tv.jw.orgಯಲ್ಲಿ ನಿಮಗೆ ಬೇಕಾದ ಹಾಗೆ ಪರದೆ ಸೆಟ್ಟಿ೦ಗ್‌ ಮಾಡಿಕೊಳ್ಳಬಹುದು.

ಸೆಟ್ಟಿ೦ಗ್ಸ್‌ ಚಿಹ್ನೆಯನ್ನು ಒತ್ತಿ. ಹೊಸ ಸೆಟ್ಟಿ೦ಗ್‌ ಮಾಡಲು ಕೆಳಗೆ ಹೇಳಿರುವಂತೆ ಮಾಡಿ:

ಗಮನಿಸಿ: ನೀವು ಸೆಟ್ಟಿ೦ಗ್‌ ಮಾಡಿರುವ ಮೊಬೈಲ್‌ ಅಥವಾ ಇಂಟರ್‌ನೆಟ್‌ ಬ್ರೌಸರಿನಲ್ಲಿ ಮಾತ್ರ ಇದು ಕೆಲಸ ಮಾಡುತ್ತದೆ. ನಿಮ್ಮ ಬ್ರೌಸರ್‌ ಕ್ಯಾಶ್‌ ಅನ್ನು ಪೂರ್ತಿಯಾಗಿ ಅಳಿಸಿಬಿಟ್ಟರೆ ನಿಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‍ನಲ್ಲಿ ಮೊದಲೇ ಸ್ಥಾಪಿತವಾಗಿರುವ ಸೆಟ್ಟಿ೦ಗ್‍ಗೆ ವಾಪಸ್ಸು ಹೋಗುತ್ತದೆ.

 ನಿಮಗೆ ಬೇಕಾದ ವಿಡಿಯೋ ರೆಸಲ್ಯೂಶನ್‌ ಅನ್ನು ಆಯ್ಕೆಮಾಡಿ

  • ನಿಮಗೆಷ್ಟು ವಿಡಿಯೋ ರೆಸಲ್ಯೂಶನ್‌ ಬೇಕಂತ ಆರಿಸಿಕೊಳ್ಳಿ.

  • ನಿಮ್ಮ ಸೆಟ್ಟಿ೦ಗ್‌ ಅನ್ನು ಉಳಿಸಲು ಸೇವ್‌ ಎಂಬ ಗುಂಡಿ ಒತ್ತಿ.

ಮೇಲೆ ಕೊಟ್ಟಿರುವ ಸಂಖ್ಯೆಗಳ ಅರ್ಥ ಏನು? ಈ ಸಂಖ್ಯೆಗಳು ಬೇರೆ ಬೇರೆ ಗುಣಮಟ್ಟವನ್ನು ಸೂಚಿಸುತ್ತವೆ. ಅಂದರೆ ವಿಡಿಯೋ ಎಷ್ಟು ಸ್ಪಷ್ಟವಾಗಿ ಮತ್ತು ಎಷ್ಟು ದೊಡ್ಡ ಪರದೆಯಲ್ಲಿ ಕಾಣಿಸಬೇಕು ಎನ್ನುವುದನ್ನು ಸೂಚಿಸುತ್ತದೆ. ಅತೀ ಹೆಚ್ಚಿನ ಗುಣಮಟ್ಟಕ್ಕೆ ದೊಡ್ಡ ಸಂಖ್ಯೆ ಕೊಡಲಾಗಿದೆ. ದೊಡ್ಡ ಸಂಖ್ಯೆ ಇರುವ ರೆಸಲ್ಯೂಶನ್‌ಗೆ ತುಂಬ ವೇಗವಾಗಿರುವ ಇಂಟರ್‌ನೆಟ್‌ ಸಂಪರ್ಕ ಬೇಕು.

