ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JW ಪ್ರಸಾರ

TV.JW.ORGಯಲ್ಲಿ ಸ್ಟ್ರೀಮಿಂಗ್‌ ಮೂಲಕ ಟಿವಿ ನೋಡಿ

TV.JW.ORGಯಲ್ಲಿ ಸ್ಟ್ರೀಮಿಂಗ್‌ ಮೂಲಕ ಟಿವಿ ನೋಡಿ

tv.jw.orgಯ ಸ್ಟ್ರೀಮಿಂಗ್‌ ಎಂಬ ವಿಭಾಗ ಟೆಲಿವಿಷನ್‌ ಥರ ಕೆಲಸ ಮಾಡುತ್ತದೆ. ಈ ಸ್ಟ್ರೀಮಿಂಗ್‌ ವಿಭಾಗದಲ್ಲಿ ಅನೇಕ ಚಾನೆಲ್‌ಗಳಿವೆ. ಇವು ಮೊದಲೇ ಪ್ರೋಗ್ರಾಮ್‌ ಮಾಡಿರುವ ವಿಡಿಯೋಗಳಾಗಿವೆ. ಪ್ರಸಾರವಾಗುತ್ತಿರುವ ವಿಡಿಯೋವನ್ನು ನೋಡಲು ಸ್ಟ್ರೀಮಿಂಗ್‌ ವಿಭಾಗವನ್ನು ಒತ್ತಿ. ಒಂದು ವಿಡಿಯೋ ಪ್ಲೇ ಆಗುತ್ತಿರುವಾಗ ಅದನ್ನು ಆರಂಭದಿಂದ ನೋಡಲು, ಅರ್ಧಕ್ಕೆ ನಿಲ್ಲಿಸಲು, ಸ್ವಲ್ಪ ಹಿಂದೆ ಹೋಗಿ ಅಥವಾ ಮುಂದೆ ಹೋಗಿ ವಿಡಿಯೋ ಪ್ಲೇ ಮಾಡಲು ಈ ವಿಭಾಗದಲ್ಲಿ ಆಗುವುದಿಲ್ಲ. ಆದರೆ ಈ ಆಯ್ಕೆಗಳು ವಿಡಿಯೋ ಆನ್‌ ಡಿಮ್ಯಾಂಡ್ ವಿಭಾಗದಲ್ಲಿರುತ್ತದೆ.

ಸ್ಟ್ರೀಮಿಂಗ್‌ ವಿಭಾಗದಿಂದ ವಿಡಿಯೋ ನೋಡಲು ಕೆಳಗೆ ಕೊಟ್ಟಂತೆ ಮಾಡಿ:

 ಕಂಪ್ಯೂಟರ್‌ನಲ್ಲಿ ಸ್ಟ್ರೀಮಿಂಗ್‌ ವಿಭಾಗದಲ್ಲಿರುವ ಚಾನೆಲ್‌ಗಳನ್ನು ನೋಡಲು

ಸ್ಟ್ರೀಮಿಂಗ್‌ ಗುಂಡಿ ಒತ್ತಿ. ಆಗ ಕಂಪ್ಯೂಟರ್‌ ಸೆಟ್‌ ಮಾಡಿರುವ ಚಾನೆಲ್‌ ತೆರೆದುಕೊಳ್ಳುತ್ತದೆ. ಆ ಚಾನೆಲ್‍ನಲ್ಲಿ ಯಾವ ವಿಡಿಯೋ ಪ್ರಸಾರವಾಗುತ್ತಿದೆಯೋ ಆ ವಿಡಿಯೋ ಪ್ಲೇ ಆಗುತ್ತದೆ.

 • ವಿಡಿಯೋ ಅನ್ನು ಪರದೆಯಲ್ಲಿ ದೊಡ್ಡದಾಗಿ ನೋಡಲು ಮೌಸ್‌ ಕರ್ಸರನ್ನು ವಿಡಿಯೋ ಮೇಲೆ ತಂದು ಫುಲ್‌-ಸ್ಕ್ರೀನ್‌ ಚಿಹ್ನೆಯನ್ನು ಒತ್ತಿ.

