JW ಪ್ರಸಾರದಲ್ಲಿ ಸ್ಟ್ರೀಮಿಂಗ್‌ ಎಂಬ ವಿಭಾಗ ಟೆಲಿವಿಷನ್‌ ಥರ ಕೆಲಸ ಮಾಡುತ್ತದೆ. ಈ ಸ್ಟ್ರೀಮಿಂಗ್‌ ವಿಭಾಗದಲ್ಲಿ ಅನೇಕ ಚಾನೆಲ್‌ಗಳಿವೆ. ಇವು ಮೊದಲೇ ಪ್ರೋಗ್ರಾಮ್‌ ಮಾಡಿರುವ ವಿಡಿಯೋಗಳಾಗಿವೆ. ಒಂದು ವಿಡಿಯೋ ಪ್ಲೇ ಆಗುತ್ತಿರುವಾಗ ಅದನ್ನು ಆರಂಭದಿಂದ ನೋಡಲು, ಅರ್ಧಕ್ಕೆ ನಿಲ್ಲಿಸಲು, ಸ್ವಲ್ಪ ಹಿಂದೆ ಹೋಗಿ ಅಥವಾ ಮುಂದೆ ಹೋಗಿ ವಿಡಿಯೋ ಪ್ಲೇ ಮಾಡಲು ಈ ವಿಭಾಗದಲ್ಲಿ ಆಗುವುದಿಲ್ಲ. ಆದರೆ ವಿಡಿಯೋ ಆನ್‌ ಡಿಮ್ಯಾಂಡ್ ವಿಭಾಗದಲ್ಲಿ ಈ ಆಯ್ಕೆಗಳಿವೆ.

(ಗಮನಿಸಿ: ಈ ಪುಟದಲ್ಲಿ ರೊಕು 3 ರಿಮೋಟಿನಲ್ಲಿರುವ ಗುಂಡಿಗಳ ಚಿತ್ರಗಳನ್ನು ಕೊಡಲಾಗಿದೆ. ನಿಮ್ಮ ಬಳಿ ಇರುವ ರಿಮೋಟ್‌ ಸ್ವಲ್ಪ ಬೇರೆ ರೀತಿ ಇರಬಹುದು.)

JW ಪ್ರಸಾರಸ್ಟ್ರೀಮಿಂಗ್‌ ವಿಭಾಗವನ್ನು ರೊಕುವಿನಲ್ಲಿ ನೋಡಲು ಕೆಳಗೆ ಕೊಟ್ಟಿರುವಂತೆ ಮಾಡಿ:

 ಸ್ಟ್ರೀಮಿಂಗ್‌ ವಿಭಾಗದಲ್ಲಿರುವ ಚಾನೆಲ್‌ಗಳನ್ನು ನೋಡಲು

JW ಪ್ರಸಾರದ ಮುಖಪುಟದಿಂದ ಸ್ಟ್ರೀಮಿಂಗ್‌ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ. ಆಗ ಚಾನೆಲ್‌ಗಳ ಪಟ್ಟಿ ತೆರೆದುಕೊಳ್ಳುತ್ತದೆ.

ರೊಕು ರಿಮೋಟಿನ ಎಡಗಡೆ ಮತ್ತು ಬಲಗಡೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತುತ್ತಾ ಹೋಗಿ. ಹೀಗೆ ಒತ್ತುವಾಗ ಒಂದೊಂದೇ ಚಾನೆಲ್‌ ಎದ್ದುಕಾಣುತ್ತದೆ. ಎದ್ದುಕಾಣುವಂಥ ಚಾನೆಲ್‍ನ ಚಿತ್ರದ ಜೊತೆಗೆ ಅದರ ಹೆಸರು ಮತ್ತು ಚುಟುಕಾದ ವಿವರಣೆ ಪರದೆಯ ಮಧ್ಯ ಭಾಗದಲ್ಲಿ ಬರುತ್ತದೆ. ಆ ಚಾನೆಲನ್ನು ಆಯ್ಕೆಮಾಡಲು ಓಕೆ ಗುಂಡಿಯನ್ನು ಒತ್ತಿ.

ವಿಡಿಯೋ ತೆರೆದುಕೊಳ್ಳುತ್ತಾ ಇರುವಾಗ ಚಾನೆಲ್‌ ಮೆನು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಚಾನೆಲ್‌ ಹೆಸರು, ಆ ವಿಡಿಯೋದ ಹೆಸರು ಮತ್ತು ಮುಂದೆ ಪ್ಲೇ ಆಗಲಿರುವ ಮೂರು ವಿಡಿಯೋಗಳ ಹೆಸರುಗಳು ಇರುತ್ತವೆ.

