ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ಓದಿ ಆನಂದಿಸಿದ್ದೀರಾ? ಹಾಗಿರುವಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಲು ಪ್ರಯತ್ನಿಸಿ:

ಕ್ರೈಸ್ತರು ಯೇಸು ಕ್ರಿಸ್ತನಿಗೆ ಪ್ರಾರ್ಥನೆ ಮಾಡಬೇಕಾ?

ಇಲ್ಲ. ನಾವು ಯೆಹೋವನಿಗೆ ಪ್ರಾರ್ಥಿಸಬೇಕೆಂದು ಸ್ವತಃ ಯೇಸುವೇ ಬೋಧಿಸಿದನು. ತನ್ನ ತಂದೆಗೆ ಪ್ರಾರ್ಥನೆ ಮಾಡುವ ಮೂಲಕ ಸ್ವತಃ ಮಾದರಿಯನ್ನೂ ಇಟ್ಟನು. (ಮತ್ತಾ. 6:6-9; ಯೋಹಾ. 11:41; 16:23) ಆದ್ದರಿಂದ ಅವನ ಆರಂಭದ ಹಿಂಬಾಲಕರು ಯೇಸುವಿಗಲ್ಲ ಬದಲಾಗಿ ದೇವರಿಗೆ ಪ್ರಾರ್ಥನೆಮಾಡಿದರು. (ಅ. ಕಾ. 4:24, 30; ಕೊಲೊ. 1:3)—4/1, ಪುಟ 14.

ಯೆಹೆಜ್ಕೇಲ ಪುಸ್ತಕದಲ್ಲಿ ತಿಳಿಸಲಾಗಿರುವ ಮಾಗೋಗಿನ ಗೋಗನು ಯಾರು?

ಮಾಗೋಗಿನ ಗೋಗ ಸೈತಾನನಿಗಲ್ಲ ಬದಲಾಗಿ ಜನಾಂಗಗಳ ಗುಂಪಿಗೆ ಸೂಚಿಸುತ್ತದೆಂದು ತೋರುತ್ತದೆ. ಈ ಜನಾಂಗಗಳ ಗುಂಪು ಮಹಾ ಸಂಕಟ ಆರಂಭವಾದ ಮೇಲೆ ದೇವಜನರನ್ನು ಅಳಿಸಿಹಾಕಲು ಪ್ರಯತ್ನಿಸುತ್ತದೆ.—5/15 ಪುಟ 29-30.

ಯೇಸು ಮಾಡಿದ ಅದ್ಭುತಗಳು ಆತನ ಧಾರಾಳತನವನ್ನು ಹೇಗೆ ತೋರಿಸುತ್ತವೆ?

ಕಾನಾದಲ್ಲಿ ನಡೆದ ಒಂದು ಮದುವೆಯಲ್ಲಿ ಯೇಸು 380 ಲೀಟರಿನಷ್ಟು (100 ಗ್ಯಾಲನ್‌) ನೀರನ್ನು ದ್ರಾಕ್ಷಾಮದ್ಯವಾಗಿ ಮಾಡಿದನು. ಇನ್ನೊಂದು ಸಂದರ್ಭದಲ್ಲಿ ಅದ್ಭುತ ಮಾಡಿ 5,000ಕ್ಕಿಂತ ಹೆಚ್ಚು ಜನರಿಗೆ ಊಟ ಕೊಟ್ಟನು. (ಮತ್ತಾ. 14:14-21; ಯೋಹಾ. 2:6-11) ಈ ಎರಡೂ ಬಾರಿ ಆತನು ತನ್ನ ತಂದೆಯ ಧಾರಾಳತನವನ್ನು ಅನುಕರಿಸಿದನು.—6/15, ಪುಟ 4-5.

ಅಂತ್ಯ ಬರುವಾಗ ಕೊನೆಯಾಗಲಿರುವ ಕೆಲವು ವಿಷಯಗಳೇನು?

ಮಾನವ ಸರಕಾರಗಳ, ಯುದ್ಧ ಮತ್ತು ಅನ್ಯಾಯ, ದೇವರ ಬಗ್ಗೆ ತಪ್ಪಾಗಿ ಬೋಧಿಸುವ ಧರ್ಮಗಳ ಮತ್ತು ಕೆಟ್ಟ ಜನರ ಕೊನೆ ಆಗಲಿದೆ.—7/1, ಪುಟ 3-5.

ನಾವು ಹುಟ್ಟಿನಿಂದಲೇ ಪಾಪಿಗಳಾಗಿದ್ದರೂ ದೇವರನ್ನು ಮೆಚ್ಚಿಸಲು ಸಾಧ್ಯವೆಂದು ಯಾಕೆ ನಂಬಬಹುದು?

ಯೋಬ, ಲೋಟ, ದಾವೀದ ತಪ್ಪುಗಳನ್ನು ಮಾಡಿದರು. ಆದರೆ ಅವರಿಗೆ ದೇವರ ಸೇವೆಮಾಡುವ ಮನಸ್ಸಿತ್ತು, ತಮ್ಮ ತಪ್ಪಿಗಾಗಿ ಪಶ್ಚಾತ್ತಾಪಪಟ್ಟರು, ಬದಲಾವಣೆಗಳನ್ನು ಮಾಡಿದರು. ಹಾಗಾಗಿ ಅವರಿಗೆ ದೇವರ ಮೆಚ್ಚಿಕೆ ಸಿಕ್ಕಿತು. ನಮಗೂ ಸಿಗಬಲ್ಲದು.—10/1 ಪುಟ 10-11.