ಒಂದೊಂದು ವಿಡಿಯೋ ರೆಸಲ್ಯೂಶನಿನ ಕುರಿತು ಕೆಳಗಿನ ಚೌಕದಲ್ಲಿ ವಿವರಿಸಲಾಗಿದೆ:

ರೆಸಲ್ಯೂಶನ್‌

ವಿವರ

240p

ಅತೀ ಕಡಿಮೆ ಗುಣಮಟ್ಟದ್ದು. ಚಿಕ್ಕ ಪರದೆ ಇರುವ ಮೊಬೈಲ್‌ಗಳಿಗೆ ಇದು ಸಾಕಾಗುತ್ತದೆ.

360p

ಕಡಿಮೆ ಗುಣಮಟ್ಟದ್ದು. ಚಿಕ್ಕ ಪರದೆ ಇರುವ ಮೊಬೈಲ್‌ಗಳಿಗೆ ಇದು ಸಾಕಾಗುತ್ತದೆ.

480p

ಒಳ್ಳೇ ಗುಣಮಟ್ಟದ್ದು. ಟ್ಯಾಬ್ಲೆಟ್‌, ಕಂಪ್ಯೂಟರ್‌ ಮತ್ತು ಸ್ಟ್ಯಾಂಡರ್ಡ್‌ ಡೆಫಿನಿಶನ್‌ ಟಿವಿ ಪರದೆಗೆ ಇದು ಸಾಕಾಗುತ್ತದೆ.

720p

ಹೆಚ್ಚು ಗುಣಮಟ್ಟದ್ದು (ಹೆಚ್‌ಡಿ). ಇದು ಚೆನ್ನಾಗಿ ಕೆಲಸಮಾಡಲು ಕಂಪ್ಯೂಟರ್‌ ಪರದೆ ಕಡಿಮೆಪಕ್ಷ 1024x768ರಷ್ಟು ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರಬೇಕು ಅಥವಾ 1280x720 ರೆಸಲ್ಯೂಶನ್‌ ಇರುವ ಹೆಚ್‌ಡಿಟಿವಿ ಬೇಕು.

1080p

ತುಂಬ ಹೆಚ್ಚು ಗುಣಮಟ್ಟದ್ದು (ಹೆಚ್‌ಡಿ). 1080 ಪಿಕ್ಸೆಲ್‌ ವರ್ಟಿಕಲ್‌ ರೆಸಲ್ಯೂಶನ್‌ ಇರುವ ಕಂಪ್ಯೂಟರ್‌ಗಳಲ್ಲಿ ಅಥವಾ 1920x1080 ರೆಸಲ್ಯೂಶನ್‌ ಇರುವ ಹೆಚ್‌ಡಿಟಿವಿಯಲ್ಲಿ ಇದು ಚೆನ್ನಾಗಿ ಕೆಲಸಮಾಡುತ್ತದೆ.

ವಿಡಿಯೋ ರೆಸಲ್ಯೂಶನ್‌ ಅನ್ನು ಯಾಕೆ ಬದಲಾಯಿಸಬೇಕು? ನಿಮ್ಮ ಇಂಟರ್‌ನೆಟ್‌ ತುಂಬ ನಿಧಾನವಾಗಿ ಕೆಲಸಮಾಡುತ್ತಿರುವುದಾದರೆ ಮತ್ತು ವಿಡಿಯೋ ಪ್ಲೇ ಆಗುವಾಗ ಆಗಾಗ ಮಧ್ಯೆ ನಿಂತುಬಿಡುತ್ತಾದರೆ ಅತೀ ಕಡಿಮೆ ಗುಣಮಟ್ಟದ ರೆಸಲ್ಯೂಶನ್‌ ವಿಡಿಯೋ ಬಳಸುವುದು ಒಳ್ಳೇದು. ನಿಮ್ಮ ಕಂಪ್ಯೂಟರ್‌ ಅಥವಾ ಸಾಧನಗಳಲ್ಲಿ ಯಾವ ಸಂಖ್ಯೆ ಚೆನ್ನಾಗಿ ಕೆಲಸಮಾಡುತ್ತದೋ ಆ ಸಂಖ್ಯೆಯನ್ನು ಸೆಟ್‌ ಮಾಡಿಕೊಳ್ಳಿ. ನಿಮ್ಮ ಇಂಟರ್‌ನೆಟ್‌ ಡೇಟಾದ ಹಣ ಉಳಿತಾಯ ಮಾಡಬೇಕೆಂದರೆ ಅತೀ ಕಡಿಮೆ ಗುಣಮಟ್ಟದ ರೆಸಲ್ಯೂಶನ್‌ ಇರುವ ಸಂಖ್ಯೆಯನ್ನು ಆಯ್ಕೆಮಾಡಿಕೊಳ್ಳಿ.

