ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JW ಭಾಷೆ

JW ಭಾಷೆ ವಿಶೇಷತೆಗಳು

JW ಭಾಷೆ ವಿಶೇಷತೆಗಳು

ಅನೇಕ ಭಾಷೆಗಳು

ಅರೇಬಿಕ್‌, ಬಂಗಾಳಿ, ಚೈನೀಸ್‌ ಕ್ಯಾಂಟೊನಿಸ್‌ (ಹಳೆಯ), ಚೈನೀಸ್‌ ಮ್ಯಾಂಡರೀನ್‌ (ಸರಳೀಕೃತ), ಇಂಗ್ಲಿಷ್‌, ಫ್ರೆಂಚ್‌, ಜರ್ಮನ್‌, ಹಿಂದಿ, ಇಂಡೊನೀಷಿಯನ್‌, ಇಟ್ಯಾಲಿಯನ್‌, ಜ್ಯಾಪನೀಸ್‌, ಕೊರಿಯನ್‌, ಲೋ ಜರ್ಮನ್‌, ಮಲಯ, ಮಯಾನ್ಮಾರ್‌, ಪೋರ್ಚುಗೀಸ್‌, ರಷ್ಯನ್‌, ಸ್ಪ್ಯಾನಿಷ್‌, ಸ್ವಾಹೀಲಿ, ಟಗಾಲಗ್‌, ಥಾಯ್‌, ಟರ್ಕಿಷ್‌, ವಿಯೆಟ್ನಮೀಸ್‌.

 

ಸುವಾರ್ತೆ ಸಾರಲು ಬೇಕಾದ ಪದಗಳು

ಸುವಾರ್ತೆ ಸಾರಲು ಮತ್ತು ಬೈಬಲನ್ನು ಕಲಿಸಲು ಬೇಕಾದ ಪದಗಳನ್ನು, ಬೈಬಲಿನಲ್ಲಿರುವ ಪದಗಳನ್ನು JW ಭಾಷೆ ಆ್ಯಪ್‌ನಲ್ಲಿ ಕೊಡಲಾಗಿದೆ. ನಿಮ್ಮ ಭಾಷೆಯನ್ನು ಮತ್ತು ನೀವು ಕಲಿಯುತ್ತಿರುವ ಭಾಷೆಯನ್ನು ಹೋಲಿಸಿ ನೋಡಲು ಬೇರೆ ಬೇರೆ ಕರಪತ್ರಗಳನ್ನೂ ಕೊಡಲಾಗಿದೆ.

 

ಭಾಷೆ ಕಲಿಯಲು ಸುಲಭ ಮಾರ್ಗ

 • ನಿಮ್ಮ ಭಾಷೆಯ ಪದಗಳನ್ನು, ವಾಕ್ಯಗಳನ್ನು ಓದಿ ಮತ್ತು ಅವುಗಳನ್ನು ನೀವು ಕಲಿಯಲು ಇಷ್ಟಪಡುವ ಭಾಷೆಗಳಿಗೆ ಹೋಲಿಸಿ ನೋಡಿ

 • ನೀವು ಕಲಿಯಲು ಇಷ್ಟಪಡುವ ಭಾಷೆಗಳ ಪದಗಳ, ವಾಕ್ಯಗಳ ಅಥವಾ ಪ್ರಕಾಶನಗಳ ರೆಕಾರ್ಡಿಂಗ್‌ಗಳನ್ನು ಕೇಳಿಸಿಕೊಳ್ಳಿ

 • ನೀವು ಕಲಿಯಲು ಇಷ್ಟಪಡುವ ಭಾಷೆಗಳಲ್ಲಿರುವ ಸೇವೆಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಿ

