JW ಪ್ರಸಾರ
ರೊಕು ಪ್ಲೇಯರ್ಗೆ JW ಪ್ರಸಾರದ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿ
JW ಪ್ರಸಾರವನ್ನು ರೊಕುವಿನಲ್ಲಿ ನೋಡಬೇಕೆಂದರೆ ಮೊದಲು ರೊಕು ಪ್ಲೇಯರ್ ಅನ್ನು ಸೆಟ್ ಮಾಡಿಕೊಳ್ಳಬೇಕು ಮತ್ತು JW ಪ್ರಸಾರದ ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ರೊಕುವಿನಲ್ಲಿ JW ಪ್ರಸಾರ ನೋಡಲು ಕೆಳಗೆ ಹೇಳಿರುವಂತೆ ಮಾಡಿ:
ರೊಕು ಪ್ಲೇಯರ್ ಅನ್ನು ಸೆಟ್ ಮಾಡುವುದು ಹೇಗೆ?
ರೊಕು ಪ್ಲೇಯರ್ ಜೊತೆ ಸಲಹೆ ಸೂಚನೆಗಳು ಕೊಡಲಾಗಿರುತ್ತವೆ. ಆ ಸಲಹೆ ಸೂಚನೆಗಳನ್ನು ಬಳಸಿ ರೊಕುವನ್ನು ಸೆಟ್ ಮಾಡಿಕೊಳ್ಳಿ ಮತ್ತು ಅದನ್ನು ಇಂಟರ್ನೆಟ್ಗೆ ಅಳವಡಿಸಿಕೊಳ್ಳಿ. ಇದಾದ ಮೇಲೆ ಆನ್-ಸ್ಕ್ರೀನ್ ಸಲಹೆ ಸೂಚನೆಗಳನ್ನು ಪಾಲಿಸಿ ರೊಕುವನ್ನು ಪೂರ್ತಿಯಾಗಿ ಸೆಟ್ ಮಾಡಿಕೊಳ್ಳಿ.
ಗಮನಿಸಿ: ಆನ್-ಸ್ಕ್ರೀನ್ ಸಲಹೆ ಸೂಚನೆಗಳು ನಿಮಗೆ ಬೇಕೆಂದರೆ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ನಿಂದ ಇಂಟರ್ನೆಟ್ ಸಂಪರ್ಕ ಪಡೆದುಕೊಳ್ಳಬೇಕು.
ಹೀಗೆ ಸೆಟ್ ಮಾಡುತ್ತಿರುವಾಗ ರೊಕು ಪ್ಲೇಯರ್ ಅನ್ನು ಲಿಂಕ್ ಮಾಡಬೇಕಾಗುತ್ತದೆ. ಇದಕ್ಕಾಗಿ ನೀವು www.roku.com/link ಎಂಬ ವೆಬ್ಸೈಟನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ತೆರೆಯಿರಿ. ಆಮೇಲೆ ನಿಮ್ಮ ಟಿವಿ ಪರದೆಯ ಮೇಲೆ ಕೋಡ್ ಅನ್ನು ಟೈಪ್ ಮಾಡಬೇಕು. ನಂತರ ರೊಕು ಅಕೌಂಟ್ ಒಂದನ್ನು ತೆರೆಯಬೇಕು. ಅದನ್ನು ಮಾಡಲು ನೀವು ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಈಗಾಗಲೇ ತೆರೆದಿಟ್ಟಿರುವ ಸಲಹೆಸೂಚನೆಗಳನ್ನು ಪಾಲಿಸುತ್ತಾ ಹೋಗಿ.
ರೊಕು ಪ್ಲೇಯರ್ ನಿಮ್ಮ ಅಕೌಂಟಿಗೆ ಲಿಂಕ್ ಆದ ಮೇಲೆ ನಿಮ್ಮ ಟಿವಿ ಪರದೆ ರಿಫ್ರೆಶ್ ಆಗುತ್ತದೆ.
ಇನ್ನೂ ಹೆಚ್ಚು ಸಹಾಯ ಬೇಕೆಂದರೆ ರೊಕುವನ್ನು ಸೆಟ್ ಮಾಡುವುದು ಹೇಗೆ ಎಂದು ತೋರಿಸುವ ವಿಡಿಯೋ ನೋಡಿ.
JW ಪ್ರಸಾರವನ್ನು ಕಂಪ್ಯೂಟರ್ನಿಂದ ಇನ್ಸ್ಟಾಲ್ ಮಾಡುವುದು ಹೇಗೆ?