ಈ ಸೆಟ್ಟಿ೦ಗ್‍ನ ಉಪಯೋಗ ಏನು? ಮೇಲೆ ಕೊಡಲಾದ ಸಂಖ್ಯೆಗಿಂತ ಹೆಚ್ಚು ರೆಸಲ್ಯೂಶನ್‌ ಇರುವ ಸಂಖ್ಯೆಯನ್ನು ಉಪಯೋಗಿಸುವುದಾದರೆ TV.JW.ORG ನಿಮ್ಮ ಕಂಪ್ಯೂಟರ್‌ಗೆ ಸ್ಟ್ರೀಮ್ ಮಾಡುವುದಿಲ್ಲ. (ನೋಡಿ: TV.JW.ORGಯಲ್ಲಿ ಸ್ಟ್ರೀಮಿಂಗ್‌ ಮೂಲಕ ಟಿವಿ ನೋಡಿ)

ನೀವು ಆಟಮ್ಯಾಟಿಕ್‌ ಸೆಟ್ಟಿ೦ಗ್‌ ಅನ್ನು ಆಯ್ಕೆಮಾಡುವುದಾದರೆ tv.jw.org ನಿಮ್ಮ ಕಂಪ್ಯೂಟರ್‌ ಅಥವಾ ನಿಮ್ಮ ಸಾಧನದ ಪರದೆಗೆ ತಕ್ಕದಾದ ವಿಡಿಯೋ ರೆಸಲ್ಯೂಶನ್‌ ಅನ್ನು ತಾನೇ ಆಯ್ಕೆಮಾಡುತ್ತದೆ.

 ವಿಡಿಯೋ ಅಡಿಬರಹ ಬೇಕಾ ಬೇಡವಾ ಎಂದು ಆಯ್ಕೆಮಾಡಿ

ಕೆಲವು ವಿಡಿಯೋಗಳನ್ನು ಅಡಿಬರಹಗಳ ಸಮೇತ ನೋಡಬಹುದು. ವಿಡಿಯೋ ಯಾವ ಭಾಷೆಯಲ್ಲಿ ಪ್ಲೇ ಆಗುತ್ತಿರುತ್ತದೋ ಅದೇ ಭಾಷೆಯಲ್ಲಿ ಅಡಿಬರಹಗಳು ಬರುತ್ತವೆ.

  • ನಿಮಗೆ ಅಡಿಬರಹ ಬೇಕಾದರೆ ಡಿಸ್‌ಪ್ಲೇ ಸಬ್ಟೈಟಲ್ಸ್ ವೆನ್‌ ಅವೈಲೆಬಲ್‌ ಎಂದು ಬರೆದಿರುವುದರ ಪಕ್ಕದಲ್ಲಿರುವ ಚೌಕಕ್ಕೆ ಗುರುತು ಹಾಕಿ.

  • ಅಡಿಬರಹ ಬೇಡವಾದರೆ ಆ ಗುರುತನ್ನು ತೆಗೆದು ಹಾಕಿ.

  • ನಿಮ್ಮ ಸೆಟ್ಟಿ೦ಗ್‌ ಅನ್ನು ಉಳಿಸಲು ಸೇವ್‌ ಎಂಬ ಗುಂಡಿಯನ್ನು ಒತ್ತಿ.

