ಈ ಭಾಗದಿಂದ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿರುವ ಮಾಹಿತಿ ಶುರುವಾಗುತ್ತದೆ. ಯೇಸು ಒಂದು ಪುಟ್ಟ ಊರಿನ ಬಡ ಕುಟುಂಬದಲ್ಲಿ ಜನಿಸಿದನು. ಬಡಗಿಯಾದ ತನ್ನ ತಂದೆಯೊಟ್ಟಿಗೆ ಕೆಲಸ ಮಾಡಿದನು. ಮನುಷ್ಯರನ್ನು ರಕ್ಷಿಸುವ ರಕ್ಷಕ ಯೇಸುವಾಗಿದ್ದನು. ಯೆಹೋವನು ಯೇಸುವನ್ನು ದೇವರ ರಾಜ್ಯದ ರಾಜನಾಗಿ ಆರಿಸಿಕೊಂಡಿದ್ದನು. ಯೇಸು ಯಾವ ಕುಟುಂಬದಲ್ಲಿ, ಎಂಥ ವಾತಾವರಣದಲ್ಲಿ ಬೆಳೆಯಬೇಕೆಂದು ಯೆಹೋವನು ಆರಿಸಿದನು. ನೀವು ಹೆತ್ತವರಾಗಿರುವಲ್ಲಿ, ಇದರ ಬಗ್ಗೆ ಗಣ್ಯತೆ ಬೆಳೆಸಿಕೊಳ್ಳಲು ಮಗುವಿಗೆ ಸಹಾಯ ಮಾಡಿ. ಕೊಲೆಗಡುಕ ಹೆರೋದನಿಂದ ಯೆಹೋವನು ಯೇಸುವನ್ನು ಹೇಗೆ ಕಾಪಾಡಿದನು ಮತ್ತು ಯೆಹೋವನ ಉದ್ದೇಶವನ್ನು ತಪ್ಪಿಸಲು ಯಾರಿಂದಲೂ ಯಾಕೆ ಸಾಧ್ಯವಿಲ್ಲ ಎನ್ನುವುದನ್ನು ಪರಿಗಣಿಸಿ. ಯೇಸುವಿಗಾಗಿ ದಾರಿ ಸಿದ್ಧಮಾಡುವಂತೆ ಯೆಹೋವನು ಯೋಹಾನನನ್ನು ಹೇಗೆ  ಬಳಸಿದನೆಂದು ತಿಳಿಸಿ. ಯೇಸು ತನಗೆ ದೈವೀಕ ಜ್ಞಾನ ಇಷ್ಟವೆಂದು ಚಿಕ್ಕವಯಸ್ಸಿನಿಂದಲೇ ಹೇಗೆ ತೋರಿಸಿದನೆಂದು ಮಗುವಿಗೆ ಒತ್ತಿ ಹೇಳಿ.