ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ವಿಕಾಸವೇ?

ಹಕ್ಕಿಯ ರೆಕ್ಕೆ

ಹಕ್ಕಿಯ ರೆಕ್ಕೆ

ವಿಮಾನ ಹಾರುವಾಗ ಅದರ ರೆಕ್ಕೆಯ ತುದಿಯಲ್ಲಿ ತೀವ್ರ ವೇಗದ ಸುಳಿಗಾಳಿಯನ್ನು ಉಂಟು ಮಾಡುತ್ತದೆ. ಈ ಸುಳಿಗಾಳಿ ವಿಮಾನವನ್ನು ಹಿಂದಕ್ಕೆಳೆಯುತ್ತಿರುತ್ತದೆ. ಗಾಳಿಯ ಒತ್ತಡವಿದ್ದರೂ ವಿಮಾನ ಮುಂದಕ್ಕೆ ಹೋಗಬೇಕೆಂದರೆ ಹೆಚ್ಚಿನ ಇಂಧನ ಖರ್ಚಾಗುತ್ತದೆ. ಹತ್ತಿರದಲ್ಲಿರುವ ಬೇರೆ ವಿಮಾನಗಳೂ ಈ ಸುಳಿಗಾಳಿಗೆ ಸಿಕ್ಕಿ ಅಪಘಾತವಾಗುವ ಸಂಭವ ಹೆಚ್ಚು. ಈ ಸುಳಿಗಾಳಿಯಿಂದಾಗುವ ಅಪಾಯವನ್ನು ತಪ್ಪಿಸಲು, ಒಂದೇ ರನ್‌ವೇಯಿಂದ ಹೊರಡುವ ವಿಮಾನಗಳು ಭಾರೀ ಅಂತರದಲ್ಲಿ ಹೊರಡಬೇಕಾಗುತ್ತವೆ.

ವಿಮಾನ ತಯಾರಿಸುವ ಎಂಜಿನಿಯರ್‌ಗಳು, ಎತ್ತರದಲ್ಲಿ ಹಾರುವ ಹಕ್ಕಿಗಳಾದ ಕಡಲ ಡೇಗೆ, ಹದ್ದು, ಕೊಕ್ಕರೆ ಮುಂತಾದವುಗಳ ರೆಕ್ಕೆಯ ವಿನ್ಯಾಸವನ್ನು ಗಮನಿಸಿ ಅದನ್ನು ವಿಮಾನದ ರೆಕ್ಕೆಯಲ್ಲೂ ಅಳವಡಿಸಿದ್ದಾರೆ. ಹೀಗೆ ಮೇಲೆ ತಿಳಿಸಲಾದ ಸಮಸ್ಯೆಗಳನ್ನು ಕಡಿಮೆಮಾಡುವುದು ಹೇಗೆಂದು ಅವರು ಕಂಡುಹಿಡಿದಿದ್ದಾರೆ.