 • ದೊಡ್ಡ ಪರದೆ ಬೇಡವಾದರೆ ನಿಮ್ಮ ಕೀಬೋರ್ಡ್‌ನಲ್ಲಿರುವ ಎಸ್ಕೇಪ್‌ ಕೀಲಿಯನ್ನು ಒತ್ತಿ ಅಥವಾ ಮೌಸ್‌ ಕರ್ಸರನ್ನು ವಿಡಿಯೋ ಮೇಲೆ ತಂದು ರೆಗ್ಯುಲರ್‌ ಸೈಜ್‌ ಚಿಹ್ನೆಯನ್ನು ಒತ್ತಿ.

 • ವಿಡಿಯೋ ರೆಸಲ್ಯೂಶನ್‌ ಅನ್ನು ಬದಲಾಯಿಸಲು ವಿಡಿಯೋ ಮೇಲೆ ಮೌಸ್‌ ಕರ್ಸರನ್ನು ತಂದು ವಿಡಿಯೋ ಸೆಟ್ಟಿ೦ಗ್ಸ್‌ ಚಿಹ್ನೆಯ ಮೇಲಿಟ್ಟು ನಿಮಗೆ ಬೇಕಾದ ರೆಸಲ್ಯೂಶನ್‌ ಸಂಖ್ಯೆಯನ್ನು ಆಯ್ಕೆಮಾಡಿ. (ಗಮನಿಸಿ: ಇದು ಎಲ್ಲ ಬ್ರೌಸರ್‌ಗಳಲ್ಲಿ ಕೆಲಸ ಮಾಡುವುದಿಲ್ಲ.)

  ಗಮನಿಸಿ: ದೊಡ್ಡ ಸಂಖ್ಯೆಯ ವಿಡಿಯೋ ರೆಸಲ್ಯೂಶನ್‍ನಲ್ಲಿ ವಿಡಿಯೋ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ. ಈ ರೆಸಲ್ಯೂಶನ್‌ಗೆ ತುಂಬ ವೇಗವಾಗಿರುವ ಇಂಟರ್‌ನೆಟ್‌ ಸಂಪರ್ಕ ಬೇಕು. ಹಾಗಾಗಿ ನಿಮ್ಮ ಕಂಪ್ಯೂಟರ್‌ನ ಪರದೆಗೆ ಮತ್ತು ಇಂಟರ್‌ನೆಟ್‍ನ ವೇಗಕ್ಕೆ ತಕ್ಕಂಥ ರೆಸಲ್ಯೂಶನ್‌ ಅನ್ನು ಆರಿಸಿಕೊಳ್ಳಿ. (ಹೆಚ್ಚಿನ ವಿವರಗಳಿಗಾಗಿ ನೋಡಿ: ನಿಮ್ಮ ಕಂಪ್ಯೂಟರ್‌, ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನಿನ ಸೆಟ್ಟಿ೦ಗ್ಸ್‌ ಬದಲಾಯಿಸಿ)

 • ಧ್ವನಿಯ ಮಟ್ಟವನ್ನು ಹೆಚ್ಚಿಸಲು ಅಥವಾ ಕಡಿಮೆಮಾಡಲು ವಿಡಿಯೋ ಮೇಲೆ ಮೌಸ್‌ ಕರ್ಸರನ್ನು ತಂದು ವಾಲ್ಯೂಮ್‌ ಚಿಹ್ನೆಯ ಮೇಲಿಟ್ಟು ಧ್ವನಿ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು.

ಸ್ಟ್ರೀಮಿಂಗ್‌ ಚಾನೆಲಿನಲ್ಲಿ ವಿಡಿಯೋ ಒಂದು ಪ್ಲೇ ಆಗುತ್ತಿರುವಾಗ ಪ್ಲೇ ಫ್ರಮ್‌ ಬಿಗಿನಿಂಗ್‌ ಎನ್ನುವುದನ್ನು ಕ್ಲಿಕ್ಕಿಸಿದರೆ ಸ್ಟ್ರೀಮಿಂಗ್‌ ವಿಭಾಗದಿಂದ ವಿಡಿಯೋ ಆನ್‌ ಡಿಮ್ಯಾಂಡ್ ವಿಭಾಗಕ್ಕೆ ಹೋಗುತ್ತದೆ. ಅಲ್ಲಿ ನೀವು ಅದೇ ವಿಡಿಯೋವನ್ನು ಆರಂಭದಿಂದ ನೋಡಬಹುದು.