ಗಮನಿಸಿ: ಈ ಸೆಟ್ಟಿ೦ಗ್‌ ಅಡಿಬರಹ ಇರುವ ಎಲ್ಲಾ ವಿಡಿಯೋಗಳಿಗೆ ಅನ್ವಯವಾಗುತ್ತದೆ. ಸ್ಟ್ರೀಮಿಂಗ್‌ ಮೂಲಕ ಅಥವಾ ವಿಡಿಯೋ ಆನ್‌ ಡಿಮ್ಯಾಂಡ್ ಮೂಲಕ ನೀವು ನೋಡುವ ವಿಡಿಯೋಗಳಿಗೂ ಇದೇ ಸೆಟ್ಟಿ೦ಗ್‌ ಇರುತ್ತದೆ.

 ನಿಮಗೆ ಬೇಕಾದ ಸ್ಟ್ರೀಮಿಂಗ್‌ ಚಾನೆಲ್‌ ಆಯ್ಕೆಮಾಡಿ

ನೀವು ಕೊನೆಯದಾಗಿ ನೋಡಿದ ಚಾನೆಲ್‌ ಅನ್ನು ಕಂಪ್ಯೂಟರ್‌ ನೆನಪಿಟ್ಟುಕೊಂಡಿರುತ್ತದೆ. ಆದ್ದರಿಂದ ನೀವು ಸ್ಟ್ರೀಮಿಂಗ್‌ ಆಯ್ಕೆಮಾಡಿದಾಗ ಅದೇ ಚಾನೆಲ್‌ ಬರುತ್ತದೆ.

ಆದರೆ ನಿಮ್ಮ ಸಾಧನದಲ್ಲಿ ಸ್ಟ್ರೀಮಿಂಗ್‌ಗೆ ಹೋದಾಗ ಯಾವಾಗಲೂ ಒಂದೇ ಚಾನೆಲ್ ಬರಬೇಕೆಂದು ನೀವು ಇಷ್ಟಪಡಬಹುದು. ಉದಾಹರಣೆಗೆ, ನೀವು ಹೆತ್ತವರಾಗಿರುವಲ್ಲಿ ನಿಮ್ಮ ಮಕ್ಕಳು ಉಪಯೋಗಿಸುವ ಟ್ಯಾಬ್ಲೆಟ್‍ನಲ್ಲಿ tv.jw.orgಗೆ ಹೋದಾಗೆಲ್ಲ ಮಕ್ಕಳ ಚಾನೆಲ್‌ ಮಾತ್ರ ಬರಬೇಕೆಂದು ನೀವು ಇಷ್ಟಪಡಬಹುದು. ಆಗ ಏನು ಮಾಡಬಹುದು?

  • ನಿಮಗೆ ಪ್ರತೀ ಸಾರಿ ಒಂದೇ ಸ್ಟ್ರೀಮಿಂಗ್‌ ಚಾನೆಲ್‌ ತೆರೆದುಕೊಳ್ಳಬೇಕಾದರೆ, ಸೆಟ್ಟಿ೦ಗ್‌ಗೆ ಹೋಗಿ ನಿಮಗೆ ಬೇಕಾದ ಚಾನೆಲ್‌ ಅನ್ನು ಆಯ್ಕೆಮಾಡಿ.

  • ಕಂಪ್ಯೂಟರ್‌ ಸ್ಥಾಪಿಸಿರುವ ಸೆಟ್ಟಿ೦ಗ್‍ಗೆ ವಾಪಸ್ಸು ಹೋಗಬೇಕಾದರೆ ಸ್ಟಾರ್ಟ್ ವಿತ್‌ ಮೈ ಲಾಸ್ಟ್‌ ಸೆಲೆಕ್ಟಡ್ ಚಾನೆಲ್‌ ಅನ್ನು ಆಯ್ಕೆಮಾಡಿ.

  • ನಿಮ್ಮ ಸೆಟ್ಟಿ೦ಗ್‌ ಅನ್ನು ಉಳಿಸಲು ಸೇವ್‌ ಎಂಬ ಗುಂಡಿಯನ್ನು ಒತ್ತಿ.