ಮಹಾ ಬಾಬೆಲ್‌ ನಾಶವಾಗುವಾಗ ಸುಳ್ಳು ಧರ್ಮದ ಎಲ್ಲಾ ಸದಸ್ಯರು ಕೊಲ್ಲಲ್ಪಡುತ್ತಾರಾ?

ಇಲ್ಲ. ಜೆಕರ್ಯ 13:4-6 ಸೂಚಿಸುವಂತೆ ಧರ್ಮಗುರುಗಳು ಸಹ ತಮಗೇನು ಧರ್ಮಶ್ರದ್ಧೆಯಿಲ್ಲ ಎಂಬಂತೆ ನಟಿಸುವರು ಮತ್ತು ತಾವು ಆ ಸುಳ್ಳು ಧರ್ಮಗಳ ಭಾಗವಾಗಿರಲಿಲ್ಲ ಎಂದು ಹೇಳಿಕೊಳ್ಳುವರು.—7/15, ಪುಟ 15-16.

ಒಬ್ಬ ಕ್ರೈಸ್ತನು ಧ್ಯಾನಿಸಬಹುದಾದ ಕೆಲವೊಂದು ವಿಷಯಗಳೇನು?

ಧ್ಯಾನಿಸಬಹುದಾದ ಕೆಲವೊಂದು ವಿಷಯಗಳೇನೆಂದರೆ ಯೆಹೋವನ ಸೃಷ್ಟಿಕಾರ್ಯಗಳು, ಆತನ ಪ್ರೇರಿತ ವಾಕ್ಯದ ಮೌಲ್ಯ, ಪ್ರಾರ್ಥನೆಮಾಡಲು ನಮಗಿರುವ ಸುಯೋಗ ಮತ್ತು ವಿಮೋಚನಾ ಮೌಲ್ಯದ ಪ್ರೀತಿಪರ ಏರ್ಪಾಡು.—8/15, ಪುಟ 10-13.

ಕೆಟ್ಟ ಸಹವಾಸದಿಂದ ದೂರವಿರಬೇಕಾದ್ದರಿಂದ ನಾವು ಯಾರ ಜೊತೆ ಪ್ರೀತಿಪ್ರೇಮ ಬೆಳೆಸಬಾರದು?

ಸಾಕ್ಷಿಗಳಲ್ಲದವರೊಟ್ಟಿಗೂ ನಾವು ದಯೆಯಿಂದ ನಡೆದುಕೊಳ್ಳುತ್ತೇವೆ. ಆದರೆ ಯಾರು ದೇವರಿಗೆ ಸಮರ್ಪಿತರಲ್ಲವೊ ಮತ್ತು ಆತನ ಮಟ್ಟಗಳಿಗೆ ನಂಬಿಗಸ್ತರಲ್ಲವೊ ಅಂಥವರೊಟ್ಟಿಗೆ ಪ್ರೀತಿಪ್ರೇಮ ಬೆಳೆಸುವುದು ದೇವರ ಮಾರ್ಗದರ್ಶನಕ್ಕೆ ವಿರುದ್ಧವಾಗಿರುತ್ತದೆ. (1 ಕೊರಿಂ. 15:33)—8/15, ಪುಟ 25.

ಪೇತ್ರ ತನ್ನ ನಂಬಿಕೆ ಕಳೆದುಕೊಂಡರೂ ಅದನ್ನು ಪುನಃ ಹೇಗೆ ಗಳಿಸಿದನು?

ಅಪೊಸ್ತಲ ಪೇತ್ರನಿಗೆ ನಂಬಿಕೆ ಇದ್ದದರಿಂದಲೇ ನೀರಿನ ಮೇಲೆ ನಡೆದುಕೊಂಡು ಯೇಸುವಿನ ಕಡೆಗೆ ಹೋದನು. (ಮತ್ತಾ. 14:24-32) ಆದರೆ ಬಿರುಗಾಳಿಯನ್ನು ನೋಡಿ ಪೇತ್ರನು ಹೆದರಿದನು. ತದನಂತರ ಅವನು ಪುನಃ ತನ್ನ ಗಮನವನ್ನು ಯೇಸುವಿನ ಮೇಲೆ ಕೇಂದ್ರೀಕರಿಸಿ ಆತನ ಸಹಾಯ ಪಡೆದನು.—9/15, ಪುಟ 16-17.

ಮಾರ್ಥಳು ಅನೇಕ ಕೆಲಸಗಳಲ್ಲಿ ಮುಳುಗಿ ಅಪಕರ್ಷಿತಳಾಗಿದ್ದು ನಮಗೆ ಯಾವ ಪಾಠ ಕಲಿಸುತ್ತದೆ?

ಒಮ್ಮೆ ಭರ್ಜರಿ ಊಟ ತಯಾರಿ ಮಾಡುವುದರಲ್ಲಿ ಮಾರ್ಥಳು ಮುಳುಗಿದ್ದರಿಂದ ಅಪಕರ್ಷಿತಳಾಗಿದ್ದಳು. ಆದರೆ ಅವಳ ಸಹೋದರಿಯಾದ ಮರಿಯಳು ಯೇಸುವಿನ ಬೋಧನೆಗೆ ಕಿವಿಗೊಟ್ಟಳು. ಅದಕ್ಕೆ ಯೇಸು ಅವಳು ಒಳ್ಳೆಯ ಭಾಗವನ್ನು ಆರಿಸಿಕೊಂಡಳು ಎಂದು ಹೇಳಿದನು. ಅನಗತ್ಯ ಸಂಗತಿಗಳು ನಮ್ಮ ಆಧ್ಯಾತ್ಮಿಕ ಕೆಲಸಗಳಿಗೆ ಅಡ್ಡಬರುವಂತೆ ನಾವು ಬಿಡಬಾರದು.— 10/15, ಪುಟ 18-20.