ಕಿವಿಮಾತು: ಸ್ಟ್ರೀಮಿಂಗ್‌ ವಿಭಾಗವನ್ನು ಕ್ಲಿಕ್ಕಿಸಿದ ತಕ್ಷಣ ನಿಮಗೆ ಇಷ್ಟವಾದ ಚಾನೆಲೇ ತೆರೆದುಕೊಳ್ಳಬೇಕೆಂದರೆ ಯೂಸರ್‌ ಸೆಟ್ಟಿ೦ಗ್ಸ್‌ಗೆ ಹೋಗಿ ಸೆಟ್‌ ಮಾಡಿಕೊಳ್ಳಿ.

ನೀವು ಸ್ಟ್ರೀಮಿಂಗ್‌ ಚಾನೆಲನ್ನು ಬದಲಾಯಿಸದೇ ತುಂಬ ಹೊತ್ತಿನಿಂದ ಅದೇ ಚಾನೆಲನ್ನು ನೋಡುತ್ತಿರುವುದಾದರೆ ಟಿವಿ ಪರದೆಯ ಮೇಲೆ ಒಂದು ಸಂದೇಶ ಬರುತ್ತದೆ. ನೀವು ಟಿವಿ ನೋಡುತ್ತಾ ಇದ್ದೀರಾ ಇಲ್ವಾ ಎಂದು ಖಚಿತಪಡಿಸಿಕೊಳ್ಳಲು ಈ ಸಂದೇಶ ಬರುತ್ತದೆ. ಸ್ಟ್ರೀಮ್‌ ಆಗುವ ಪ್ರತಿಯೊಂದು ವಿಡಿಯೋಗೂ ಹಣ ಖರ್ಚಾಗುತ್ತದೆ. ಹಾಗಾಗಿ ಯಾರೂ ಟಿವಿ ನೋಡುತ್ತಿಲ್ಲವಾದರೆ ಅದೇ ತನ್ನಿಂದತಾನೇ ನಿಂತುಹೋಗುತ್ತದೆ. ಒಂದುವೇಳೆ ನೀವು ನೋಡುತ್ತಾ ಇರುವುದಾದರೆ ಓಕೆ ಎನ್ನುವುದನ್ನು ಒತ್ತಿ. ಆಗ ವಿಡಿಯೋ ನೋಡುವುದನ್ನು ಮುಂದುವರಿಸಬಹುದು.

 ಮೊಬೈಲಿನಲ್ಲಿ ಸ್ಟ್ರೀಮಿಂಗ್‌ ವಿಭಾಗದಲ್ಲಿರುವ ಚಾನೆಲ್‌ಗಳನ್ನು ನೋಡಲು

ಗಮನಿಸಿ: ಮೊಬೈಲ್‌ಗಳ ಪರದೆಯ ಗಾತ್ರ ಮತ್ತು ಅದರ ಕಾರ್ಯಾಚರಣ ವ್ಯವಸ್ಥೆಗೆ (ಆಪರೇಶನ್‌ ಸಿಸ್ಟಂ) ತಕ್ಕಂತೆ ಬೇರೆ ಬೇರೆ ಮೊಬೈಲ್‌ಗಳಲ್ಲಿರುವ ಆಯ್ಕೆಗಳು ಭಿನ್ನ ಭಿನ್ನವಾಗಿರುತ್ತವೆ. ಆ ವ್ಯತ್ಯಾಸಗಳನ್ನು ಮುಂದೆ ಕೊಡಲಾಗಿದೆ.

ಟ್ಯಾಬ್ಲೆಟ್‌ಗಳಂಥ ದೊಡ್ಡ ಮೊಬೈಲ್‌ಗಳಲ್ಲಿ ಸ್ಟ್ರೀಮಿಂಗ್‌ ಎಂಬ ಗುಂಡಿಯನ್ನು ಒತ್ತಿ. ಆಗ ಮೊದಲೇ ಸೆಟ್‌ ಆಗಿರುವ ಚಾನೆಲ್‌ ಬರುತ್ತದೆ.