ಕಿವಿಮಾತು: ವಿಡಿಯೋ ತೆರೆದುಕೊಂಡ ಮೇಲೆ ಚಾನೆಲ್‌ ಮೆನುವನ್ನು ಮುಚ್ಚಬೇಕಾದರೆ ರೊಕು ರಿಮೋಟಿನಲ್ಲಿ ಎಡಗಡೆ ಮುಖಮಾಡಿರುವ ಬಾಣದ ಗುರುತಿರುವ ಗುಂಡಿಯನ್ನು ಒತ್ತಿ.

 ಬೇರೆ ಚಾನೆಲನ್ನು ಆಯ್ಕೆ ಮಾಡಲು

ಸ್ಟ್ರೀಮಿಂಗ್‌ ಮೂಲಕ ನೀವು ಒಂದು ಚಾನೆಲ್‌ ನೋಡುತ್ತಿರುವಾಗ ಎರಡು ರೀತಿಯಲ್ಲಿ ಚಾನೆಲ್‌ ಬದಲಾಯಿಸಬಹುದು:

  • ಚಾನೆಲನ್ನು ಆಯ್ಕೆಮಾಡುವ ಪುಟಕ್ಕೆ ವಾಪಸ್ಸು ಹೋಗಿ

    ಚಾನೆಲನ್ನು ಆಯ್ಕೆಮಾಡುವ ಪುಟಕ್ಕೆ ವಾಪಸ್ಸು ಹೋಗಲು ರೊಕು ರಿಮೋಟಿನ ಎಡಗಡೆ ಮುಖ ಮಾಡಿರುವ ಬಾಣದ ಗುರುತನ್ನು ಅಥವಾ ಬ್ಯಾಕ್‌ ಗುಂಡಿಯನ್ನು ಒತ್ತಿ. ಚಾನೆಲ್‌ಗಳು ಕಾಣಿಸಬೇಕೆಂದರೆ ಎಡಗಡೆ ಮತ್ತು ಬಲಗಡೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತುತ್ತಾ ಹೋಗಿ. ನಿಮಗೆ ಬೇಕಾದ ಚಾನೆಲನ್ನು ಆರಿಸಿಕೊಳ್ಳಲು ಓಕೆ ಗುಂಡಿಯನ್ನು ಒತ್ತಿ.

  • ಚಾನೆಲನ್ನು ಹುಡುಕಿ

    ಸ್ಟ್ರೀಮಿಂಗ್‌ ಮೂಲಕ ನೀವು ಒಂದು ಚಾನೆಲ್‌ ನೋಡುತ್ತಿರುವಾಗ ಮೇಲೆ ಮತ್ತು ಕೆಳಗೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತಿ. ಆಗ ಮುಂದಿನ ಮತ್ತು ಹಿಂದಿನ ಚಾನೆಲಿಗೆ ಹೋಗುತ್ತದೆ ಮತ್ತು ವಿಡಿಯೋ ತೆರೆದುಕೊಳ್ಳಲು ಶುರುವಾಗುತ್ತದೆ. ಜೊತೆಗೆ ಆ ಚಾನೆಲಿನ ಹೆಸರು ಮತ್ತು ತೆರೆದುಕೊಳ್ಳುತ್ತಿರುವ ವಿಡಿಯೋದ ಹೆಸರಿರುವ ಚಾನೆಲ್‌ ಮೆನು ಕಾಣಿಸಿಕೊಳ್ಳುತ್ತದೆ. ಪುನಃ ಆ ಚಾನೆಲನ್ನು ಬಿಟ್ಟು ಬೇರೆ ಚಾನೆಲಿಗೆ ಹೋಗಬೇಕಾದರೆ ಆ ವಿಡಿಯೋ ತೆರೆದುಕೊಳ್ಳುತ್ತಿರುವಾಗಲೇ ಅಥವಾ ಆ ವಿಡಿಯೋ ಪೂರ್ತಿಯಾಗಿ ತೆರೆದ ಮೇಲೆ ನಿಮ್ಮ ರಿಮೋಟಿನಲ್ಲಿ ಮೇಲೆ ಮತ್ತು ಕೆಳಗೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತಿ.

 ಚಾನೆಲ್‌ ಮೆನು ಬಳಸಲು

ಸ್ಟ್ರೀಮಿಂಗ್‌ ಮೂಲಕ ನೀವು ಒಂದು ಚಾನೆಲ್‌ ನೋಡುತ್ತಿರುವಾಗ ಚಾನೆಲ್‌ ಮೆನು ಕಾಣಿಸಿಕೊಳ್ಳಬೇಕೆಂದರೆ ನಿಮ್ಮ ರಿಮೋಟಿನಲ್ಲಿ ಬಲಗಡೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತಿ.

