ಬೈಬಲ್‌ ಬೇರೆ ಪುಸ್ತಕಗಳ ಹಾಗೆ ಅಲ್ಲ, ಅದರಲ್ಲಿ ನಮ್ಮನ್ನು ಸೃಷ್ಟಿಸಿದ ದೇವರು ಕೊಟ್ಟ ಸಲಹೆಗಳಿವೆ. (2 ತಿಮೊಥೆಯ 3:16) ಇದರಲ್ಲಿನ ಸಂದೇಶ ನಮ್ಮನ್ನು ಗಾಢವಾಗಿ ಪ್ರಭಾವಿಸುತ್ತದೆ. “ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ” ಆಗಿದೆ ಎಂದು ಬೈಬಲೇ ಹೇಳುತ್ತದೆ. (ಇಬ್ರಿಯ 4:12) ಬೈಬಲಿನಿಂದ ನಮಗೆ ಎರಡು ಮುಖ್ಯ ಪ್ರಯೋಜನಗಳಿವೆ. ಒಂದು, ಬೈಬಲ್‌ ಸಂತೃಪ್ತಿಯ ಜೀವನ ನಡೆಸಲು ಸಹಾಯ ಮಾಡುತ್ತದೆ. ಎರಡು, ದೇವರ ಬಗ್ಗೆ ಮತ್ತು ಆತನು ನಮಗೆ ಕೊಟ್ಟಿರುವ ಮಾತಿನ ಬಗ್ಗೆ ತಿಳಿಸುತ್ತದೆ.—1 ತಿಮೊಥೆಯ 4:8; ಯಾಕೋಬ 4:8.

ಸಂತೃಪ್ತಿಯ ಜೀವನ ನಡೆಸಲು. ಬೈಬಲ್‌ ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳಲ್ಲೂ ಸಲಹೆ ಕೊಡುತ್ತದೆ. ಅದು ಸಲಹೆ ಕೊಡುವ ವಿಷಯಗಳಲ್ಲಿ ಕೆಲವು:

ಬೈಬಲಿನಲ್ಲಿನ ಇಂತಹ ಸಲಹೆಗಳಿಂದ ಪ್ರಯೋಜನ ಪಡೆದ ಗಂಡ-ಹೆಂಡತಿ ಇಬ್ಬರೂ ಅದರಲ್ಲಿನ ವಿವೇಕವನ್ನು ತುಂಬ ಪ್ರಶಂಸಿಸುತ್ತಾರೆ. ಹೊಸದಾಗಿ ಮದುವೆಯಾದವರಿಗೆ ಹೊಂದಿಕೊಳ್ಳಲು, ಮನಸ್ಸು ಬಿಚ್ಚಿ ಮಾತಾಡಲು ಮೊದ ಮೊದಲು ಕಷ್ಟವಾಗುವಂತೆ ಇವರಿಗೂ ಆಯಿತು. ಆಗ ಅವರು ಬೈಬಲಿನಲ್ಲಿರುವ ಸಲಹೆಯನ್ನು ಅನ್ವಯಿಸಿದರು. ಇದರಿಂದ ಏನಾದರೂ ಪ್ರಯೋಜನ ಆಯಿತಾ? ಈ ಪ್ರಶ್ನೆಗೆ ಗಂಡ ವಿಸೆಂಟ್‌ ಉತ್ತರ ಗಮನಿಸಿ, “ಬೈಬಲಿನಲ್ಲಿ ನಾನು ಓದಿದ ವಿಷಯ ನಮ್ಮ ಸಮಸ್ಯೆಗಳನ್ನು ಪ್ರೀತಿಯಿಂದ ಬಗೆಹರಿಸಿಕೊಳ್ಳಲು ಸಹಾಯ ಮಾಡಿತು. “ಬೈಬಲ್‌ ಹೇಳಿದಂತೆ ನಡೆಯುತ್ತಿರುವುದರಿಂದ ನಾವಿಬ್ಬರೂ ಜೀವನದಲ್ಲಿ ಸಂತೋಷದಿಂದ ಇದ್ದೇವೆ.” ಅವರ ಹೆಂಡತಿ ಆನಾಲೂ, “ಬೈಬಲಿನಲ್ಲಿನ ಜನರ ಅನುಭವಗಳನ್ನು ಓದಿದ್ದು ನಮಗೆ ತುಂಬ ಸಹಾಯ ಮಾಡಿದೆ. ಈಗ ನಮ್ಮ ಜೀವನದಲ್ಲಿ ಸರಿಯಾದ ಗುರಿಗಳಿವೆ. ನಾನು ನನ್ನ ವಿವಾಹಬಂಧದಲ್ಲಿ ಸಂತೃಪ್ತಿ ಮತ್ತು ಆನಂದ ಪಡೆದಿದ್ದೇನೆ” ಎಂದು ಹೇಳುತ್ತಾರೆ.