ಸ್ಮಾರ್ಟ್‌ಫೋನಿನಂಥ ಚಿಕ್ಕ ಮೊಬೈಲ್‌ಗಳಲ್ಲಿ ಮೆನು ಎಂಬ ಗುಂಡಿಯನ್ನು ಒತ್ತಿ. ಮೊದಲೇ ಸೆಟ್‌ ಆಗಿರುವ ಚಾನೆಲ್‌ ಬರಲು ಸ್ಟ್ರೀಮಿಂಗ್‌ ಎಂಬ ಗುಂಡಿ ಒತ್ತಿ ಅಥವಾ ಸ್ಟ್ರೀಮಿಂಗ್‌ ಎಂದು ಬರೆದಿರುವುದರ ಬಲಗಡೆಯಲ್ಲಿ ಡೌನ್‌ ಆ್ಯರೊ (ಕೆಳಗೆ ಮುಖಮಾಡಿರುವ ಬಾಣದ ಗುರುತು) ಒತ್ತಿ. ಆಗ ಒಂದು ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ಒಂದು ಚಾನೆಲನ್ನು ಆಯ್ಕೆಮಾಡಿ.

ವಿಡಿಯೋ ಪ್ಲೇ ಆಗಲು ಪ್ಲೇ ಗುಂಡಿ ಒತ್ತಿ.

 • ಆ ವಿಡಿಯೋವನ್ನು ದೊಡ್ಡ ಪರದೆಯಲ್ಲಿ ನೋಡಬೇಕೆಂದರೆ ವಿಡಿಯೋ ಮೇಲೆ ವೇಗವಾಗಿ ಎರಡು ಸಲ ಕುಟ್ಟಿ. ಅಥವಾ ಪರದೆಯ ಮೇಲೆ ಒಂದು ಸಲ ಕುಟ್ಟಿದಾಗ ಕಾಣುವ ಫುಲ್‌ ಸ್ಕ್ರೀನ್‌ ಎಂಬ ಚಿಹ್ನೆಯನ್ನು ಒತ್ತಿ.

  ಗಮನಿಸಿ: ಮೊಬೈಲಿನಲ್ಲಿ ದೊಡ್ಡ ಪರದೆ ಮಾಡಿ ವಿಡಿಯೋ ನೋಡುತ್ತಿರುವಾಗ ನಿಲ್ಲಿಸು, ಪ್ಲೇ, ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸು ಎಂಬ ಆಯ್ಕೆಗಳು ಕೆಲವೊಮ್ಮೆ ಕೆಲಸಮಾಡುವುದಿಲ್ಲ.

 • ಐಓಎಸ್‌ (iOS): ಪರದೆಯನ್ನು ಚಿಕ್ಕದು ಮಾಡಲು ವಿಡಿಯೋ ಮೇಲೆ ಒಂದು ಸಲ ಕುಟ್ಟಿದಾಗ ಕಾಣುವ ರೆಗ್ಯುಲರ್‌ ಸ್ಕ್ರೀನ್‌ ಚಿಹ್ನೆಯನ್ನು ಅಥವಾ ಡನ್‌ ಎಂಬ ಗುಂಡಿ ಒತ್ತಿ.

  ಆ್ಯಂಡ್ರಾಯ್ಡ್: ಪರದೆಯನ್ನು ಚಿಕ್ಕದು ಮಾಡಲು ವಿಡಿಯೋ ಮೇಲೆ ಒಂದು ಸಲ ಕುಟ್ಟಿದಾಗ ಕಾಣುವ ಆ್ಯಂಡ್ರಾಯ್ಡ್ ಬ್ಯಾಕ್‌ ಗುಂಡಿಯನ್ನು ಒತ್ತಿ.

  ವಿಂಡೋಸ್‌ ಮೊಬೈಲ್‌: ಪರದೆಯನ್ನು ಚಿಕ್ಕದು ಮಾಡಲು ಮೊಬೈಲಿನ ಬ್ಯಾಕ್‌ ಗುಂಡಿಯನ್ನು ಒತ್ತಿ.

 • ವಿಡಿಯೋ ರೆಸಲ್ಯೂಶನ್‌ ಅನ್ನು ಬದಲಾಯಿಸಲು ವಿಡಿಯೋ ಮೇಲೆ ಕುಟ್ಟಿ. ಆಗ ಕಾಣಿಸುವ ವಿಡಿಯೋ ಸೆಟ್ಟಿ೦ಗ್ಸ್‌ ಚಿಹ್ನೆಯನ್ನು ಒತ್ತಿ. ಅಲ್ಲಿ ನಿಮಗೆ ಬೇಕಾದ ರೆಸಲ್ಯೂಶನನ್ನು ಆಯ್ಕೆಮಾಡಿ. (ಗಮನಿಸಿ: ಎಲ್ಲ ಮೊಬೈಲ್‌ಗಳಲ್ಲಿ ಈ ಆಯ್ಕೆ ಇರಲ್ಲ.)