ಚಾನೆಲ್‌ ಮೆನುವಿನಲ್ಲಿ ಚಾನೆಲ್‌ ಹೆಸರು, ಆ ವಿಡಿಯೋದ ಹೆಸರು ಮತ್ತು ಮುಂದೆ ಪ್ಲೇ ಆಗಲಿರುವ ಮೂರು ವಿಡಿಯೋಗಳ ಹೆಸರುಗಳ ಜೊತೆಗೆ ಇನ್ನೂ ಎರಡು ಆಯ್ಕೆಗಳು ಇರುತ್ತವೆ: ಪ್ಲೇ ಫ್ರಮ್‌ ಬಿಗಿನಿಂಗ್‌ ಮತ್ತು ಪ್ಲೇ ವಿತ್‌ ಸಬ್ಟೈಟಲ್ಸ್. ಇವುಗಳಲ್ಲಿ ನಿಮಗೆ ಬೇಕಾದದ್ದನ್ನು ಎದ್ದುಕಾಣುವಂತೆ ಮಾಡಲು ಮೇಲೆ ಮತ್ತು ಕೆಳಗೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತಿ. ಆಮೇಲೆ ಅದನ್ನು ಆಯ್ಕೆ ಮಾಡಲು ಓಕೆ ಗುಂಡಿಯನ್ನು ಒತ್ತಿ.

  • ಪ್ಲೇ ಫ್ರಮ್‌ ಬಿಗಿನಿಂಗ್‌: ನೀವು ಆರಿಸಿಕೊಂಡಿರುವ ವಿಡಿಯೋವನ್ನು ವಿಡಿಯೋ ಆನ್‌ ಡಿಮ್ಯಾಂಡ್ ವಿಭಾಗದಲ್ಲಿ ನೋಡಲು ಈ ಆಯ್ಕೆಯನ್ನು ಒತ್ತಿ. ಈ ವಿಭಾಗದಲ್ಲಿ ವಿಡಿಯೋವನ್ನು ಮೊದಲಿನಿಂದ ನೋಡಬಹುದು, ಮಧ್ಯೆ ನಿಲ್ಲಿಸಬಹುದು, ಸ್ವಲ್ಪ ಹಿಂದೆ ಅಥವಾ ಮುಂದೆ ಹೋಗಿ ಸಹ ನೋಡಬಹುದು.

  • ಪ್ಲೇ ವಿತ್‌ ಸಬ್ಟೈಟಲ್ಸ್: ನೀವು ಈ ಆಯ್ಕೆಯನ್ನು ಒತ್ತಿದಾಗ ನೀವು ಆರಿಸಿಕೊಂಡಿರುವ ವಿಡಿಯೋಗೆ ಅಡಿಬರಹ ಬರುತ್ತದೆ. ಜೊತೆಗೆ ಸ್ಟ್ರೀಮಿಂಗ್‌ ಮತ್ತು ವಿಡಿಯೋ ಆನ್‌ ಡಿಮ್ಯಾಂಡ್ ವಿಭಾಗದಲ್ಲಿ ಅಡಿಬರಹ ಇರುವ ಎಲ್ಲಾ ವಿಡಿಯೋಗಳಿಗೂ ಅಡಿಬರಹ ಬರುತ್ತದೆ. ಅಡಿಬರಹ ಬೇಡವೆಂದರೆ ಚಾನೆಲ್‌ ಮೆನುಗೆ ವಾಪಸ್‌ ಹೋಗಿ ಪ್ಲೇ ವಿದೌಟ್‌ ಸಬ್ಟೈಟಲ್ಸ್ ಎಂಬ ಆಯ್ಕೆಯನ್ನು ಒತ್ತಿ. (ಗಮನಿಸಿ: ನೀವು ಆರಿಸಿಕೊಂಡಿರುವ ವಿಡಿಯೋಗೆ ಅಡಿಬರಹ ಇದ್ದರೆ ಮಾತ್ರ ಪ್ಲೇ ವಿತ್‌ ಸಬ್ಟೈಟಲ್ಸ್ ಕೆಲಸಮಾಡುತ್ತದೆ.)

ಚಾನೆಲ್‌ ಮೆನುವನ್ನು ಮುಚ್ಚಲು ಎಡಗಡೆ ಅಥವಾ ಬಲಗಡೆ ಮುಖ ಮಾಡಿರುವ ಬಾಣದ ಗುರುತನ್ನು/ಬ್ಯಾಕ್‌ ಗುಂಡಿಯನ್ನು ಒತ್ತಿ.