ದೇವರ ಬಗ್ಗೆ ತಿಳಿದುಕೊಳ್ಳಲು. ವಿಸೆಂಟ್‌ರಿಗೆ ಬೈಬಲ್‌, ಮದುವೆಯ ವಿಷಯದಲ್ಲಿ ಮಾತ್ರ ಸಹಾಯ ಮಾಡಲಿಲ್ಲ. ಅವರು ಹೇಳ್ತಾರೆ, ‘ಬೈಬಲ್‌ ಓದೋದ್ರಿಂದ ಯೆಹೋವ ದೇವರು ನನಗೆ ಈಗ ಹೆಚ್ಚು ಆಪ್ತರಾಗಿದ್ದಾರೆ ಅಂತ ಅನಿಸುತ್ತೆ.’ ವಿಸೆಂಟ್‌ರ ಮಾತಿನಲ್ಲಿನ ಮುಖ್ಯ ಅಂಶವನ್ನು ಗಮನಿಸಿದಿರಾ? ಬೈಬಲ್‌ ಓದುವುದರಿಂದ ನಾವು ದೇವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು. ಹಾಗೆ ತಿಳಿದುಕೊಳ್ಳುವಾಗ ಆತನ ಸಲಹೆಗಳಿಂದ ಪ್ರಯೋಜನ ಪಡೆಯುವುದು ಮಾತ್ರ ಅಲ್ಲ, ದೇವರನ್ನು ನಮ್ಮ ಆಪ್ತ ಸ್ನೇಹಿತನನ್ನಾಗಿಯೂ ಮಾಡಿಕೊಳ್ಳಬಹುದು. ಜೊತೆಗೆ, “ವಾಸ್ತವವಾದ ಜೀವನ” ಅಂದರೆ, ಸಾವಿಲ್ಲದ ನಿತ್ಯ ನಿರಂತರ ಜೀವನವನ್ನು ಆನಂದಿಸುವಂಥ ಸುಂದರ ಭವಿಷ್ಯತ್ತಿನ ಬಗ್ಗೆ ದೇವರು ಹೇಳಿರೋ ಮಾಹಿತಿಯನ್ನು ತಿಳಿದುಕೊಳ್ಳಬಹುದು. (1ತಿಮೊಥೆಯ 6:19) ಜಗತ್ತಿನ ಯಾವ ಪುಸ್ತಕದಲ್ಲೂ ಇಂಥ ವಿಷಯ ಸಿಗುವುದಿಲ್ಲ!

