ಜಿನ್-ಸಿಯೋಂಗ್ ಲೀ ಜೂನ್ 2025 ರಿಂದ ದಕ್ಷಿಣ ಕೊರಿಯಾದಲ್ಲಿ ಜೈಲಿನಲ್ಲಿದ್ದಾರೆ.
ದೇವರಿಗೆ ನಿಯತ್ತಾಗಿರೋದಕ್ಕೆ ಜೈಲಲ್ಲಿರುವವರು—ಬೇರೆ ಬೇರೆ ಸ್ಥಳದ ಮಾಹಿತಿ
ಮೇ 2026 ರಷ್ಟಕ್ಕೆ ಭೂಮ್ಯಾದ್ಯಂತ 276 ಕ್ಕೂ ಹೆಚ್ಚು ಯೆಹೋವನ ಸಾಕ್ಷಿಗಳು ದೇವರಿಗೆ ನಿಯತ್ತಾಗಿರೋದಕ್ಕೆ ಜೈಲಿನಲ್ಲಿದ್ದಾರೆ.
ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಕುರಿತಾದ ಅಂತರರಾಷ್ಟ್ರೀಯ ಒಪ್ಪಂದದ 18 ನೇ ಆರ್ಟಿಕಲ್, ಪ್ರತಿಯೊಬ್ಬ ವ್ಯಕ್ತಿ ತನ್ನ ಇಷ್ಟದ ಪ್ರಕಾರ ಯೋಚಿಸೋ, ನಂಬುವ ಮತ್ತು ಅದರ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸ್ವಾತಂತ್ರ್ಯವನ್ನ ಹಾಗೂ ತನ್ನದೇ ಆದ ಆರಾಧನೆ ಮಾಡೋ ಸ್ವಾತಂತ್ರ್ಯವನ್ನ ಖಾತರಿಪಡಿಸುತ್ತೆ. ಹಾಗಿದ್ರೂ, ಕೆಲವು ಸರ್ಕಾರಗಳು ಯೆಹೋವನ ಸಾಕ್ಷಿಗಳಿಗೆ ಈ ಸ್ವಾತಂತ್ರ್ಯವನ್ನ ನಿರಾಕರಿಸುತ್ತೆ. ಆ ಸ್ಥಳಗಳಲ್ಲಿ, ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆ ಪ್ರಕಾರ ಆರಾಧನೆ ಮಾಡಿದಕ್ಕೆ ಅಥವಾ ಅವರ ನಂಬಿಕೆಗಳಿಂದಾಗಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ನಿರಾಕರಿಸಿದಕ್ಕೆ, ಅವರನ್ನ ಜೈಲಿಗೆ ಹಾಕಿದ್ದಾರೆ.
“ಜೈಲಲ್ಲಿ ಇರುವವ್ರನ್ನ ನೆನಪಿಸ್ಕೊಳ್ಳಿ. ಅವರ ಜೊತೆ ನೀವೂ ಜೈಲಲ್ಲಿ ಇದ್ದೀರ ಅನ್ನೋ ತರ ಕಲ್ಪಿಸ್ಕೊಳ್ಳಿ.”—ಇಬ್ರಿಯ 13:3.

