ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JW ಪ್ರಸಾರ

JW ಪ್ರಸಾರದ ಆನ್‌ಲೈನ್‌ ಟಿವಿಯನ್ನು ಇಡೀ ಕುಟುಂಬ ಕೂತು ನೋಡಬಹುದು ಮತ್ತು ಇದು ದೇವರ ಮೇಲಿರುವ ಭಕ್ತಿಯನ್ನು ಹೆಚ್ಚಿಸುತ್ತದೆ. JW ಪ್ರಸಾರದ ಸ್ಟುಡಿಯೋದಲ್ಲಿ ನಡೆಸಲಾಗಿರುವ ಪ್ರೋಗ್ರಾಮುಗಳನ್ನು ಮತ್ತು jw.orgನಿಂದ ಆಯ್ದ ಕೆಲವು ವಿಡಿಯೋಗಳನ್ನು JW ಪ್ರಸಾರದಲ್ಲಿ ನೋಡಬಹುದು. ಇಡೀ ದಿನ ಪ್ರಸಾರವಾಗುವ ವಿಡಿಯೋಗಳನ್ನು ಸ್ಟ್ರೀಮಿಂಗ್‌ ವಿಭಾಗದಲ್ಲಿ ನೋಡಬಹುದು. ನಿಮಗೆ ಇಷ್ಟವಾದ ವಿಡಿಯೋ ಒಂದನ್ನು ಆರಿಸಿ ನೋಡಬೇಕಾದರೆ ವಿಡಿಯೋ ಆನ್‌ ಡಿಮ್ಯಾಂಡ್ನಲ್ಲಿ ನೋಡಬಹುದು. ಇನ್ನು ಆಡಿಯೋ ವಿಭಾಗಕ್ಕೆ ಹೋದರೆ ಬೇರೆ ಬೇರೆ ಆಡಿಯೋ ಪ್ರೋಗ್ರಾಮುಗಳನ್ನು ಅಂದರೆ ಸಂಗೀತ, ನಾಟಕಗಳು ಮತ್ತು ನಾಟಕರೂಪದ ಬೈಬಲ್‌ ವಾಚನವನ್ನು ಕೇಳಿಸಿಕೊಳ್ಳಬಹುದು.

JW ಪ್ರಸಾರವನ್ನು ಕಂಪ್ಯೂಟರ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ tv.jw.org ಮೂಲಕ ನೋಡಬಹುದು ಅಥವಾ ಟಿವಿಯಲ್ಲಿ ರೊಕು ಪ್ಲೇಯರ್‌ ಬಳಸಿ ನೋಡಬಹುದು.

 

TV.JW.ORGಯಲ್ಲಿ ಸ್ಟ್ರೀಮಿಂಗ್‌ ಮೂಲಕ ಟಿವಿ ನೋಡಿ

ನಿಮ್ಮ ಕಂಪ್ಯೂಟರ್‌, ಟ್ಯಾಬ್ಲೆಟ್‌, ಮೊಬೈಲಿನಲ್ಲಿ ಸ್ಟ್ರೀಮಿಂಗ್‌ ಮೂಲಕ ಟಿವಿ ನೋಡುವುದು ಹೇಗೆ ಅಂತ ಕಲಿಯಿರಿ. ಅಷ್ಟೇ ಅಲ್ಲ, ಚಾನೆಲ್‌ ಬದಲಾಯಿಸುವುದು ಹೇಗೆ ಮತ್ತು ಚಾನೆಲ್‌ ಗೈಡ್ ಅನ್ನು ಬಳಸುವುದು ಹೇಗೆ ಅಂತ ತಿಳಿದುಕೊಳ್ಳಿ.

TV.JW.ORGನಲ್ಲಿ ವಿಡಿಯೋ ಆನ್‌ ಡಿಮ್ಯಾಂಡ್ ನೋಡಿ

ಜಾಹೀರಾತು ಚಿತ್ರದ ವಿಡಿಯೋಗಳನ್ನು ನಿಮಗೆ ಬೇಕಾದ ಸಮಯದಲ್ಲಿ ನೋಡಿ. ನಿಮಗಿಷ್ಟವಾದ ವಿಡಿಯೋಗಳನ್ನು ಹುಡುಕಿ. ವಿಡಿಯೋ ಪ್ಲೇ ಆಗುತ್ತಿರುವಾಗ ನಿಲ್ಲಿಸಬಹುದು, ಸ್ವಲ್ಪ ಹಿಂದೆ ಹೋಗಿ ಅಥವಾ ಮುಂದೆ ಹೋಗಿ ವಿಡಿಯೋ ಪ್ಲೇ ಮಾಡಬಹುದು. ಒಂದೊಂದೇ ವಿಡಿಯೋಗಳನ್ನು ನೋಡಬಹುದು ಅಥವಾ ಎಲ್ಲಾ ವಿಡಿಯೋಗಳನ್ನು ಒಂದಾದಮೇಲೆ ಒಂದರಂತೆ ಪ್ಲೇ ಮಾಡಬಹುದು.