 • ಚಿತ್ರಗಳನ್ನು ನೋಡಿ ಕಲಿಯಿರಿ

 • ವಾಕ್ಯಗಳನ್ನು ರಚಿಸುವಾಗ ಅದು ವ್ಯಾಕರಣಕ್ಕೆ ತಕ್ಕಂತೆ ಹೇಗೆಲ್ಲಾ ಬದಲಾಗುತ್ತೆ ಅಂತ ಗಮನಿಸಿ

 • ಅಭ್ಯಾಸ ಮಾಡ್ತಾ ಕಲಿಯಿರಿ

  • ನೋಡಿ: ನೀವು ನೋಡಿದ ಚಿತ್ರ ನಿಮಗೆ ಇಷ್ಟವಾದ ಭಾಷೆಯಲ್ಲಿ ಏನಂತ ಇದೆ ಎಂದು ಗುರುತಿಸಿ

  • ಹೊಂದಿಸಿ ನೋಡಿ: ಸರಿಯಾದ ಪದವನ್ನು ಹೋಲಿಸಿ

  • ಕೇಳಿಸಿಕೊಳ್ಳಿ: ನೀವು ಕೇಳಿಸಿಕೊಂಡ ಪದಗಳನ್ನು ಗುರುತಿಸಿ

  • ಫ್ಲ್ಯಾಶ್‌ ಕಾರ್ಡ್‌: ನೀವು ಕಾರ್ಡ್‌ನಲ್ಲಿ ನೋಡಿದ್ದಕ್ಕೆ ಏನಂತ ಹೇಳ್ತಾರೆ ಅಂತ ಗೆಸ್‌ ಮಾಡಿ

  • ಆಡಿಯೋದಿಂದ ಕಲಿಯಿರಿ: ರೆಕಾರ್ಡಿಂಗನ್ನು ಕೇಳಿಸಿಕೊಳ್ಳಿ, ನಿಲ್ಲಿಸಿ, ಪ್ರ್ಯಾಕ್ಟಿಸ್‌ ಮಾಡಿ

 

ಕಸ್ಟಮೈಸ್‌

 • ನಿಮಗಿಷ್ಟವಾದ ಚಿತ್ರಗಳನ್ನು ಮತ್ತು ವಾಕ್ಯಗಳನ್ನು ಬೇಗ ತೆರೆದು ನೋಡಲು ಕಲೆಕ್ಷನ್‌ ಮಾಡಿ ಸೇವ್‌ ಮಾಡಿಟ್ಟುಕೊಳ್ಳಿ

 • ನಿಮಗೆ ಬೇಕಾದ ಹಾಗೆ ರೆಕಾರ್ಡಿಂಗ್‌ಗಳ ಸ್ಪೀಡನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಿ

 • ರೋಮನ್‌ ಅಕ್ಷರಗಳನ್ನು ಆನ್‌ ಅಥವಾ ಆಫ್‌ ಮೋಡ್‌ನಲ್ಲಿ ಇಡಬಹುದು

 • ಆಫ್‌ಲೈನ್‌ನಲ್ಲಿ ಬಳಸಲಿಕ್ಕೆ ಬೇಕಾದುದನ್ನು ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ

 • ಕಡಿಮೆ ರೆಸಲ್ಯೂಷನ್‌ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಡಿವೈಸ್‌ನಲ್ಲಿ ಜಾಗ ಉಳಿಸಿಕೊಳ್ಳಿ

 

ರೋಮನೈಜೇಶನ್‌

ರೋಮನ್‌ ಅಕ್ಷರಗಳು, ಪದಗಳು ಮತ್ತು ವಾಕ್ಯಗಳಿಗೆ ಆಧರಿತವಾಗಿರದ ಭಾಷೆಗಳ ಬರಹವನ್ನು ರೋಮನ್‌ (ಇಂಗ್ಲಿಷ್‌) ಅಕ್ಷರಗಳಲ್ಲಿ ನೋಡಬಹುದು.

 

ಸಹಾಯ

JW ಭಾಷೆ ಆ್ಯಪ್‌ನಲ್ಲಿ ನಿಮಗೆ ಯಾವುದಾದರೂ ಸಮಸ್ಯೆ ಇದ್ದರೆ ದಯವಿಟ್ಟು ಆನ್‌ಲೈನ್‌ ಹೆಲ್ಪ್‌ ಅರ್ಜಿಯನ್ನು (online help form) ಭರ್ತಿಮಾಡಿ ಕಳುಹಿಸಿ.