ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 1

ಸೃಷ್ಟಿಯಿಂದ ಜಲಪ್ರಳಯದ ತನಕ

ಸೃಷ್ಟಿಯಿಂದ ಜಲಪ್ರಳಯದ ತನಕ

ಭೂಮಿ, ಆಕಾಶಗಳು ಎಲ್ಲಿಂದ ಬಂದವು? ಸೂರ್ಯ, ಚಂದ್ರ, ಮತ್ತು ನಕ್ಷತ್ರಗಳು ಹಾಗೂ ಭೂಮಿಯಲ್ಲಿರುವ ಇನ್ನೂ ಅನೇಕ ವಸ್ತುಗಳು ಹೇಗೆ ಉಂಟಾದವು? ಅವುಗಳನ್ನು ದೇವರು ಸೃಷ್ಟಿಸಿದನು ಎಂದು ಬೈಬಲ್‌ ಹೇಳುತ್ತದೆ ಮತ್ತು ಇದು ಸತ್ಯವಾಗಿದೆ. ಆದುದರಿಂದ ನಮ್ಮ ಪುಸ್ತಕವು ಸೃಷ್ಟಿಯ ಕುರಿತ ಬೈಬಲ್‌ ಕಥೆಗಳೊಂದಿಗೆ ಪ್ರಾರಂಭವಾಗುತ್ತದೆ.

ದೇವರ ಪ್ರಥಮ ಸೃಷ್ಟಿಗಳು, ಹೆಚ್ಚುಕಡಿಮೆ ಆತನಂತಿರುವ ಆತ್ಮ ವ್ಯಕ್ತಿಗಳಾಗಿದ್ದರು ಎಂದು ನಾವು ಕಲಿಯುತ್ತೇವೆ. ಅವರು ದೇವದೂತರಾಗಿದ್ದರು. ಆದರೆ ಭೂಮಿಯನ್ನು ದೇವರು ನಮ್ಮಂತಹ ಜನರಿಗಾಗಿ ನಿರ್ಮಿಸಿದನು. ಆದುದರಿಂದ ದೇವರು ಆದಾಮ ಎಂಬ ಪುರುಷನನ್ನೂ ಹವ್ವ ಎಂಬ ಸ್ತ್ರೀಯನ್ನೂ ಉಂಟುಮಾಡಿ ಒಂದು ಸುಂದರವಾದ ತೋಟದಲ್ಲಿ ಅವರನ್ನಿಟ್ಟನು. ಆದರೆ ಅವರು ದೇವರಿಗೆ ಅವಿಧೇಯರಾದರು ಮತ್ತು ಜೀವಿಸುತ್ತಾ ಇರುವ ಹಕ್ಕನ್ನು ಕಳೆದುಕೊಂಡರು.

ಆದಾಮನ ಸೃಷ್ಟಿಯಿಂದ ಮಹಾ ಜಲಪ್ರಳಯದ ತನಕ ಆವರಿಸಿದ ಒಟ್ಟು ವರ್ಷಗಳು 1,656. ಈ ಸಮಯದಲ್ಲಿ ಅನೇಕ ಕೆಟ್ಟ ವ್ಯಕ್ತಿಗಳು ಜೀವಿಸಿದರು. ಪರಲೋಕದಲ್ಲಿ ಅದೃಶ್ಯ ಆತ್ಮ ವ್ಯಕ್ತಿಗಳು, ಸೈತಾನ ಮತ್ತು ಅವನ ಕೆಟ್ಟ ದೂತರು ಇದ್ದರು. ಭೂಮಿಯಲ್ಲಿ ಕಾಯಿನ ಮತ್ತು ಇನ್ನೂ ಅನೇಕ ಕೆಟ್ಟ ವ್ಯಕ್ತಿಗಳಿದ್ದರು. ಅವರಲ್ಲಿ, ಅಸಾಧಾರಣವಾಗಿ ಬಲಶಾಲಿಗಳಾದ ಕೆಲವು ವ್ಯಕ್ತಿಗಳು ಸಹ ಸೇರಿದ್ದರು. ಆದರೆ ಹೇಬೆಲ, ಹನೋಕ ಮತ್ತು ನೋಹನಂತಹ ಒಳ್ಳೆಯ ಜನರು ಸಹ ಭೂಮಿಯಲ್ಲಿದ್ದರು. ಭಾಗ ಒಂದರಲ್ಲಿ ಈ ಎಲ್ಲಾ ಜನರ ಮತ್ತು ಘಟನೆಗಳ ಕುರಿತು ನಾವು ಓದಲಿರುವೆವು.

 

ಈ ಭಾಗದಲ್ಲಿ

ಕಥೆ 1

ದೇವರು ಸೃಷ್ಟಿಮಾಡಲು ಆರಂಭಿಸುತ್ತಾನೆ

ಆದಿಕಾಂಡದಲ್ಲಿರುವ ಸೃಷ್ಟಿಯ ಕಥೆಯು ಸುಲಭವಾಗಿ ಅರ್ಥವಾಗುತ್ತದೆ ಮತ್ತು ಓದುವಾಗ ವಿಸ್ಮಯವಾಗುತ್ತದೆ. ಮಕ್ಕಳಿಗೂ ಸಹ.

ಕಥೆ 2

ಒಂದು ಸುಂದರ ತೋಟ

ಆದಿಕಾಂಡ ಪುಸ್ತಕದಲ್ಲಿ ಹೇಳಿರುವಂತೆ ದೇವರು ಒಂದು ವಿಶೇಷ ಸುಂದರ ಸ್ಥಳವನ್ನು ಮಾಡಿ ಅದಕ್ಕೆ ಏದೆನ್‌ ಎಂದು ಹೆಸರು ಕೊಟ್ಟನು. ಆ ಸುಂದರ ತೋಟದಂತೆಯೇ ಇಡೀ ಭೂಮಿ ಆಗಬೇಕೆಂಬುದು ದೇವರ ಇಚ್ಛೆ.