ರೊಕು ಪ್ಲೇಯರ್ ವಿಡಿಯೋ ಪ್ಲೇ ಮಾಡುವ ಸಾಫ್ಟ್ವೇರ್ಗಳನ್ನು (ಅಥವಾ “ಚಾನೆಲ್ಗಳನ್ನು”) ಹೊಂದಿರುವ ಸಾಧನವಾಗಿದೆ. ನಿಮಗೆ ಇಷ್ಟವಿರುವ ಚಾನೆಲ್ಗಳನ್ನು ನೀವೇ ಸೇರಿಸಿಕೊಳ್ಳಬೇಕು. ಕಂಪ್ಯೂಟರ್ ಬಳಸಿ ಹೊಸ ಚಾನೆಲ್ ಅನ್ನು ಸೇರಿಸಿಕೊಳ್ಳಬಹುದು. ಇದು ಒಂದು ವಿಧ.
ಇಂಟರ್ನೆಟ್ ಬ್ರೌಸರ್ರನ್ನು ಉಪಯೋಗಿಸಿ ರೊಕು ಚಾನೆಲ್ನಿಂದ JW ಪ್ರಸಾರವನ್ನು ತೆರೆಯಿರಿ.
ನೀವು ಈಗಾಗಲೇ ರೊಕು ಅಕೌಂಟ್ಗೆ ಲಾಗ್ ಇನ್ ಆಗಿಲ್ಲದಿದ್ದರೆ ಲಾಗ್ ಇನ್ ಆಗಿ.
ಹಸಿರು ಬಣ್ಣದ ಆ್ಯಡ್ ಚಾನೆಲ್ ಗುಂಡಿಯನ್ನು ಕ್ಲಿಕ್ಕಿಸಿ. ಟಿವಿಗೆ ಆ ಚಾನೆಲ್ ಸೇರಿದ ಮೇಲೆ ಆ್ಯಡ್ ಚಾನೆಲ್ ಗುಂಡಿ ಇದ್ದ ಕಡೆ ಇನ್ಸ್ಟಾಲ್ ಎಂಬ ಆಯ್ಕೆ ಬರುತ್ತದೆ.
ವೆಬ್ ಬ್ರೌಸರ್ನಿಂದ ಚಾನೆಲ್ ಅನ್ನು ಸೇರಿಸಿಕೊಂಡ ಮೇಲೆ ರೊಕು ಪ್ಲೇಯರ್ನಲ್ಲಿ ಚಾನೆಲ್ ಇನ್ಸ್ಟಾಲ್ ಆಗಿರುವುದಿಲ್ಲ. ಬದಲಿಗೆ ಆ ಚಾನೆಲ್ ಕ್ಯೂನಲ್ಲಿರುತ್ತದೆ. ಹಾಗಾಗಿ ಹೊಸದಾಗಿ ಸೇರಿಸಿಕೊಂಡ ಚಾನೆಲ್ಗಳನ್ನು ರೊಕು ಪ್ಲೇಯರ್ಗೆ ನೀವು ಇನ್ಸ್ಟಾಲ್ ಮಾಡಬೇಕಾಗುತ್ತದೆ.
ರೊಕು ರಿಮೋಟಿನಲ್ಲಿರುವ ಹೋಮ್ ಗುಂಡಿಯನ್ನು ಒತ್ತಿ.
ಮೇಲೆ ಅಥವಾ ಕೆಳಗೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತುತ್ತಾ ಸೆಟ್ಟಿ೦ಗ್ಸ್ಗೆ ಹೋಗಿ
ಓಕೆ ಒತ್ತಿ.
ಸೆಟ್ಟಿ೦ಗ್ಸ್ ಪುಟದಲ್ಲಿ ಸಿಸ್ಟಮ್ ಅಪ್ಡೇಟ್ ಅನ್ನು ಹುಡುಕಿ (ಮೇಲೆ ಅಥವಾ ಕೆಳಗೆ ಹುಡುಕಿ), ಅದನ್ನು ಆರಿಸಿಕೊಂಡು ಓಕೆ ಒತ್ತಿ. ಸಿಸ್ಟಮ್ ಅಪ್ಡೇಟ್ ಪುಟ ಲೋಡ್ ಆಗುತ್ತದೆ. ನಿಮ್ಮ ಟಿವಿ ಪರದೆಯ ಬಲಗಡೆಯಲ್ಲಿ ಚೆಕ್ ನೌ ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
ನಂತರ ಓಕೆ ಒತ್ತಿ.
ಆಗ ಈಗಾಗಲೇ ಕ್ಯೂನಲ್ಲಿರುವ ಚಾನೆಲ್ಗಳನ್ನು ರೊಕು ಪ್ಲೇಯರ್ ಹುಡುಕಿ ಇನ್ಸ್ಟಾಲ್ ಮಾಡುತ್ತದೆ.
