ಹಬ್ಬಿತು

ಅಪೊಸ್ತಲ ಪೌಲನು ಮತ್ತು ಅವನ ಮಿಷೆನರಿ ಜೊತೆಗಾರರು ದೂರದೂರುಗಳಿಗೆ ಸಾರುವ ಕೆಲಸವನ್ನು ಆರಂಭಿಸಿದರು.

ಪಾಠ 99

ಸತ್ಯ ಕಲಿತ ಸೆರೆಮನೆಯ ಅಧಿಕಾರಿ

ಈ ಕಥೆಯಲ್ಲಿ ದೆವ್ವ, ಭೂಕಂಪ ಮತ್ತು ಕತ್ತಿಯ ಬಗ್ಗೆ ಏನು ಹೇಳಲಾಗಿದೆ?

ಪಾಠ 100

ಪೌಲ ಮತ್ತು ತಿಮೊಥೆಯ

ಅವರಿಬ್ಬರು ಸ್ನೇಹಿತರಾಗಿ, ಜೊತೆ ಸೇವಕರಾಗಿ ಅನೇಕ ವರ್ಷಗಳ ತನಕ ಕೆಲಸಮಾಡಿದರು.

ಪಾಠ 101

ಪೌಲನನ್ನು ರೋಮಿಗೆ ಕಳುಹಿಸಲಾಯಿತು

ಪ್ರಯಾಣದುದ್ದಕ್ಕೂ ಅಪಾಯಗಳು ಎದುರಾದವು. ಆದರೆ ಅವು ಯಾವುವೂ ಈ ಅಪೊಸ್ತಲನನ್ನು ತಡೆಯಲಿಲ್ಲ.

ಪಾಠ 102

ಯೋಹಾನನು ಕಂಡ ದರ್ಶನಗಳು

ಭವಿಷ್ಯತ್ತಿನ ಬಗ್ಗೆ ಒಂದರ ನಂತರ ಒಂದು ದರ್ಶನಗಳನ್ನು ಯೇಸು ಅವನಿಗೆ ತೋರಿಸಿದನು.

ಪಾಠ 103

“ನಿನ್ನ ರಾಜ್ಯ ಬರಲಿ”

ಯೋಹಾನನು ಬರೆದ ಪ್ರಕಟನೆ ದೇವರ ರಾಜ್ಯ ಬಂದಾಗ ಭೂಮಿಯ ಮೇಲೆ ಜೀವನ ಹೇಗಿರುತ್ತೆ ಅಂತ ತಿಳಿಸುತ್ತೆ.