  ಗಮನಿಸಿ: ದೊಡ್ಡ ಸಂಖ್ಯೆಯ ವಿಡಿಯೋ ರೆಸಲ್ಯೂಶನ್‍ನಲ್ಲಿ ವಿಡಿಯೋ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತದೆ. ಈ ರೆಸಲ್ಯೂಶನ್‌ಗೆ ತುಂಬ ವೇಗವಾಗಿರುವ ಇಂಟರ್‌ನೆಟ್‌ ಸಂಪರ್ಕ ಬೇಕು. ಹಾಗಾಗಿ ನಿಮ್ಮ ಕಂಪ್ಯೂಟರ್‌ನ ಪರದೆಗೆ ಮತ್ತು ಇಂಟರ್‌ನೆಟ್‍ನ ವೇಗಕ್ಕೆ ತಕ್ಕಂಥ ರೆಸಲ್ಯೂಶನ್‌ ಅನ್ನು ಆರಿಸಿಕೊಳ್ಳಿ. (ಹೆಚ್ಚಿನ ವಿವರಗಳಿಗಾಗಿ ನೋಡಿ: ನಿಮ್ಮ ಕಂಪ್ಯೂಟರ್‌, ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನಿನ ಸೆಟ್ಟಿ೦ಗ್ಸ್‌ ಬದಲಾಯಿಸಿ)

ಮುಂದೆ ಯಾವ ವಿಡಿಯೋ ಬರುತ್ತದೆ ಎಂದು ತಿಳಿಯಲು ಚಾನೆಲ್‌ ಗೈಡ್ ಎಂಬ ಗುಂಡಿಯನ್ನು ಒತ್ತಿ. ಚಿಕ್ಕ ಮೊಬೈಲ್‌ಗಳಲ್ಲಿ ಪರದೆ ಕೆಳಗೆ ನೋಡಿ.

ಸ್ಟ್ರೀಮಿಂಗ್‌ ಚಾನೆಲಿನಲ್ಲಿ ವಿಡಿಯೋ ಒಂದು ಪ್ಲೇ ಆಗುತ್ತಿರುವಾಗ ಪ್ಲೇ ಫ್ರಮ್‌ ಬಿಗಿನಿಂಗ್‌ ಎನ್ನುವುದನ್ನು ಕ್ಲಿಕ್ಕಿಸಿದರೆ ಸ್ಟ್ರೀಮಿಂಗ್‌ ವಿಭಾಗದಿಂದ ವಿಡಿಯೋ ಆನ್‌ ಡಿಮ್ಯಾಂಡ್ ವಿಭಾಗಕ್ಕೆ ಹೋಗುತ್ತದೆ. ಅಲ್ಲಿ ನೀವು ಅದೇ ವಿಡಿಯೋವನ್ನು ಆರಂಭದಿಂದ ನೋಡಬಹುದು.

ಕಿವಿಮಾತು: ಸ್ಟ್ರೀಮಿಂಗ್‌ ವಿಭಾಗಕ್ಕೆ ಹೋದಾಗ ನಿಮಗೆ ಇಷ್ಟವಾದ ಚಾನೆಲೇ ತೆರೆದುಕೊಳ್ಳಬೇಕೆಂದರೆ ಸೆಟ್ಟಿ೦ಗ್ಸ್‌ಗೆ ಹೋಗಿ ಸೆಟ್‌ ಮಾಡಿಕೊಳ್ಳಿ.

 ಕಂಪ್ಯೂಟರ್‌ ಅಥವಾ ಟ್ಯಾಬ್ಲೆಟ್‍ನಲ್ಲಿ ಬೇರೆ ಚಾನೆಲನ್ನು ಆಯ್ಕೆ ಮಾಡಲು

ಸ್ಟ್ರೀಮಿಂಗ್‌ ವಿಭಾಗದಲ್ಲಿ ವಿಡಿಯೋ ಪ್ಲೇ ಆಗುತ್ತಿರುವಾಗ (ದೊಡ್ಡ ಪರದೆಯಲ್ಲಿ ಅಲ್ಲ) ಯಾವೆಲ್ಲ ಚಾನೆಲ್‌ಗಳು ಇವೆ ಎಂಬ ಒಂದು ಪಟ್ಟಿ ಕೆಳಗೆ ಇರುತ್ತದೆ. ನಿಮಗೆ ಬೇಕಾಗಿರುವ ಚಾನೆಲಿನ ಮೇಲೆ ಕ್ಲಿಕ್ಕಿಸಿದರೆ ಆ ಚಾನೆಲ್‌ ಪ್ಲೇ ಆಗುತ್ತದೆ.