TV.JW.ORGಯಲ್ಲಿ ಆಡಿಯೋ ಕೇಳಿಸಿಕೊಳ್ಳಿ

ನಾಟಕರೂಪದ ಬೈಬಲ್‌ ವಾಚನಗಳನ್ನು ಮತ್ತು ಸಂಗೀತ ಆಲಿಸಿ ಆನಂದಿಸಿ. ಒಂದೇ ಒಂದು ಆಡಿಯೋವನ್ನೂ ಕೇಳಿಸಿಕೊಳ್ಳಬಹುದು ಅಥವಾ ಗುಂಪಲ್ಲಿರುವ ಎಲ್ಲ ಆಡಿಯೋಗಳನ್ನೂ ಕೇಳಿಸಿಕೊಳ್ಳಬಹುದು.

ನಿಮ್ಮ ಕಂಪ್ಯೂಟರ್‌, ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನಿನ ಸೆಟ್ಟಿ೦ಗ್ಸ್‌ ಬದಲಾಯಿಸುವುದು

ನಿಮಗೆ ಬೇಕಾದ ವಿಡಿಯೋ ರೆಸಲ್ಯೂಶನ್‌ ಅನ್ನು ಆಯ್ಕೆಮಾಡಿ, ವಿಡಿಯೋ ಅಡಿಬರಹ ಬೇಕಾ ಬೇಡವಾ ಎಂದು ಆಯ್ಕೆಮಾಡಿ, ನಿಮಗೆ ಬೇಕಾದ ಸ್ಟ್ರೀಮಿಂಗ್‌ ಚಾನೆಲ್‌ ಆರಿಸಿಕೊಳ್ಳಿ.

ರೊಕು ಪ್ಲೇಯರ್‌ಗೆ JW ಪ್ರಸಾರದ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿ

JW ಪ್ರಸಾರ ರೊಕು ಚಾನೆಲ್‌ ಅನ್ನು ನೋಡಲು ಮತ್ತು ಅದನ್ನು ಸೆಟ್‌ ಅಪ್‌ ಮಾಡಲು ಏನೇನು ಮಾಡಬೇಕೆಂದು ಕೊಡಲಾಗಿದೆ.

ರೊಕುವಿನಲ್ಲಿ ಸ್ಟ್ರೀಮಿಂಗ್‌ ಮೂಲಕ ಟಿವಿ ನೋಡಿ

ರೊಕು ಸಾಧನ ಬಳಸಿ JW ಪ್ರಸಾರದಲ್ಲಿ ಸ್ಟ್ರೀಮಿಂಗ್‌ ಮೂಲಕ ಟಿವಿ ನೋಡಲು ಈ ಸಲಹೆಗಳನ್ನು ಅನುಸರಿಸಿ.

ರೊಕುವಿನಲ್ಲಿ ವಿಡಿಯೋ ಆನ್‌ ಡಿಮ್ಯಾಂಡ್ ಅನ್ನು ನೋಡಿ

ರೊಕುವಿನಲ್ಲಿ ನಿಮಗೆ ಬೇಕಾದ ವಿಡಿಯೋ ಒಂದನ್ನು ಹುಡುಕಿ. ವಿಡಿಯೋ ಪ್ಲೇ ಆಗುತ್ತಿರುವಾಗ ಇರುವ ಆಯ್ಕೆಗಳನ್ನು ಬಳಸಿ. ಹೊಸ ವಿಡಿಯೋಗಳನ್ನು ಅಥವಾ ವಿಶೇಷ ವಿಡಿಯೋಗಳನ್ನು ನೋಡಿ.

ರೊಕುವಿನಲ್ಲಿ ಆಡಿಯೋ ಕೇಳಿಸಿಕೊಳ್ಳಿ

ಒಂದು ಆಡಿಯೋವನ್ನು ಅಥವಾ ಒಂದು ಗುಂಪಲ್ಲಿರುವ ಎಲ್ಲಾ ಆಡಿಯೋಗಳನ್ನು ರೊಕುವಿನಲ್ಲಿ ಕೇಳಿಸಿಕೊಳ್ಳಿ. ಆಡಿಯೋ ಪ್ಲೇ ಆಗುತ್ತಿರುವಾಗ ಇರುವ ಆಯ್ಕೆಗಳನ್ನು ಬಳಸಿ.