ಮಾಹಿತಿ ಇರುವಲ್ಲಿ ಹೋಗಲು

JW LIBRARY SIGN LANGUAGE

JW Library Sign Language Features

JW Library Sign Language Features

JW ಲೈಬ್ರರಿ ಸಂಜ್ಞೆ ಭಾಷೆ ಯೆಹೋವನ ಸಾಕ್ಷಿಗಳ ಒಂದು ಅಧಿಕೃತ ಆ್ಯಪ್‌ ಆಗಿದೆ. ಈ ಆ್ಯಪ್‍ನ ನೆರವಿನಿಂದ jw.org ವೆಬ್‌ಸೈಟಿನಿಂದ ಸಂಜ್ಞೆ ಭಾಷೆಯ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಸಂಘಟಿಸಿ, ಪ್ಲೇ ಮಾಡಬಹುದು.

ಈ ಆ್ಯಪ್‍ನಲ್ಲಿ ಬೈಬಲ್‌ ಮತ್ತು ಇತರ ಪ್ರಕಾಶನಗಳ ಸಂಜ್ಞೆ ಭಾಷೆಯ ವಿಡಿಯೋಗಳನ್ನು ನೋಡಬಹುದು. ಇವುಗಳನ್ನು ನಿಮ್ಮ ಮೊಬೈಲಿನಲ್ಲಿ ಡೌನ್‌ಲೋಡ್ ಮಾಡಿಟ್ಟುಕೊಂಡಿದ್ದರೆ ಇಂಟರ್‌ನೆಟ್‍ನ ಸಂಪರ್ಕ ಇಲ್ಲದಿದ್ದರೂ ಅವುಗಳನ್ನು ನೋಡಬಹುದು. ಈ ಆ್ಯಪ್‍ನಲ್ಲಿರುವ ರಂಗುರಂಗಿನ ಚಿತ್ರಗಳನ್ನು ನೋಡಿ ಆನಂದಿಸಲೂಬಹುದು, ಜೊತೆಗೆ ಸುಲಭವಾಗಿ ಬಳಸಲೂಬಹುದು.

 

ಸುಲಭವಾಗಿ ಬಳಸಬಹುದು

ನೂತನ ಲೋಕ ಭಾಷಾಂತರ ಬೈಬಲನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲಾಗಿಲ್ಲ. ಬಿಡುಗಡೆಯಾಗಿರುವ ಭಾಗಗಳನ್ನು ವೆಬ್‌ಸೈಟಿನಲ್ಲಿರುವ ಬೈಬಲ್‌ ಪೇಜ್‍ನಲ್ಲಿ ನೋಡಬಹುದು. ಬಿಡುಗಡೆಯಾಗದ ಭಾಗಗಳಲ್ಲಿನ ಕೆಲವು ವಚನಗಳು ಇತರ ಪ್ರಕಾಶನಗಳಲ್ಲಿ ಬಂದಿರುತ್ತವೆ. ಆ ವಚನಗಳನ್ನು ಸಹ ನೀವು ನೋಡಬಹುದು. jw.org ವೆಬ್‌ಸೈಟ್‍ನಲ್ಲಿ ಲಭ್ಯವಿರುವ ಇನ್ನಿತರ ಪ್ರಕಾಶನಗಳನ್ನು ಮತ್ತು ವಿಡಿಯೋಗಳನ್ನು ಲೈಬ್ರರಿ ಪೇಜ್‍ನಲ್ಲಿ ನೋಡಬಹುದು.

 

ಉಲ್ಲೇಖಿಸಿರುವ ವಚನಗಳನ್ನು ತಕ್ಷಣ ತೆಗೆದು ನೋಡಬಹುದು

ಸಂಜ್ಞೆ ಭಾಷೆಯ ಪ್ರಕಾಶನಗಳ ವಿಡಿಯೋವನ್ನು ವೀಕ್ಷಿಸುತ್ತಿರುವಾಗ ಅದರಲ್ಲಿ ಉಲ್ಲೇಖಿಸಲಾಗುವ ವಚನಗಳನ್ನು ನೋಡಬೇಕೆಂದಿದ್ದರೆ ಬೈಬಲ್‌ ಎಂಬ ಗುಂಡಿಯ ಮೇಲೆ ಒತ್ತಿ. ಹಾಗೇ ಒತ್ತಿದಾಗ ವಿಡಿಯೋ ಅಲ್ಲಿಗೇ ನಿಂತು ಹೋಗುತ್ತದೆ. ಬೈಬಲಿನಲ್ಲಿ ವಚನವನ್ನು ನೋಡಿದ ಮೇಲೆ ಪುನಃ ಲೈಬ್ರರಿ ಪುಟಕ್ಕೆ ಹೋಗಿ ಎಲ್ಲಿಗೆ ನಿಂತು ಹೋಗಿದೆಯೋ ಅಲ್ಲಿಂದ ವಿಡಿಯೋವನ್ನು ವೀಕ್ಷಿಸಬಹುದು.

ವಿಡಿಯೋಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಿ

ನೀವು ಯಾವೆಲ್ಲ ವಿಡಿಯೋಗಳನ್ನು ಇನ್ನೂ ಡೌನ್‌ಲೋಡ್ ಮಾಡಿಕೊಳ್ಳಲಿಲ್ಲವೋ ಅವು ಸ್ವಲ್ಪ ಮೊಬ್ಬಾಗಿ ಕಾಣುತ್ತವೆ. jw.org ವೆಬ್ ಸೈಟಿನಿಂದ ವಿಡಿಯೋವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಆ ವಿಡಿಯೋ ಮೇಲೆ ಒತ್ತಿ. “Download All” ಎಂಬ ಗುಂಡಿಯನ್ನು ಒತ್ತಿದರೆ ಆ ಪುಟದಲ್ಲಿನ ಎಲ್ಲಾ ವಿಡಿಯೋಗಳು ಡೌನ್‌ಲೋಡ್ ಆಗುತ್ತವೆ. ಯಾವುದಾದರೂ ವಿಡಿಯೋವನ್ನು ನಿಮ್ಮ ಸಾಧನದಿಂದ ಅಳಿಸಿ ಹಾಕಬೇಕೆಂದರೆ ಅದನ್ನು ಒಂದೆರಡು ಕ್ಷಣ ಒತ್ತಿ.

 

ಮೊಬೈಲ್‍ನಲ್ಲಿ ಜಾಗ ಉಳಿಸಲು ಏನು ಮಾಡಬಹುದು?

ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಉತ್ತಮ ಗುಣಮಟ್ಟದ ದೊಡ್ಡ ವಿಡಿಯೋ ಅಥವಾ ಕಡಿಮೆ ಗುಣಮಟ್ಟದ ಚಿಕ್ಕ ವಿಡಿಯೋ, ಹೀಗೆ ನಿಮಗೆ ಯಾವ ರೀತಿಯ ವಿಡಿಯೋ ಬೇಕೋ ಅದನ್ನು ಆರಿಸಿಕೊಳ್ಳಬಹುದು. ಒಂದುವೇಳೆ ನಿಮ್ಮ ಮೊಬೈಲ್‍ನಲ್ಲಿ SD ಕಾರ್ಡ್‌ನ್ನು ಹಾಕಲು ವ್ಯವಸ್ಥೆಯಿರುವುದಾದರೆ ಅಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ನೇರವಾಗಿ ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

 

ಸುಲಭವಾಗಿ ಬಳಸಬಹುದಾದ ವಿಡಿಯೋ ಪ್ಲೇಯರ್‌

ಈ ಕೆಳಗಿನ ವಿಧಾನಗಳ ಮೂಲಕ ಸುಲಭವಾಗಿ ವಿಡಿಯೋ ಪ್ಲೇಯರನ್ನು ಬಳಸಬಹುದು:

  • ಎರಡು ಕೆಲಸ ಮಾಡುವ ಒಂದೇ ಗುಂಡಿ: ವಿಡಿಯೋವನ್ನು ಪ್ಲೇ ಮಾಡಲು ಅಥವಾ ನಿಲ್ಲಿಸಲು ಈ ಗುಂಡಿಯನ್ನು ಒತ್ತಿ.

  • ಎಡಕ್ಕೆ ಸ್ವೈಪ್‌ ಮಾಡಿ: ಮುಂದಿನ ಮಾರ್ಕರ್‌ಗೆ ಹೋಗಿ.

  • ಬಲಕ್ಕೆ ಸ್ವೈಪ್‌ ಮಾಡಿ: ಹಿಂದಿನ ಮಾರ್ಕರ್‌ಗೆ ಹೋಗಿ.

  • ಮೇಲಕ್ಕೆ ಸ್ವೈಪ್‌ ಮಾಡಿ: ವಿಡಿಯೋವಿನ ವೇಗವನ್ನು ಹೆಚ್ಚಿಸಿ. (ಆಂಡ್ರಾಯ್ಡ್ಸಾಧನಗಳಲ್ಲಿ ಈ ಸೌಲಭ್ಯ ಇರುವುದಿಲ್ಲ.)

  • ಕೆಳಕ್ಕೆ ಸ್ವೈಪ್‌ ಮಾಡಿ: ವಿಡಿಯೋವಿನ ವೇಗವನ್ನು ಕಡಿಮೆ ಮಾಡಿ. (ಆಂಡ್ರಾಯ್ಡ್ ಸಾಧನಗಳಲ್ಲಿ ಈ ಸೌಲಭ್ಯ ಇರುವುದಿಲ್ಲ.)

  • ಒಂದು ಸಲ ಒತ್ತಿ: ವಿಡಿಯೋ ಪ್ಲೇಯರ್‌ ಕಂಟ್ರೋಲ್‌ಗಳನ್ನು ನೋಡಲು ಅಥವಾ ಮರೆಮಾಡಲು ಒಂದು ಸಲ ಒತ್ತಿ.

 

ಸಹಾಯ

ಸಹಾಯ

JW ಲೈಬ್ರರಿ ಸಂಜ್ಞೆ ಭಾಷೆಯ ಆ್ಯಪ್‌⁠ನ್ನು ಬಳಸುವಾಗ ತೊಂದರೆಯಾದಲ್ಲಿ, ಸಹಾಯಕ್ಕಾಗಿ ಆನ್‌ಲೈನ್‌ ಫಾರ್ಮ್‌ನ್ನು ದಯವಿಟ್ಟು ಭರ್ತಿಮಾಡಿ.