ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಕಾವಲಿನಬುರುಜು - ಅಧ್ಯಯನ ಆವೃತ್ತಿ  |  ಅಕ್ಟೋಬರ್ 2015

“ಇಂಥ ರೀತಿಯ ಪುರುಷರನ್ನು ಪ್ರಿಯರೆಂದು ಎಣಿಸಿರಿ”

“ಇಂಥ ರೀತಿಯ ಪುರುಷರನ್ನು ಪ್ರಿಯರೆಂದು ಎಣಿಸಿರಿ”

ಆಡಳಿತ ಮಂಡಲಿಯ ಸಮಿತಿಗಳು ಕೆಲಸವನ್ನು ಪೂರೈಸುವಂತೆ ಆ ಮಂಡಲಿ 1992ರಿಂದ ಅನುಭವಸ್ಥ ಪ್ರೌಢ ಹಿರಿಯರನ್ನು ನೇಮಿಸಿದೆ. * (ಪಾದಟಿಪ್ಪಣಿ ನೋಡಿ.) ಈ ಸಹಾಯಕರು “ಬೇರೆ ಕುರಿ”ಗಳ ಗುಂಪಿಗೆ ಸೇರಿದವರಾಗಿದ್ದಾರೆ. ಇವರು ಆಡಳಿತ ಮಂಡಲಿಗೆ ಅಮೂಲ್ಯ ಬೆಂಬಲವನ್ನು ಕೊಡುತ್ತಾರೆ. (ಯೋಹಾ. 10:16) ತಮ್ಮನ್ನು ಯಾವ ಸಮಿತಿಗೆ ನೇಮಿಸಲಾಗಿದೆಯೊ ಆ ಸಮಿತಿಯ ಕೂಟಕ್ಕೆ ಪ್ರತೀ ವಾರ ಈ ಸಹೋದರರು ಹಾಜರಾಗುತ್ತಾರೆ. ಅಗತ್ಯವಿರುವ ಯಾವುದೇ ಮಾಹಿತಿಯನ್ನು ಮತ್ತು ಸಲಹೆಗಳನ್ನು ಕೊಡುವುದು ಇವರ ಕೆಲಸವಾಗಿರುತ್ತದೆ. ನಂತರ ಅಂತಿಮ ನಿರ್ಣಯಗಳನ್ನು ಆಡಳಿತ ಮಂಡಲಿ ಮಾಡುತ್ತದೆ. ಈ ನಿರ್ಣಯಗಳು ಜಾರಿಗೆ ಬರುವಂತೆ ಈ ಸಹಾಯಕರು ನೋಡಿಕೊಳ್ಳುತ್ತಾರೆ. ಯಾವುದೇ ನೇಮಕವನ್ನು ಕೊಟ್ಟರೂ ಈ ಸಹೋದರರು ಮಾಡಲು ಸಿದ್ಧರಿರುತ್ತಾರೆ. ವಿಶೇಷ ಮತ್ತು ಅಂತಾರಾಷ್ಟ್ರೀಯ ಅಧಿವೇಶನಗಳಿಗೆ ಇವರು ಆಡಳಿತ ಮಂಡಲಿಯ ಸದಸ್ಯರ ಜೊತೆ ಪ್ರಯಾಣ ಮಾಡುತ್ತಾರೆ. ಮುಖ್ಯ ಕಾರ್ಯಾಲಯದ ಪ್ರತಿನಿಧಿಗಳಾಗಿ ಬೇರೆಬೇರೆ ಬ್ರಾಂಚ್‌ ಆಫೀಸುಗಳನ್ನು ಭೇಟಿ ಮಾಡುವ ನೇಮಕ ಕೂಡ ಇವರಿಗೆ ಸಿಗುತ್ತದೆ.

1992ರಿಂದ ಸಹಾಯಕನಾಗಿ ಸೇವೆ ಮಾಡುತ್ತಿರುವ ಒಬ್ಬ ಸಹೋದರ ಹೀಗನ್ನುತ್ತಾನೆ: “ನನಗೆ ನೇಮಿಸಲಾಗಿರುವ ಕೆಲಸಗಳನ್ನು ನಾನು ಪೂರೈಸುವಾಗ ಆಡಳಿತ ಮಂಡಲಿಯು ಅದಕ್ಕಿರುವ ಜವಾಬ್ದಾರಿಗಳ ಕಡೆಗೆ ಇನ್ನು ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ.” 20 ವರ್ಷಗಳಿಂದ ಸಹಾಯಕನಾಗಿ ಸೇವೆ ಮಾಡುತ್ತಿರುವ ಇನ್ನೊಬ್ಬ ಸಹೋದರ ಹೀಗನ್ನುತ್ತಾನೆ: “ನಾನು ಕನಸುಮನಸ್ಸಲ್ಲೂ ನೆನಸಿರದ ಸುಯೋಗವಿದು!”

ತನ್ನ ಸಹಾಯಕರಾಗಿರುವ ಈ ಸಹೋದರರಿಗೆ ಆಡಳಿತ ಮಂಡಲಿ ತುಂಬ ಜವಾಬ್ದಾರಿಗಳನ್ನು ಕೊಟ್ಟಿದೆ. ಈ ನಿಷ್ಠಾವಂತ ಸಹೋದರರು ಮಾಡುವ ಪರಿಶ್ರಮದ ಕೆಲಸವನ್ನು ಆಡಳಿತ ಮಂಡಲಿ ಮೆಚ್ಚುತ್ತದೆ. ನಾವೆಲ್ಲರೂ ಸಹ “ಇಂಥ ರೀತಿಯ ಪುರುಷರನ್ನು ಪ್ರಿಯರೆಂದು” ಎಣಿಸೋಣ.—ಫಿಲಿ. 2:29.

^ ಪ್ಯಾರ. 2 ಆಡಳಿತ ಮಂಡಲಿಯ ಆರು ಸಮಿತಿಗಳಿಗೆ ಇರುವ ಜವಾಬ್ದಾರಿಗಳ ಬಗ್ಗೆ ಹೆಚ್ಚನ್ನು ತಿಳಿಯಲು ಗಾಡ್ಸ್‌ ಕಿಂಗ್‍ಡಮ್‌ ರೂಲ್ಸ್! ಪುಸ್ತಕದ ಪುಟ 131 ಮತ್ತು ಕಾವಲಿನಬುರುಜು ಮೇ 15, 2008 ಪುಟ 29 ನೋಡಿ.