ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಸಾವೇ ಕೊನೆಯೇ?

ಸಾವಿನ ವಿರುದ್ಧ ಸಮರ

ಸಾವಿನ ವಿರುದ್ಧ ಸಮರ

ಸಾಮ್ರಾಟ ಚಿನ್‌ ಷೀ ಹ್ವಾ೦ಗ್‌

ಪರಿಶೋಧಕ ಪೊನ್ಸ ಡ ಲಒನ್‌

ಸಾವು ಭಯಂಕರ ವೈರಿ. ಅದನ್ನು ಜಯಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ. ಅದು ನಮ್ಮ ಪ್ರಿಯರನ್ನು ನಮ್ಮಿಂದ ಕಸಿದುಕೊಂಡಾಗ ಆ ನಿಜಾಂಶವನ್ನು ಅರಗಿಸಿಕೊಳ್ಳುವುದು ತುಂಬ ಕಷ್ಟವಾಗುತ್ತದೆ. ಸಾವು ನಮ್ಮನ್ನು ಮುಟ್ಟಲೂ ಸಾಧ್ಯವಿಲ್ಲ ಅನ್ನುವ ಭ್ರಮೆಯನ್ನು ಆದಷ್ಟು ದಿನ ಭದ್ರವಾಗಿ ಹಿಡಿದುಕೊಳ್ಳಲು ಪ್ರಯತ್ನಿಸುತ್ತೇವೆ. ಬಿಸಿರಕ್ತ ಮೈಯಲ್ಲಿ ಓಡುತ್ತಿರುವ ಯೌವನದಲ್ಲಿ ಈ ಭ್ರಮೆ ಸ್ವಲ್ಪ ಜಾಸ್ತಿಯೇ ಇರುತ್ತದೆ!

ಅಮರತ್ವ ಪಡೆಯುವುದರ ಬಗ್ಗೆ ಯೋಚಿಸಿದವರಲ್ಲಿ ಈಜಿಪ್ಟಿನ ಫೇರೋಗಳಿಗಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ. ಸಾವನ್ನು ಸೋಲಿಸಲಿಕ್ಕಾಗಿ ಅವರು ತಮ್ಮ ಬದುಕನ್ನೂ ಜೊತೆಗೆ ಸಾವಿರಾರು ಕೆಲಸಗಾರರ ಬದುಕನ್ನೂ ಸವೆಸಿದರು. ಅವರು ಕಟ್ಟಿಸಿದ ಪಿರಮಿಡ್‌ಗಳೇ ಇದಕ್ಕೆ ಪುರಾವೆ. ಅವರ ಪ್ರಯತ್ನಕ್ಕೂ, ದಕ್ಕಿದ ಸೋಲಿಗೂ ಮೂಕಸಾಕ್ಷಿಗಳಿವು.

ಚೀನಾ ದೇಶದ ಸಾಮ್ರಾಟರು ಎಂದೆಂದೂ ಬದುಕಬೇಕೆಂಬ ಆಸೆಯನ್ನು ಪೂರೈಸಲು ಇನ್ನೊಂದು ಮಾರ್ಗ ಹಿಡಿದರು. ಜೀವ ಕೊಡುವ ಸಂಜೀವಿನಿಯ ಅನ್ವೇಷಣೆಯಲ್ಲಿ ತೊಡಗಿದರು. ಅವರಲ್ಲೊಬ್ಬ ಚಿನ್‌ ಷೀ ಹ್ವಾ೦ಗ್‌. ಈತ ಸಾವು ತನ್ನ ಹತ್ತಿರವೂ ಸುಳಿಯದಂತೆ ಮಾಡುವ ಔಷಧಿಯನ್ನು ಕಂಡುಹಿಡಿಯಲು ತನ್ನ ಆಸ್ಥಾನದ ಔಷಧ ತಜ್ಞರಿಗೆ ಹೇಳಿದ. ಅವರು ತಯಾರಿಸಿದ ಹೆಚ್ಚಿನಾಂಶ ಮಿಶ್ರಣಗಳಲ್ಲಿ ವಿಷಪೂರಿತ ಪಾದರಸ ಸೇರಿರುತ್ತಿತ್ತು. ಇಂಥ ಒಂದು ಮಿಶ್ರಣದಿಂದಾಗಿಯೇ ಅವನು ಸತ್ತನು ಎಂದು ಭಾವಿಸಲಾಗಿದೆ.

