ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

JW ಪ್ರಸಾರ

TV.JW.ORGಯಲ್ಲಿ ಆಡಿಯೋ ಕೇಳಿಸಿಕೊಳ್ಳಿ

TV.JW.ORGಯಲ್ಲಿ ಆಡಿಯೋ ಕೇಳಿಸಿಕೊಳ್ಳಿ

ಆಡಿಯೋ ವಿಭಾಗದಲ್ಲಿ ಆಡಿಯೋ ಕಾರ್ಯಕ್ರಮಗಳ ಹಲವಾರು ಗುಂಪುಗಳಿವೆ. ನಿಮಗೆ ಬೇಕಾದ ಆಡಿಯೋ ಒಂದನ್ನು ಆರಿಸಿಕೊಂಡು ಕೇಳಿಸಿಕೊಳ್ಳಬಹುದು ಅಥವಾ ಒಂದು ಗುಂಪಿನಲ್ಲಿರುವ ಎಲ್ಲ ಆಡಿಯೋಗಳನ್ನೂ ಕೇಳಿಸಿಕೊಳ್ಳಬಹುದು.

ಯಾವ್ಯಾವ ಗುಂಪುಗಳಿವೆ ಎಂದು ನೋಡಲು ಆಡಿಯೋ ಎಂಬ ಗುಂಡಿಯನ್ನು ಒತ್ತಿ. ಆಡಿಯೋ ಕಾರ್ಯಕ್ರಮ ಒಂದನ್ನು ಹುಡುಕಿ ಕೇಳಿಸಿಕೊಳ್ಳಲು ಹೀಗೆ ಮಾಡಿ:

 ಒಂದು ಆಡಿಯೋವನ್ನು ಮತ್ತು ಒಂದು ಗುಂಪಲ್ಲಿರುವ ಎಲ್ಲ ಆಡಿಯೋಗಳನ್ನು ಕೇಳಿಸಿಕೊಳ್ಳಲು ಏನು ಮಾಡಬೇಕು?

ಪ್ರತಿಯೊಂದು ಗುಂಪಿನ ಹೆಸರಿನ ಕೆಳಗೆ ಆ ಗುಂಪಲ್ಲಿರುವ ಆಡಿಯೋಗಳು ಇರುತ್ತವೆ. ಪರದೆಯನ್ನು ಕೆಳಗೆ ಸರಿಸುತ್ತಾ ಹೋದರೆ ಇನ್ನೂ ಯಾವ್ಯಾವ ಗುಂಪುಗಳಿವೆ ಎಂದು ನೋಡಬಹುದು.

ಕಂಪ್ಯೂಟರ್‌ ಅಥವಾ ಟ್ಯಾಬ್ಲೆಟ್‌: ಗುಂಪಿನಲ್ಲಿ ಇನ್ನೂ ಯಾವ್ಯಾವ ಆಡಿಯೋಗಳಿವೆ ಎಂದು ನೋಡಲು ಬಲಗಡೆ ಅಥವಾ ಎಡಗಡೆ ಇರುವ ಬಾಣದ ಗುರುತನ್ನು ಒತ್ತಿ.

ಸ್ಮಾರ್ಟ್‌ಫೋನ್‌: ಗುಂಪಿನಲ್ಲಿರುವ ಮೊದಲ ಆಡಿಯೋ ಮಾತ್ರ ಪರದೆ ಮೇಲೆ ಕಾಣಿಸುತ್ತದೆ. ಎಲ್ಲಾ ಆಡಿಯೋಗಳನ್ನು ನೋಡಲು ಸೀ ಮೋರ್‌ ಎಂಬ ಗುಂಡಿಯನ್ನು ಒತ್ತಿ.

ಆಡಿಯೋವನ್ನು ಆಯ್ಕೆಮಾಡಲು ಆ ಆಡಿಯೋದ ಚಿತ್ರವನ್ನು ಅಥವಾ ಹೆಸರನ್ನು ಒತ್ತಿ. ಪರದೆಯ ಮೇಲುಗಡೆ ಆ ಆಡಿಯೋದ ಚಿತ್ರ ಮತ್ತು ಅದರ ಹೆಸರು ಬರುತ್ತದೆ.

ಆಡಿಯೋವನ್ನು ಪ್ಲೇ ಮಾಡಲು ಪ್ಲೇ ಎಂಬ ಗುಂಡಿಯನ್ನು ಒತ್ತಿ. (ಗಮನಿಸಿ: iOS ಮತ್ತು ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಪ್ಲೇ ಎಂಬ ಗುಂಡಿ ಒತ್ತಿದ ಕೂಡಲೆ ಆಡಿಯೋ ಪ್ಲೇ ಆಗುವುದಿಲ್ಲ. ಚಿತ್ರದ ಕೆಳಗೆ ಒಂದು ಉದ್ದ ಕಡ್ಡಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿರುವ ಪ್ಲೇ ಎಂಬ ಚಿಹ್ನೆಯನ್ನು ಪುನಃ ಒತ್ತಬೇಕಾಗುತ್ತದೆ.)