ಪುನಃ ರೊಕು ಮುಖಪುಟಕ್ಕೆ ಹೋಗಿ. ಆ ಪುಟದಲ್ಲಿ ಕಾಣುವ ಮೆನುವಿನಲ್ಲಿ ಮೈ ಚಾನೆಲ್ಸ್ ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. ನಿಮ್ಮ ರೊಕು ಪ್ಲೇಯರ್ಗೆ ನೀವು ಇನ್ಸ್ಟಾಲ್ ಮಾಡಿರುವ ಎಲ್ಲ ಚಾನೆಲ್ಗಳನ್ನು ಅದು ತೋರಿಸುತ್ತದೆ. JW ಪ್ರಸಾರ ಸಹ ಅದರಲ್ಲಿ ಕಾಣಿಸುತ್ತದೆ.
jw.org ಚಿಹ್ನೆ ಹುಡುಕಿ ಓಕೆ ಒತ್ತಿ. ಆಗ JW ಪ್ರಸಾರ ಪ್ಲೇ ಆಗಲು ಶುರುವಾಗುತ್ತದೆ.
JW ಪ್ರಸಾರವನ್ನು ರೊಕುವಿನಿಂದ ಇನ್ಸ್ಟಾಲ್ ಮಾಡುವುದು ಹೇಗೆ?
ರೊಕು ಪ್ಲೇಯರ್ನಿಂದ ನೇರವಾಗಿ ಸಹ JW ಪ್ರಸಾರವನ್ನು ಇನ್ಸ್ಟಾಲ್ ಮಾಡಬಹುದು.
ರೊಕು ಮುಖಪುಟಕ್ಕೆ ಹೋಗಿ.
ರೊಕು ರಿಮೋಟಿನಲ್ಲಿರುವ ಮೇಲೆ ಅಥವಾ ಕೆಳಗೆ ಮುಖ ಮಾಡಿರುವ ಬಾಣವನ್ನು ಒತ್ತುತ್ತಾ ಸರ್ಚ್ ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
ಓಕೆ ಒತ್ತಿ.
ಸರ್ಚ್ ಎಂಬ ಕಡೆ ನೀವು ಟೈಪ್ ಮಾಡಿರುವ ಪದಗಳಿಗೆ ತಕ್ಕಂತೆ ರೊಕು ಫಲಿತಾಂಶಗಳನ್ನು ತೋರಿಸುತ್ತದೆ. ಅದರಲ್ಲಿ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ನಟರು, ನಿರ್ದೇಶಕರು, ಗೇಮ್ಸ್ ಮತ್ತು ಚಾನೆಲ್ಗಳೂ ಸೇರಿರುತ್ತವೆ. JW ಪ್ರಸಾರ ಒಂದು ಚಾನೆಲ್ ಆಗಿರುವುದರಿಂದ ಸರ್ಚ್ ಫಲಿತಾಂಶಗಳಲ್ಲಿ ಚಾನೆಲ್ ಚಿಹ್ನೆ ಇರುವುದನ್ನೇ ಆರಿಸಿಕೊಳ್ಳಿ. ಕೆಳಗೆ ಕೊಡಲಾಗಿರುವ ಪದಗಳನ್ನು ಟೈಪ್ ಮಾಡಿ JW ಪ್ರಸಾರವನ್ನು ಹುಡುಕಬಹುದು:
jw broadcasting
jw.org
jwtv
Jehovah
ಫಲಿತಾಂಶಗಳಲ್ಲಿ JW ಪ್ರಸಾರ ಕಾಣಿಸಿದಾಗ ಬಲಗಡೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತುತ್ತಾ ಒತ್ತುತ್ತಾ JW ಪ್ರಸಾರವನ್ನು ಆಯ್ಕೆಮಾಡಿಕೊಳ್ಳಿ. ಓಕೆ ಒತ್ತಿ. ಈಗ ಆ್ಯಡ್ ಚಾನೆಲ್ ಗುಂಡಿಯನ್ನು ಆಯ್ಕೆಮಾಡಿಕೊಳ್ಳಿ.
JW ಪ್ರಸಾರ ಇನ್ಸ್ಟಾಲ್ ಮಾಡಲು ಪುನಃ ಓಕೆ ಒತ್ತಿ.
ಈಗ JW ಪ್ರಸಾರವನ್ನು ನೋಡಲು ಗೋ ಟು ಚ್ಯಾನೆಲ್ ಆರಿಸಿಕೊಳ್ಳಿ ಅಥವಾ ರೊಕು ಮುಖಪುಟಕ್ಕೆ ವಾಪಸ್ಸು ಹೋಗಿ ಮೈ ಚಾನೆಲ್ಸ್ ಎಂಬ ಆಯ್ಕೆಯಲ್ಲಿರುವ JW ಪ್ರಸಾರ ಹುಡುಕಿ ಕ್ಲಿಕ್ ಮಾಡಿ.