16ನೇ ಶತಮಾನದಲ್ಲಿ ಸ್ಪ್ಯಾನಿಷ್‌ ಪರಿಶೋಧಕ ಪೊನ್ಸ ಡ ಲಒನ್‌ ಯೌವನದ ಚಿಲುಮೆಯನ್ನು ಹುಡುಕಿಕೊಂಡು ಕ್ಯಾರಿಬಿಯನ್‌ ಸಮುದ್ರಯಾನ ಮಾಡಿದ. ಆಗ ಅವನು ಅಮೆರಿಕದ ಫ್ಲಾರಿಡ ಎಂಬ ಸ್ಥಳವನ್ನು ಕಂಡುಹಿಡಿದ. ಆದರೆ ಯೌವನದ ಚಿಲುಮೆ ಅವನಿಗೆ ಸಿಗಲಿಲ್ಲ. ಅದು ಅಸ್ತಿತ್ವದಲ್ಲೇ ಇರಲಿಲ್ಲ. ಕೆಲವು ವರ್ಷಗಳ ನಂತರ ಅಮೆರಿಕದ ಮೂಲನಿವಾಸಿಗಳ ದಾಳಿಯಿಂದಾಗಿ ಅವನು ಸತ್ತುಹೋದ.

ಹಲವಾರು ಸಾಮ್ರಾಟರು, ಫೇರೋಗಳು, ಪರಿಶೋಧಕರು ಸಾವನ್ನು ಜಯಿಸಲು ಪಣತೊಟ್ಟರು. ಅವರು ಬಳಸಿದ ವಿಧಾನಗಳು ಸರಿ ಅನಿಸದಿದ್ದರೂ ಇದರ ಹಿಂದೆ ಇದ್ದ ಅವರ ಗುರಿಯನ್ನು ನಾವು ಕೀಳಾಗಿ ಕಾಣುವುದಿಲ್ಲ. ಯಾಕೆಂದರೆ ಶಾಶ್ವತವಾಗಿ ಜೀವಿಸಬೇಕು ಅನ್ನುವ ಆಸೆ ನಮಗೂ ಇದೆ ಅಲ್ಲವಾ?

ಸಾವನ್ನು ಗೆಲ್ಲಬಹುದಾ?

ನಾವು ಯಾಕೆ ಸಾವಿನ ವಿರುದ್ಧ ಹೋರಾಡುತ್ತೇವೆ? ಬೈಬಲ್‌ ಅದಕ್ಕೆ ಉತ್ತರ ನೀಡುತ್ತದೆ. ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರ * ಬಗ್ಗೆ  ಅದು ಹೇಳುವುದು: “ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ; ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ.” (ಪ್ರಸಂಗಿ 3:11) ಭೂಮಿಯ ಸೌಂದರ್ಯವನ್ನು ನಾವು ಸದಾಕಾಲ ಆಸ್ವಾದಿಸಲು ಬಯಸುತ್ತೇವೆ. ಬರೀ 80, 90 ವರ್ಷ ಮಾತ್ರವಲ್ಲ. (ಕೀರ್ತನೆ 90:10) ಇದೇ ನಮ್ಮ ಹೃದಯದಾಳದ ಬಯಕೆ.

ದೇವರು ಯಾಕೆ ನಮ್ಮ ಹೃದಯದಲ್ಲಿ “ಅನಂತಕಾಲದ ಯೋಚನೆಯನ್ನು” ಇಟ್ಟಿದ್ದಾನೆ? ನಮಗೆ ಹತಾಶೆ ಆಗಲಿ ಎಂದ? ಇಲ್ಲ. ಸಾವಿನ ಮೇಲೆ ಜಯ ಖಂಡಿತ ಎಂದು ದೇವರು ನಮಗೆ ಮಾತು ಕೊಟ್ಟಿದ್ದಾನೆ. ಸಾವಿನ ನಿರ್ಮೂಲನ ಮತ್ತು ಅನಂತಕಾಲ ಬದುಕುವುದರ ಬಗ್ಗೆ ದೇವರು ಕೊಟ್ಟಿರುವ ಮಾತನ್ನು ಬೈಬಲ್‌ ಆಗಾಗ್ಗೆ ಪ್ರಸ್ತಾಪಿಸುತ್ತದೆ.— “ಸಾವಿನ ಮೇಲೆ ಜಯ” ಎಂಬ ಚೌಕ ನೋಡಿ.

ಸ್ವತಃ ಯೇಸು ಕ್ರಿಸ್ತನೇ ಹೀಗಂದನು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.” (ಯೋಹಾನ 17:3) ಆದ್ದರಿಂದ ಸಾವಿನ ವಿರುದ್ಧದ ಹೋರಾಟ ನಿಷ್ಫಲವಲ್ಲ. ಯೇಸುವಿನ ಮಾತೇ ತಿಳಿಸುವಂತೆ ನಮಗಾಗಿ ಸಾವನ್ನು ಗೆಲ್ಲುವವನು ದೇವರು ಮಾತ್ರ. (w14-E 01/01)

^ ಪ್ಯಾರ. 9 ಬೈಬಲ್‍ನಲ್ಲಿ ಯೆಹೋವ ಎನ್ನುವುದು ದೇವರ ಹೆಸರು.