ಕಂಪ್ಯೂಟರ್‌ ಅಥವಾ ಟ್ಯಾಬ್ಲೆಟ್‍ನಲ್ಲಿ ಪರದೆಯ ಕೆಳಗೆ ಚಾನಲ್ಗಳ ಪಟ್ಟಿ ಇರುತ್ತದೆ. ಯಾವ ಚಾನೆಲಿನಲ್ಲಿ ವಿಡಿಯೋ ಪ್ಲೇ ಆಗುತ್ತಿದೆ ಎನ್ನುವುದನ್ನು ಆ ಚಾನೆಲಿನ ಶೀರ್ಷಿಕೆಯ ಮೇಲೆ ಇರುವ ನೀಲಿ ಗೆರೆಯಿಂದ ಕಂಡುಹಿಡಿಯಬಹುದು.

ಪರದೆಯ ಎಡಗಡೆ ಅಥವಾ ಬಲಗಡೆಯಲ್ಲಿ ಇರುವ ಬಾಣದ ಗುರುತನ್ನು ಕ್ಲಿಕ್ಕಿಸಿದರೆ ಇನ್ನೂ ಹೆಚ್ಚು ಚಾನೆಲ್‌ಗಳು ಕಾಣಿಸುತ್ತವೆ. ಯಾವುದಾದರೊಂದು ಚಾನೆಲ್‌ ನೋಡಬೇಕಾದರೆ ಅದರ ಮೇಲೆ ಒತ್ತಿ.

ಆಗ ನೀವು ಆರಿಸಿಕೊಂಡಿರುವ ಚಾನೆಲಿನಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಪ್ಲೇ ಆಗುತ್ತದೆ. ಐಓಎಸ್‌ (iOS) ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಪ್ಲೇ ಚಿಹ್ನೆಯನ್ನು ಒತ್ತಿದರೆ ಮಾತ್ರ ವಿಡಿಯೋ ಪ್ಲೇ ಆಗುತ್ತದೆ.

 ಸ್ಮಾರ್ಟ್‌ಫೋನ್‍ನಲ್ಲಿ ಬೇರೆ ಚಾನೆಲನ್ನು ಆಯ್ಕೆ ಮಾಡಲು

ಸ್ಟ್ರೀಮಿಂಗ್‌ ವಿಭಾಗದಲ್ಲಿ ವಿಡಿಯೋ ಪ್ಲೇ ಆಗುತ್ತಿರುವಾಗ (ದೊಡ್ಡ ಪರದೆಯಲ್ಲಿ ಅಲ್ಲ) ಯಾವೆಲ್ಲ ಚಾನೆಲ್‌ಗಳು ಇವೆ ಎಂಬ ಒಂದು ಪಟ್ಟಿ ಕೆಳಗೆ ಇರುತ್ತದೆ. ನಿಮಗೆ ಬೇಕಾಗಿರುವ ಚಾನೆಲಿನ ಮೇಲೆ ಕ್ಲಿಕ್ಕಿಸಿದರೆ ಆ ಚಾನಲ್‌ ಪ್ಲೇ ಆಗುತ್ತದೆ.