ಕಥೆ 3

ಮೊದಲನೆಯ ಪುರುಷ ಮತ್ತು ಸ್ತ್ರೀ

ದೇವರು ಆದಾಮ ಹವ್ವರನ್ನು ಸೃಷ್ಟಿಸಿ ಏದೆನ್‌ ತೋಟದಲ್ಲಿ ಇಟ್ಟನು. ಅವರೇ ಮೊದಲ ಪತಿಪತ್ನಿ.

ಕಥೆ 4

ಅವರು ತಮ್ಮ ಬೀಡನ್ನು ಕಳೆದುಕೊಂಡದ್ದಕ್ಕೆ ಕಾರಣ

ಆರಂಭದಲ್ಲಿದ್ದ ಪರದೈಸನ್ನು ಮನುಷ್ಯರು ಏಕೆ ಕಳೆದುಕೊಂಡರೆಂದು ಬೈಬಲಿನ ಆದಿಕಾಂಡ ಪುಸ್ತಕ ತಿಳಿಸುತ್ತದೆ.

ಕಥೆ 5

ಕಷ್ಟದ ಜೀವನ ಆರಂಭ

ಏದೆನ್‌ ತೋಟದ ಹೊರಗೆ ಆದಾಮ ಹವ್ವರಿಗೆ ಅನೇಕ ಸಮಸ್ಯೆಗಳಿದ್ದವು. ಒಂದುವೇಳೆ ಅವರು ದೇವರ ಮಾತನ್ನು ಕೇಳಿದ್ದರೆ ಅವರ ಹಾಗೂ ಅವರ ಮಕ್ಕಳ ಜೀವನ ಆನಂದದಿಂದ ತುಂಬಿರುತ್ತಿತ್ತು.

ಕಥೆ 6

ಒಳ್ಳೆಯ ಮಗ ಮತ್ತು ಕೆಟ್ಟ ಮಗ

ನಾವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಮತ್ತು ನಮ್ಮಲ್ಲಿರುವ ಯಾವ ಮನೋಭಾವಗಳನ್ನು ಕೂಡಲೇ ಬದಲಾಯಿಸಿಕೊಳ್ಳಬೇಕೆಂದು ಆದಿಕಾಂಡದಲ್ಲಿರುವ ಕಾಯಿನ ಮತ್ತು ಹೇಬೆಲನ ಕಥೆಯು ಕಲಿಸುತ್ತದೆ.

ಕಥೆ 7

ಒಬ್ಬ ಧೀರ ಪುರುಷ

ನಮ್ಮ ಸುತ್ತಲಿರುವ ಎಲ್ಲ ಜನರು ಕೆಟ್ಟದ್ದನ್ನೇ ಮಾಡಿದರೂ ನಾವು ಒಳ್ಳೇದನ್ನು ಮಾಡಲು ಸಾಧ್ಯ ಎಂದು ಹನೋಕದ ಮಾದರಿಯಿಂದ ತಿಳಿಯುತ್ತದೆ.

ಕಥೆ 8

ಭೂಮಿಯಲ್ಲಿ ಮಹಾಶರೀರಿಗಳು

ಆದಿಕಾಂಡ 6 ನೇ ಅಧ್ಯಾಯದಲ್ಲಿ ದೈತ್ಯರ ಬಗ್ಗೆ ಹೇಳಲಾಗಿದೆ. ಅವರು ಜನರಿಗೆ ತುಂಬ ತೊಂದರೆ ಕೊಡುತ್ತಿದ್ದರು. ಅವರನ್ನು ನೆಫೀಲಿಯರೆಂದು ಕರೆಯಲಾಗುತ್ತಿತ್ತು. ಸ್ವರ್ಗವನ್ನು ಬಿಟ್ಟುಬಂದು ಮನುಷ್ಯರಾಗಿ ಜೀವಿಸಿದ್ದ ದೇವದೂತರು ಮಕ್ಕಳಿವರು.

ಕಥೆ 9

ನೋಹನು ಒಂದು ನಾವೆಯನ್ನು ಕಟ್ಟುತ್ತಾನೆ

ಬೇರೆ ಜನರು ದೇವರ ಮಾತನ್ನು ಕೇಳದಿದ್ದರೂ ನೋಹ ಮತ್ತು ಅವನ ಕುಟುಂಬ ದೇವರ ಮಾತನ್ನು ಕೇಳಿದರು. ಇದರಿಂದಾಗಿ ಜಲಪ್ರಳಯದಿಂದ ಪಾರಾದರು.

ಕಥೆ 10

ಮಹಾ ಜಲಪ್ರಳಯ

ನೋಹನು ಎಚ್ಚರಿಸಿದಾಗ ಜನರು ನಗಾಡಿದರು. ಆದರೆ ಆಕಾಶದಿಂದ ಮಳೆ ಸುರಿಯಲು ಆರಂಭವಾದಾಗ ಅವರ ನಗು ನಿಂತಿತು. ನೋಹ, ನೋಹನ ಕುಟುಂಬ, ಅನೇಕಾನೇಕ ಪ್ರಾಣಿಗಳು ನಾವೆಯಲ್ಲಿದ್ದು ಹೇಗೆ ಪಾರಾದರು ಎಂದು ತಿಳಿಯಿರಿ.