  • ಕಿವಿಮಾತು: ಗುಂಪಿನಲ್ಲಿರುವ ಆಡಿಯೋಗಳನ್ನು ಒಂದೊಂದಾಗಿ ಪ್ಲೇ ಮಾಡುವ ಬದಲು ಪ್ಲೇ ಆಲ್‌ ಎಂಬ ಗುಂಡಿಯನ್ನು ಒತ್ತಿ. ಆಗ ಆ ಗುಂಪಿನಲ್ಲಿರುವ ಎಲ್ಲಾ ಆಡಿಯೋಗಳು ಒಂದಾದಮೇಲೆ ಒಂದರಂತೆ ತಾನೇ ಪ್ಲೇ ಆಗುತ್ತದೆ.

  • ಶಫ್‌ಲ್‌ ಎಂಬ ಗುಂಡಿಯನ್ನು ಒತ್ತಿದರೆ ನೀವು ಆರಿಸಿಕೊಂಡ ಗುಂಪಲ್ಲಿರುವ ಆಡಿಯೋಗಳು ಪಟ್ಟಿಯಲ್ಲಿರುವಂತೆ ಪ್ಲೇ ಆಗದೆ ಮಧ್ಯೆ ಮಧ್ಯೆಯಿಂದ ಪ್ಲೇ ಆಗುತ್ತದೆ.

    ಗಮನಿಸಿ: ಎಲ್ಲಾ ಆಡಿಯೋಗಳು ಪ್ಲೇ ಆದಮೇಲೆ ತನ್ನಷ್ಟಕ್ಕೆ ನಿಂತುಹೋಗುತ್ತದೆ.

 ಆಡಿಯೋ ಪ್ಲೇ ಆಗುತ್ತಿರುವಾಗ ಯಾವೆಲ್ಲ ಆಯ್ಕೆಗಳಿವೆ?

  • ಆಡಿಯೋವನ್ನು ನಿಲ್ಲಿಸಲು ಪಾಝ್‌ (Pause) ಚಿಹ್ನೆಯನ್ನು ಒತ್ತಿ.

  • ಆಡಿಯೋ ಪುನಃ ಪ್ಲೇ ಆಗಲು ಪ್ಲೇ ಚಿಹ್ನೆಯನ್ನು ಒತ್ತಿ.

  • ಸ್ವಲ್ಪ ಹಿಂದೆ ಹೋಗಿ ಅಥವಾ ಮುಂದೆ ಹೋಗಿ ಆಡಿಯೋ ಪ್ಲೇ ಮಾಡಲು ಚಿತ್ರದ ಕೆಳಗೆ ಕಾಣಿಸುವ ಕಡ್ಡಿಯ ಮೇಲೆ ಕ್ಲಿಕ್ಕಿಸಿ.

  • ಪ್ಲೇ ಆಲ್‌ ಅಥವಾ ಶಫ್‌ಲ್‌ ಗುಂಡಿಯನ್ನು ಒತ್ತಿದ ಮೇಲೆ ಆಡಿಯೋಗಳು ಪ್ಲೇ ಆಗುತ್ತಿರುತ್ತವೆ. ಆಗ ಸ್ಕಿಪ್‌ ಬ್ಯಾಕ್‌ ಎಂಬ ಚಿಹ್ನೆಯನ್ನು ಒತ್ತಿದರೆ ಪ್ಲೇ ಆಗುತ್ತಿದ್ದ ಆಡಿಯೋ ನಿಂತುಹೋಗಿ ಆ ಆಡಿಯೋಗೆ ಮುಂಚೆ ಯಾವ ಆಡಿಯೋ ಪ್ಲೇ ಆಗುತ್ತಿತ್ತೋ ಅದು ಆರಂಭವಾಗುತ್ತದೆ.

  • ಹಾಗೆಯೇ, ಆ ಗುಂಪಿನ ಮುಂದಿನ ಆಡಿಯೋ ಪ್ಲೇ ಆಗಲು ಸ್ಕಿಪ್‌ ಫಾರ್‌ವರ್ಡ್‌ ಚಿಹ್ನೆಯನ್ನು ಒತ್ತಿ.

  • ಧ್ವನಿಯನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ನಿಮ್ಮ ಕಂಪ್ಯೂಟರ್‌ ಅಥವಾ ಮೊಬೈಲ್‍ನಲ್ಲಿ ಲಭ್ಯವಿರುವ ಆಯ್ಕೆಗಳನ್ನು ಬಳಸಿಕೊಳ್ಳಿ.