ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 1-ಪರಿಚಯ

ಭಾಗ 1-ಪರಿಚಯ

ಬೈಬಲಿನ ಮೊದಲನೇ ಅಧ್ಯಾಯವು ಯೆಹೋವ ದೇವರು ಸ್ವರ್ಗದಲ್ಲೂ, ಭೂಮಿಯಲ್ಲೂ ಮಾಡಿದ ಸುಂದರ ವಿಷಯಗಳ ಬಗ್ಗೆ ತಿಳಿಸುತ್ತದೆ. ಹೀಗೆ ಅತ್ಯದ್ಭುತವಾದ ಸೃಷ್ಟಿಯ ಬಗ್ಗೆ ಅದು ನಮಗೆ ಮಾಹಿತಿ ಕೊಡುತ್ತದೆ. ಈ ಭಾಗದ ಮೂಲಕ ವಿಸ್ಮಯ ಸೃಷ್ಟಿಯಲ್ಲಿರುವ ವೈವಿಧ್ಯತೆಗಳನ್ನು ಗ್ರಹಿಸುವಂತೆ ನಿಮ್ಮ ಮಗುವಿಗೆ ಸಹಾಯ ಮಾಡಿ. ದೇವರು ಮಾನವರನ್ನು ಪ್ರಾಣಿಗಳಿಗಿಂತ ಎಷ್ಟೋ ಶ್ರೇಷ್ಠರಾಗಿ ಸೃಷ್ಟಿಸಿದ್ದಾನೆ. ನಮಗೆ ಮಾತಾಡುವ, ತರ್ಕಿಸುವ, ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯುವ, ಹಾಡುವ, ಪ್ರಾರ್ಥಿಸುವ ಸಾಮರ್ಥ್ಯವನ್ನು ಕೊಟ್ಟಿದ್ದಾನೆಂದು ಮನಗಾಣಿಸಿ. ಯೆಹೋವನ ಅಪಾರ ಶಕ್ತಿ, ಜ್ಞಾನ ಮತ್ತು ಪ್ರತಿಯೊಬ್ಬರ ಮೇಲೆ ಆತನಿಗಿರುವ ಪ್ರೀತಿಯ ಕಡೆಗೆ ಗಣ್ಯತೆ ಬೆಳೆಸಿಕೊಳ್ಳುವಂತೆ ಮಗುವಿಗೆ ಸಹಾಯ ಮಾಡಿ.

ಈ ಭಾಗದಲ್ಲಿ

ಪಾಠ 1

ದೇವರು ಆಕಾಶ-ಭೂಮಿಯನ್ನು ಸೃಷ್ಟಿಮಾಡಿದನು

ದೇವರು ಆಕಾಶ ಮತ್ತು ಭೂಮಿಯನ್ನು ಸೃಷ್ಟಿಮಾಡಿದನು ಎಂದು ಬೈಬಲ್‌ ಹೇಳುತ್ತದೆ. ಎಲ್ಲರನ್ನು ಮತ್ತು ಎಲ್ಲವನ್ನು ಸೃಷ್ಟಿಸುವ ಮುಂಚೆ ದೇವರು ಏಕೆ ಒಬ್ಬ ದೇವದೂತನನ್ನು ಸೃಷ್ಟಿಸಿದನು?

ಪಾಠ 2

ದೇವರು ಮೊದಲ ಗಂಡು-ಹೆಣ್ಣನ್ನು ಸೃಷ್ಟಿಸಿದನು

ದೇವರು ಮೊದಲ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಿ ಅವರನ್ನು ಏದೆನ್‌ ತೋಟದಲ್ಲಿ ಇರಿಸಿದನು. ಅವರು ಮಕ್ಕಳನ್ನು ಪಡೆದು ಇಡೀ ಭೂಮಿಯನ್ನು ಸುಂದರ ತೋಟವನ್ನಾಗಿ ಮಾಡಬೇಕು ಎನ್ನುವುದು ಆತನ ಇಷ್ಟವಾಗಿತ್ತು.