ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಬೈಬಲ್‌ ಕಥೆಗಳ ನನ್ನ ಪುಸ್ತಕ

ಪೀಠಿಕೆ

ಪೀಠಿಕೆ

ಇದು ಸತ್ಯ ಕಥೆಗಳ ಒಂದು ಪುಸ್ತಕವಾಗಿದೆ. ಇದರಲ್ಲಿರುವ ಕಥೆಗಳನ್ನು ಲೋಕದ ಅತ್ಯಂತ ಮಹಾನ್‌ ಗ್ರಂಥವಾದ ಬೈಬಲ್‍ನಿಂದ ತೆಗೆಯಲಾಗಿದೆ. ಈ ಕಥೆಗಳು, ದೇವರು ಸೃಷ್ಟಿಮಾಡಲು ಪ್ರಾರಂಭಿಸಿದಂದಿನಿಂದ ನಮ್ಮ ಈ ದಿನಗಳ ತನಕದ ಲೋಕ ಇತಿಹಾಸವನ್ನು ನಿಮಗೆ ನೀಡುತ್ತವೆ. ಮಾತ್ರವಲ್ಲ, ಭವಿಷ್ಯತ್ತಿನಲ್ಲಿ ದೇವರು ತಾನೇನು ಮಾಡಲಿದ್ದೇನೆಂದು ಮಾತುಕೊಟ್ಟಿದ್ದಾನೋ ಅದರ ಕುರಿತೂ ತಿಳಿಸುತ್ತವೆ.

ಬೈಬಲ್‍ನಲ್ಲಿರುವ ಮುಖ್ಯ ವಿಷಯ ಏನೆಂದು ಈ ಪುಸ್ತಕ ತೋರಿಸಿಕೊಡುತ್ತದೆ. ಬೈಬಲ್‌ ಸಮಯಗಳಲ್ಲಿದ್ದ ಜನರು ಮತ್ತು ಅವರು ಮಾಡಿದ ಕಾರ್ಯಗಳ ಬಗ್ಗೆ ಇದು ತಿಳಿಸುತ್ತದೆ. ಅಷ್ಟೇ ಅಲ್ಲ, ಸುಂದರವಾದ ತೋಟದಂತಿರುವ ಪರದೈಸ್‌ ಭೂಮಿಯಲ್ಲಿ ಎಂದೆಂದಿಗೂ ಜೀವಿಸುವ ಭವ್ಯ ನಿರೀಕ್ಷೆಯ ಕುರಿತೂ ತಿಳಿಸುತ್ತದೆ.

ಈ ಪುಸ್ತಕದಲ್ಲಿ 116 ಕಥೆಗಳು ಇವೆ. ಅವುಗಳನ್ನು ಎಂಟು ಭಾಗಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ಭಾಗದ ಆರಂಭದ ಒಂದು ಪುಟವು ಆ ಭಾಗದಲ್ಲಿರುವ ವಿಷಯಗಳ ಕಿರುನೋಟವನ್ನು ನೀಡುತ್ತದೆ. ಇತಿಹಾಸದಲ್ಲಿ ಘಟನಾವಳಿಗಳು ಸಂಭವಿಸಿದ ಕ್ರಮದಲ್ಲಿ ಕಥೆಗಳು ಇವೆ. ಇದರಿಂದ ಪ್ರತಿಯೊಂದು ಘಟನೆಗಳು ಇತಿಹಾಸದಲ್ಲಿ ಯಾವಾಗ ಸಂಭವಿಸಿದವೆಂದು ತಿಳಿದುಕೊಳ್ಳಲು ನಿಮಗೆ ನೆರವಾಗುತ್ತದೆ.

ಕಥೆಗಳನ್ನು ಸರಳ ಭಾಷೆಯಲ್ಲಿ ಹೇಳಲಾಗಿದೆ. ಆದುದರಿಂದ ನೀವಾಗಿಯೇ ಅವನ್ನು ಓದಿ ಅರ್ಥಮಾಡಿಕೊಳ್ಳಬಲ್ಲಿರಿ. ಹೆತ್ತವರೇ, ನೀವು ಈ ಕಥೆಗಳನ್ನು ಪುಟಾಣಿ ಮಕ್ಕಳಿಗೆ ಪದೇ ಪದೇ ಓದಿ ಹೇಳುವಲ್ಲಿ ಅವರು ಸಹ ಆನಂದಿಸುವರೆಂಬುದನ್ನು ಕಂಡುಕೊಳ್ಳುವಿರಿ. ಚಿಕ್ಕವರು, ದೊಡ್ಡವರು ಎಲ್ಲರಿಗೂ ಬಹಳ ಆಸಕ್ತಿಕರ ವಿಷಯಗಳಿರುವುದನ್ನೂ ನೀವು ಕಾಣುವಿರಿ.

ಪ್ರತಿಯೊಂದು ಕಥೆಯ ಕೊನೆಯಲ್ಲಿ ಬೈಬಲ್‌ ವಚನಗಳನ್ನು ಕೊಡಲಾಗಿದೆ. ಕಥೆಗಳಿಗೆ ಆಧಾರವಾಗಿರುವ ಈ ಬೈಬಲ್‌ ಭಾಗಗಳನ್ನು ಓದುವಂತೆ ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಮಾತ್ರವಲ್ಲ, 116 ನೇ ಕಥೆಯ ಬಳಿಕ ಅಧ್ಯಯನ ಪ್ರಶ್ನೆಗಳನ್ನು ಕೊಡಲಾಗಿದೆ. ಒಂದೊಂದು ಕಥೆಯನ್ನು ನೀವು ಓದಿ ಮುಗಿಸಿದ ಬಳಿಕ, ಆ ಕಥೆಯ ಅಧ್ಯಯನ ಪ್ರಶ್ನೆಗಳನ್ನು ಪರಿಶೀಲಿಸಿ ಉತ್ತರಿಸಲು ಪ್ರಯತ್ನಿಸಿ.