ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

JW BROADCASTING

JW Broadcasting Features

JW Broadcasting Features

ಸ್ಟ್ರೀಮಿಂಗ್‌

 • ಪ್ರೋಗ್ರಾಮ್‌ ಮಾಡಿರುವುದಕ್ಕೆ ತಕ್ಕಂತೆ ವಿಡಿಯೋಗಳು ಪ್ರತಿಯೊಂದು ಚಾನೆಲಿನಲ್ಲಿ ದಿನದ 24 ಗಂಟೆಯೂ ಪ್ರಸಾರವಾಗುತ್ತಿರುತ್ತವೆ.

 • ಬೇರೆ ಬೇರೆ ಚಾನೆಲ್‌ಗಳನ್ನು ನೋಡಿ: ತಿಂಗಳ ವಿಶೇಷ ಕಾರ್ಯಕ್ರಮಗಳ ಚಾನೆಲ್‌, ಚಲನಚಿತ್ರಗಳ ಚಾನೆಲ್‌, ಮಕ್ಕಳ ಚಾನೆಲ್‌, ಯುವಜನರ ಚಾನೆಲ್‌, ಕಾರ್ಯಕ್ರಮಗಳ ಮತ್ತು ಸಮಾರಂಭಗಳ ಚಾನೆಲ್‌.

 • ಚಾನೆಲ್‌ ಗೈಡ್ ಉಪಯೋಗಿಸಿ ಮುಂದೆ ಯಾವ ವಿಡಿಯೋಗಳು ಪ್ಲೇ ಆಗುತ್ತವೆ ಎಂದು ತಿಳಿದುಕೊಳ್ಳಿ.

 

ವಿಡಿಯೋ ಆನ್‌ ಡಿಮ್ಯಾಂಡ್

 • ವಿಡಿಯೋಗಳನ್ನು ಬೇರೆ ಬೇರೆ ಗುಂಪುಗಳಾಗಿ ಮಾಡಲಾಗಿದೆ. ಒಂದೊಂದು ಗುಂಪಿನಲ್ಲಿಯೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ವಿಡಿಯೋಗಳು ಇರುತ್ತವೆ.

 • ಒಂದು ಗುಂಪಿನಲ್ಲಿ ನಿಮಗೆ ಬೇಕಾದ ವಿಡಿಯೋ ಒಂದನ್ನು ಆರಿಸಿಕೊಂಡು ಪ್ಲೇ ಮಾಡಿ ಅಥವಾ ಆ ಗುಂಪಿನಲ್ಲಿರುವ ಎಲ್ಲಾ ವಿಡಿಯೋಗಳನ್ನು ಒಂದಾದಮೇಲೆ ಒಂದರಂತೆ ನೋಡಲು ಪ್ಲೇ ಆಲ್ ಗುಂಡಿ ಒತ್ತಿ.

 • ವಿಡಿಯೋ ಪ್ಲೇ ಆಗುತ್ತಿರುವಾಗ ಇರುವ ಆಯ್ಕೆಗಳು (ನಿಲ್ಲಿಸು, ಪ್ಲೇ ಮಾಡು, ಮುಂದೆ ಹೋಗು, ಹಿಂದೆ ಹೋಗು, ಸ್ಕಿಪ್‌ ಮಾಡು).

 

ಆಡಿಯೋ

 • ಆಡಿಯೋ ವಿಭಾಗದಲ್ಲಿ ಆಡಿಯೋ ಕಾರ್ಯಕ್ರಮಗಳ ಅನೇಕ ಗುಂಪುಗಳಿವೆ (ಸಂಗೀತ, ನಾಟಕರೂಪದ ಬೈಬಲ್‌ ವಾಚನಗಳು ಇತ್ಯಾದಿ)

 • ಒಂದು ಗುಂಪಲ್ಲಿ ನಿಮಗೆ ಬೇಕಾದ ಒಂದು ಆಡಿಯೋವನ್ನು ಕೇಳಿಸಿಕೊಳ್ಳಿ ಅಥವಾ ಆ ಗುಂಪಲ್ಲಿರುವ ಎಲ್ಲಾ ಆಡಿಯೋಗಳನ್ನು ಕೇಳಿಸಿಕೊಳ್ಳಲು ಪ್ಲೇ ಆಲ್‌ ಎಂಬ ಗುಂಡಿ ಒತ್ತಿ.

 • ನೀವು ಆರಿಸಿಕೊಂಡ ಗುಂಪಲ್ಲಿರುವ ಆಡಿಯೋಗಳು ಪಟ್ಟಿಯಲ್ಲಿರುವಂತೆ ಪ್ಲೇ ಆಗದೆ ಮಧ್ಯೆ ಮಧ್ಯೆಯಿಂದ ಪ್ಲೇ ಆಗಲು ಶಫ್‌ಲ್‌ ಎಂಬ ಗುಂಡಿ ಒತ್ತಿ.

 

JW ಪ್ರಸಾರವನ್ನು ಯಾವ್ಯಾವ ಸಾಧನಗಳಲ್ಲಿ ನೋಡಬಹುದು?

 • TV.JW.ORG: ಇಂಟರ್‌ನೆಟ್‌ ಸಂಪರ್ಕ ಇರುವ ಮತ್ತು ಜಾವಾಸ್ಕ್ರಿಪ್ಟ್‌ ಕೆಲಸಮಾಡುವಂಥ ಕಂಪ್ಯೂಟರ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ tv.jw.orgಯನ್ನು ನೋಡಬಹುದು. ನಿಮ್ಮ ಕಂಪ್ಯೂಟರ್‌ ಅಥವಾ ಇತರ ಸಾಧನಗಳಲ್ಲಿ jw.org ವೆಬ್‌ಸೈಟ್‍ನ ಮೂಲಕ ವಿಡಿಯೋಗಳನ್ನು ನೋಡಲು ಆಗುವುದಾದರೆ tv.jw.orgಯನ್ನೂ ನೋಡಲು ಆಗುತ್ತದೆ.

 • ರೊಕು ಆ್ಯಪ್‌: ರೊಕು ಎಲ್‌ಟಿ, ರೊಕು 1, ರೊಕು 2, ರೊಕು 3, ರೊಕು ಸ್ಟ್ರೀಮಿಂಗ್‌ ಸ್ಟಿಕ್‌ ಬಳಸುವ ಟಿವಿಗಳಲ್ಲಿ ನೋಡಬಹುದು.

 • ಗೂಗಲ್‌ ಕ್ರೋಮ್‌ಕಾಸ್ಟ್‌: ಕ್ರೋಮ್‌ ಬ್ರೌಸರ್‌ನಿಂದ ವಿಡಿಯೋವನ್ನು ಟಿವಿಗೆ ಅಳವಡಿಸಿರುವ ಕ್ರೋಮ್‌ಕಾಸ್ಟ್‌ ಸಾಧನದ ಮೂಲಕ ಟಿವಿಗೆ ಕಳುಹಿಸಬಹುದು.