ಸ್ಮಾರ್ಟ್‌ಫೋನ್‍ನಂಥ ಚಿಕ್ಕ ಮೊಬೈಲ್‌ಗಳು ಪೋರ್ಟ್ರೇಟ್‌ ಮೋಡ್‍ನಲ್ಲಿದ್ದಾಗ ಸ್ಟ್ರೀಮಿಂಗ್‌ ವಿಭಾಗದಲ್ಲಿ ಇರುವ ಚಾನೆಲ್‌ಗಳ ಪಟ್ಟಿಯನ್ನು ಒಂದರ ಕೆಳಗೆ ಒಂದರಂತೆ ಕೊಡಲಾಗಿರುತ್ತದೆ. ನೀವು ನೋಡುತ್ತಿರುವ ಚಾನೆಲ್‍ನ ಶೀರ್ಷಿಕೆಯ ಮೇಲೆ ನೀಲಿ ಗೆರೆ ಇರುತ್ತದೆ. ಆ ಶೀರ್ಷಿಕೆಯ ಬಲಗಡೆಯಲ್ಲಿ ಕೆಳಗೆ ಮುಖಮಾಡಿರುವ ಬಾಣದ ಗುರುತು ಇರುತ್ತದೆ. ಅದನ್ನು ಒತ್ತಿದರೆ ಪ್ಲೇ ಆಗುತ್ತಿರುವ ವಿಡಿಯೋವಿನ ಹೆಸರು ತೋರಿಸುತ್ತದೆ. ಹಾಗೇ ಆ ಪಟ್ಟಿಯ ಕೆಳಗೆ ನೋಡಿದರೆ ಮುಂದೆ ಪ್ಲೇ ಆಗಲಿರುವ ವಿಡಿಯೋಗಳು ಮತ್ತು ಅವು ಎಷ್ಟು ಗಂಟೆಗೆ ಶುರುವಾಗುತ್ತವೆ, ಎಷ್ಟು ನಿಮಿಷಗಳ ವಿಡಿಯೋ ಎಂದು ಗೊತ್ತಾಗುತ್ತದೆ.

ಚಾನೆಲ್‌ಗಳ ಪಟ್ಟಿಯನ್ನು ಮುಚ್ಚಲು ಮೇಲೆ ಮುಖಮಾಡಿರುವ ಬಾಣದ ಗುರುತನ್ನು ಒತ್ತಿ.

ಒಂದು ಚಾನೆಲಿನ ಶೀರ್ಷಿಕೆಯನ್ನು ಒತ್ತಿ. ಆ ಚಾನೆಲಿನಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಪ್ಲೇ ಆಗಲು ಪ್ಲೇ ಎಂಬ ಚಿಹ್ನೆಯನ್ನು ಒತ್ತಿ.

 ಚಾನೆಲ್‌ ಗೈಡ್ ಬಳಸಲು

ಕಂಪ್ಯೂಟರ್‌ ಅಥವಾ ಟ್ಯಾಬ್ಲೆಟ್‍ನಲ್ಲಿ ಪರದೆಯನ್ನು ದೊಡ್ಡದಾಗಿ ಮಾಡದೇ ಇದ್ದಾಗ ಚಾನೆಲ್‌ ಗೈಡ್ ಸಿಗುತ್ತದೆ. ನೀವು ಸ್ಮಾರ್ಟ್‌ಫೋನ್‍ನಂಥ ಚಿಕ್ಕ ಮೊಬೈಲನ್ನು ಬಳಸುತ್ತಿರುವುದಾದರೆ ಇದೇ ಪುಟದಲ್ಲಿ ಮೇಲೆ ಇರುವ “ಸ್ಮಾರ್ಟ್‌ಫೋನ್‍ನಲ್ಲಿ ಬೇರೆ ಚಾನೆಲನ್ನು ಆಯ್ಕೆ ಮಾಡಲು” ಎಂಬ ಉಪಶೀರ್ಷಿಕೆಯನ್ನು ನೋಡಿ.

ಚಾನೆಲ್ ಗೈಡ್ ಅನ್ನು ಕ್ಲಿಕ್ಕಿಸಿದರೆ ಯಾವೆಲ್ಲಾ ಚಾನೆಲ್‌ಗಳಿವೆ ಮತ್ತು ಪ್ರತೀ ಚಾನೆಲ್‍ನಲ್ಲಿ ಮುಂದೆ ಪ್ರಸಾರವಾಗುವ ವಿಡಿಯೋಗಳು ಯಾವುದೆಂದು ತೋರಿಸುತ್ತದೆ.

ಒಂದೊಂದು ಕಾಲಂನಲ್ಲಿ ಒಂದೊಂದು ಚಾನೆಲ್‌ ಇದೆ. ಚಾನೆಲ್‌ಗಳಲ್ಲಿ ಯಾವ ವಿಡಿಯೋ ಪ್ಲೇ ಆಗುತ್ತಿದೆಯೋ ಅದು ಕಾಲಂನಲ್ಲಿ ಮೊದಲು ಇರುತ್ತದೆ. ಅದರ ಕೆಳಗೆ ಮುಂದೆ ಪ್ಲೇ ಆಗಲಿರುವ ವಿಡಿಯೋಗಳು, ಅದು ಯಾವಾಗ ಶುರುವಾಗುತ್ತದೆ ಮತ್ತು ವಿಡಿಯೋ ಎಷ್ಟು ಸಮಯದ್ದು ಎಂದು ತೋರಿಸುತ್ತದೆ.