ಬೈಬಲ್‌ ಓದುತ್ತಾ ಅದರಲ್ಲಿನ ಸಲಹೆಗಳನ್ನು ಅನ್ವಯಿಸಿದರೆ, ನಿಮ್ಮ ಜೀವನದಲ್ಲಿ ಸಂತೃಪ್ತಿ ಮತ್ತು ದೇವರ ಸ್ನೇಹ ಎರಡೂ ಸಿಗುತ್ತದೆ. ಆದರೆ, ನೀವು ಬೈಬಲ್‌ ಓದುವಾಗ ನಿಮ್ಮ ಮನಸ್ಸಿಗೆ ಹತ್ತು ಹಲವು ಪ್ರಶ್ನೆಗಳು ಬರಬಹುದು. ಆಗ, ಬೈಬಲಿನಲ್ಲಿ ತಿಳಿಸಿರುವ ಸುಮಾರು 2000 ವರ್ಷಗಳ ಹಿಂದೆ ಇದ್ದ ಇಥಿಯೋಪ್ಯದ ಅಧಿಕಾರಿಯ ಮಾದರಿಯನ್ನು ಅನುಸರಿಸಿ. ಬೈಬಲ್‌ ಓದಿದಾಗ ಅವನಿಗೂ ಹಲವಾರು ಪ್ರಶ್ನೆಗಳು ಬಂದವು. ಓದುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯಾ ಎಂದು ಕೇಳಿದ್ದಕ್ಕೆ ಆತ, “ಯಾವನಾದರೂ ಮಾರ್ಗದರ್ಶನ ನೀಡದಿದ್ದರೆ ನನಗೆ ಹೇಗೆ ಅರ್ಥವಾದೀತು?” ಎಂದು ಹೇಳಿದನು. * ತಕ್ಷಣವೇ ಅವನು ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದ ಯೇಸುವಿನ ಶಿಷ್ಯ ಫಿಲಿಪ್ಪನ ಸಹಾಯ ಪಡೆದುಕೊಂಡನು. (ಅಪೊಸ್ತಲರ ಕಾರ್ಯಗಳು 8:30, 31, 34) ಅದೇ ರೀತಿ, ನಿಮಗೂ ಬೈಬಲಿನ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ಮನಸ್ಸಿದ್ದರೆ, www.jw.org ವೆಬ್‌ಸೈಟ್‌ ಮೂಲಕ ಅಥವಾ ಈ ಪತ್ರಿಕೆಯಲ್ಲಿ ಕೊಡಲ್ಪಟ್ಚಿರುವ ವಿಳಾಸದ ಮೂಲಕ ನಿಮ್ಮ ಬಯಕೆಯನ್ನು ಬರೆದು ಕಳುಹಿಸಿ. ಇಲ್ಲವೆ, ನಿಮಗೆ ಹತ್ತಿರವಿರುವ ಯೆಹೋವನ ಸಾಕ್ಷಿಗಳನ್ನು ಅಥವಾ ಅವರ ರಾಜ್ಯ ಸಭಾಗೃಹವನ್ನು ಭೇಟಿಮಾಡಿ. ಬೈಬಲಿನಿಂದ ಖಂಡಿತ ಪ್ರಯೋಜನವಿದೆ ಎಂದು ತಿಳಿದ ಮೇಲೆ ನೀವೂ ಒಂದು ಬೈಬಲನ್ನು ಪಡೆದು, ಓದಿ, ನಿತ್ಯ ಜೀವದ ಹಾದಿಯಲ್ಲಿ ನಡೆಯಬಹುದಲ್ಲವೇ? ▪

ಬೈಬಲನ್ನು ನಿಜವಾಗಿಯೂ ನಂಬಬಹುದಾ ಎಂಬ ಪ್ರಶ್ನೆ ನಿಮಗಿದ್ದರೆ, ಬೈಬಲ್‍ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು? ಎಂಬ ವಿಡಿಯೋ ನೋಡಿ. ಈ ವಿಡಿಯೋವನ್ನು ನೋಡಲು ಇಲ್ಲಿನ ಕೋಡ್‌ ಸ್ಕ್ಯಾನ್‌ ಮಾಡಿ ಅಥವಾ jw.org ವೆಬ್‌ಸೈಟಲ್ಲಿ PUBLICATIONS > VIDEOS > THE BIBLE ಎಂಬಲ್ಲಿ ನೋಡಿ.

^ ಪ್ಯಾರ. 8 ಬೈಬಲಿನಲ್ಲಿರುವ ಇತರ ಸಲಹೆಗಳನ್ನು ತಿಳಿಯಲು ನಮ್ಮ jw.org ವೈಬ್‌ಸೈಟ್‍ನಲ್ಲಿ BIBLE TEACHINGS > BIBLE QUESTIONS ANSWERED ಎಂಬ ವಿಭಾಗವನ್ನು ನೋಡಿ.

^ ಪ್ಯಾರ. 11 ಇದೇ ಪತ್ರಿಕೆಯಲ್ಲಿರುವ “ಸರಿಯಾಗಿ ಅರ್ಥಮಾಡಿಕೊಳ್ಳುವುದು ಯಾಕಷ್ಟು ಪ್ರಾಮುಖ್ಯ?” ಎಂಬ ಲೇಖನವನ್ನು ಸಹ ನೋಡಿ.