ಪರಿಗಣಿಸಿ: ಎತ್ತರದಲ್ಲಿ ಹಾರುವ ಹಕ್ಕಿಗಳು ನೇರವಾಗಿ ಹಾರುವಾಗ ಅವುಗಳ ರೆಕ್ಕೆಯ ತುದಿಯಲ್ಲಿರುವ ಗರಿಗಳು ಮೇಲಕ್ಕೆ ಎತ್ತಿಕೊಂಡಿರುತ್ತವೆ. ಈ ರೀತಿಯ ವಿನ್ಯಾಸದಿಂದ ಅವುಗಳ ರೆಕ್ಕೆಯು ಚಿಕ್ಕದಾಗಿದ್ದರೂ ಸಾಕಷ್ಟು ಭಾರವನ್ನು ಹೊರಲು ಸಾಧ್ಯವಾಗುತ್ತದೆ. ಈ ರಚನೆಯಿಂದಾಗಿ ಹಾರುವ ಸಾಮರ್ಥ್ಯ ಹೆಚ್ಚಾಗುತ್ತದೆ. ಈ ವಿನ್ಯಾಸವನ್ನು ಅನುಕರಿಸಿ ಎಂಜಿನಿಯರುಗಳು ವಿಮಾನಗಳ ರೆಕ್ಕೆಗಳನ್ನು ತಯಾರಿಸಿದ್ದಾರೆ. ವಿಮಾನದ ಮೇಲೆ ಬೀಸುಗಾಳಿಯಿಂದಾಗುವ ಪ್ರಭಾವವನ್ನು ಪರೀಕ್ಷಿಸುವ ವಿಧಾನವಾದ “ವಿಂಡ್-ಟನಲ್‌ ಟೆಸ್ಟ್‌”ನಿಂದ ಅವರು ಒಂದಂಶವನ್ನು ಗುರುತಿಸಿದ್ದಾರೆ. ಅದೇನೆಂದರೆ ವಿಮಾನದ ರೆಕ್ಕೆಗಳ ತುದಿ ಮೇಲಕ್ಕೆ ಎತ್ತಿಕೊಂಡಿದ್ದರೆ ವಿಮಾನ ಇನ್ನೂ ಉತ್ತಮವಾಗಿ ಕೆಲಸ ಮಾಡುತ್ತದೆ. ಈಗಾಗಲೇ ಈ ರಚನೆಯುಳ್ಳ ವಿಮಾನಗಳು ಹಿಂದಿಗಿಂತ ಹತ್ತು ಪ್ರತಿಶತ ಉತ್ತಮ ಸಾಮರ್ಥ್ಯವನ್ನು ಹೊಂದಿವೆ. ಈ ರಚನೆಯಿಂದಾಗಿ ಗಾಳಿಯ ಸೆಳೆತ ಕಡಿಮೆಯಾಗುತ್ತದೆ ಮಾತ್ರವಲ್ಲ, ‘ಗಾಳಿಗೆ ವಿರುದ್ಧ ದಿಕ್ಕಿನತ್ತ ವಿಮಾನವನ್ನು ತಳ್ಳುತ್ತದೆ’ ಎಂದು ಎನ್‌ಸೈಕ್ಲೋಪಿಡಿಯ ಆಫ್‌ ಫ್ಲೈಟ್‌ ತಿಳಿಸುತ್ತದೆ.

ವಿಮಾನದ ಈ ಹೊಸ ವಿನ್ಯಾಸದಿಂದಾಗಿ ಅದರ ರೆಕ್ಕೆಗಳು ಚಿಕ್ಕದಾಗಿವೆ. ಆದರೂ ತುಂಬ ದೂರದವರೆಗೆ ಪ್ರಯಾಣಿಸುವ ಮತ್ತು ಹೆಚ್ಚು ಭಾರವಾದ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ. ರೆಕ್ಕೆಗಳು ಚಿಕ್ಕದಾಗಿರುವುದರಿಂದ ಅವುಗಳನ್ನು ನಿಲ್ಲಿಸಲು ಕಡಿಮೆ ಸ್ಥಳ ಸಾಕಾಗುತ್ತದೆ. ಮುಖ್ಯವಾಗಿ ಇಂಧನದ ಖರ್ಚು ಸಹ ಕಡಿಮೆಯಾಗಿದೆ. ಉದಾಹರಣೆಗೆ, ಕೇವಲ 2010ರಲ್ಲಿ “ಭೂಮಿಯಾದ್ಯಂತ ಇರುವ ಎಲ್ಲಾ ವಿಮಾನ ಸಂಸ್ಥೆಗಳು ಒಟ್ಟು 200 ಕೋಟಿ ಗ್ಯಾಲನ್‌ಗಳಷ್ಟು [760 ಕೋಟಿ ಲೀಟರ್‌] ಇಂಧನವನ್ನು ಉಳಿಸಿವೆ” ಮತ್ತು ವಿಮಾನಗಳಿಂದ ಪರಿಸರಕ್ಕೆ ಸೇರುವ ಅನಿಲದ ಪ್ರಮಾಣ ತುಂಬ ಕಡಿಮೆಯಾಗಿದೆ ಎಂದು ನಾಸಾ (NASA) ಸಂಸ್ಥೆ ತಿಳಿಸಿದೆ.

ನೀವೇನು ನೆನಸುತ್ತೀರಿ? ಎತ್ತರದಲ್ಲಿ ಹಾರುವ ಹಕ್ಕಿಗಳಲ್ಲಿರುವ ಈ ಅದ್ಭುತ ವಿನ್ಯಾಸದ ರೆಕ್ಕೆಗಳು ವಿಕಾಸವಾಗಿ ಬಂದವಾ? ಅಥವಾ ಸೃಷ್ಟಿಕರ್ತ ವಿನ್ಯಾಸಿಸಿದನಾ? ▪ (g15-E 02)