ಚಾನೆಲ್‌ಗಳ ಪಟ್ಟಿಯಲ್ಲಿ ಹಿಂದೆ ಮುಂದೆ ಚಲಿಸಲು ಎಡಗಡೆ ಮತ್ತು ಬಲಗಡೆ ಇರುವ ಬಾಣದ ಗುರುತನ್ನು ಒತ್ತಿ. ಚಾನೆಲ್‌ ಗೈಡ್ ಅನ್ನು ಮುಚ್ಚಲು ಮತ್ತು ನಿಮಗೆ ಬೇಕಾದ ಒಂದು ಚಾನೆಲನ್ನು ನೋಡಲು ಆ ಚಾನೆಲ್‌ ಮೇಲೆ ಕ್ಲಿಕ್ಕಿಸಿ.

ಗಮನಿಸಿ: ಚಾನೆಲ್‌ ಗೈಡಿನಲ್ಲಿ ವಿಡಿಯೋ ಪ್ಲೇ ಆಗುವ ಸಮಯ ನೀವು ವಾಸಿಸುವ ಪ್ರದೇಶದ ಸಮಯದ ಮೇಲೆ ಆಧರಿಸಿದೆ. (ಅಂದರೆ ನಿಮ್ಮ ಕಂಪ್ಯೂಟರ್‌, ಟ್ಯಾಬ್ಲೆಟ್‌ ಅಥವಾ ಮೊಬೈಲಿನಲ್ಲಿ ನೀವು ಸೆಟ್‌ ಮಾಡಿರುವ ಸಮಯ.) ಆದ್ದರಿಂದ ಒಂದೇ ಸಮಯದಲ್ಲಿ ಪ್ರಪಂಚದಲ್ಲಿರುವ ಎಲ್ಲರೂ ಒಂದೇ ವಿಡಿಯೋ ನೋಡುತ್ತಿರುವುದಿಲ್ಲ. ಉದಾಹರಣೆಗೆ, ನೀವು ಸಾಯಂಕಾಲ 7:00 ಗಂಟೆಗೆ ವಿಡಿಯೋ ನೋಡುತ್ತಿದ್ದೀರ ಅಂತ ಅಂದುಕೊಳ್ಳಿ. ಅದೇ ವಿಡಿಯೋವನ್ನು ನಿಮ್ಮ ದೇಶದ ಪೂರ್ವ ದಿಕ್ಕಿನಲ್ಲಿರುವ ದೇಶಗಳ ಜನರು ಒಂದು ತಾಸಿನ ಹಿಂದೆಯೇ ನೋಡಿ ಮುಗಿಸಿರುತ್ತಾರೆ. ಯಾಕೆಂದರೆ ಅವರಿಗೆ ಒಂದು ತಾಸಿನ ಹಿಂದೆ ಸಾಯಂಕಾಲ 7:00 ಗಂಟೆ ಆಗಿತ್ತು. ಅದೇ ರೀತಿ ನಿಮ್ಮ ದೇಶದ ಪಶ್ಚಿಮ ದಿಕ್ಕಿನಲ್ಲಿರುವ ದೇಶಗಳ ಜನರು ಅದೇ ವಿಡಿಯೋವನ್ನು ಒಂದು ತಾಸಿನ ನಂತರ ನೋಡುತ್ತಾರೆ. ಯಾಕೆಂದರೆ ಆಗ ಅವರಿಗೆ ಸಾಯಂಕಾಲ 7:00 ಗಂಟೆ ಆಗುತ್ತದೆ.

ಚಾನೆಲ್‌ ಗೈಡ್ ಅನ್ನು ಪುನಃ ಕ್ಲಿಕ್‌ ಮಾಡಿದರೆ ಚಾನೆಲ್‌ಗಳ ಪಟ್ಟಿ ಮುಚ್ಚಿ ವಿಡಿಯೋ ಕಾಣಿಸುತ್ತದೆ.